ಸಾಧು ಚಿನ್ನದ ಕನಸು ನನಸಾಗುವುದೇ: ಉತ್ಖನನ ಆರಂಭ
ದುಂಡಿಯಾ ಖೇಡಾ (ಉತ್ತರಪ್ರದೇಶ), ಅ.18- 19ನೇ ಶತಮಾನಕ್ಕೆ ಸೇರಿದ ಬರೋಬ್ಬರಿ 1,000 ಟನ್ ಚಿನ್ನದ ನಿಧಿ 'ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ದುಂಡಿಯಾ ಖೇಡಾ ಗ್ರಾಮದಲ್ಲಿದೆ' ಎಂದು ಸ್ಥಳೀಯ ಸಾಧು ಶೋಭನ ಸರಕಾರ್ ಅವರು ಹೇಳಿರುವ ಮಾತನ್ನು ನಂಬಿ ಕೇಂದ್ರ ಸರಕಾರದ ಸೂಚನೆಯಂತೆ ಭಾರತೀಯ ಸರ್ವೇಕ್ಷಣಾ ಇಲಾಖೆಯು ಆ ಸ್ಥಳದಲ್ಲಿ ಸುಮಾರು 1 ಗಂಟೆಯ ಹಿಂದೆ ಭೂ ಅಗೆತ ಆರಂಭಿಸಿದೆ.

ಬ್ರಿಟೀಷರ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ 1857ರಲ್ಲಿ ಹುತಾತ್ಮರಾದ ರಾಜಾ ರಾವ್ ರಾಮಬಕ್ಸ್ ಸಿಂಗ್ ಅವರಿಗೆ ಸೇರಿದ ಸದರಿ ಕೋಟೆ ಪ್ರದೇಶದಲ್ಲಿ (ಮೇಲಿನ ಚಿತ್ರ) ಉನ್ನತಾಧಿಕಾರಿಗಳು ಸೇರಿದಂತೆ ಟಿವಿ ಮಾಧ್ಯಮಗಳು ಈ ಪ್ರದೇಶದಲ್ಲಿ ಠಿಕಾಣಿ ಹೂಡಿದ್ದು, ಸಾವಕಾಶವಾಗಿ ಭೂ ಅಗೆತ ಶುರು ಮಾಡಿದ್ದಾರೆ.
ಉನ್ನಾವೊ ಉತ್ತರಪ್ರದೇಶದ ರಾಜಧಾನಿ ಲಖ್ನೋದಿಂದ 50 ಕಿಮೀ ದೂರದಲ್ಲಿದೆ. ಹಿಂದೂ ಧಾರ್ಮಿಕ ವಿಧಿಯಂತೆ ಸ್ಥಳದಲ್ಲಿ ಪೂಜೆ ಪುನಸ್ಕಾರಗಳು ನಡೆದಿವೆ. ಬಿಗಿ ಭದ್ರತೆಯನ್ನೂ ಹಾಕಲಾಗಿದೆ. ಇಡೀ ಕಾರ್ಯಾಚರಣೆ ಟಿವಿಗಳಲ್ಲಿ ಪ್ರಸಾರವಾಗುತ್ತಿದೆ.
ಚಿನ್ನ ಸಿಕ್ಕಿತಾ? ಅಥವಾ ಬೇರೆ ಇನ್ನೇನು ಸಿಕ್ಕಿತು ಎಂಬುದನ್ನು ತಿಳಿಸಲು ನಾವು ಕಾತುರರಾಗಿದ್ದೇವೆ. ತಾಜಾ ಮಾಹಿತಿಗಾಗಿ ಒನ್ಇಂಡಿಯಾಕನ್ನಡ ನೋಡುತ್ತಿರಿ.












Click it and Unblock the Notifications