ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಲಾಯಂ ಕೆಣಕಿದ್ದಕ್ಕೆ ಐಪಿಎಸ್ ಅಮಿತಾಬ್ ಅಮಾನತು

By Mahesh
|
Google Oneindia Kannada News

ಲಕ್ನೋ/ನವದೆಹಲಿ, ಜುಲೈ 14: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಅವರನ್ನು ಉತ್ತರಪ್ರದೇಶ ಸರ್ಕಾರ ಅಮಾನತು ಮಾಡಿದೆ. ಅಮಿತಾಬ್ ಅವರ ಮೇಲೆ ರಾಜ್ಯ ದ್ರೋಹ, ಸರ್ಕಾರಕ್ಕೆ ವಿರೋಧವಾಗಿ ನಡೆದುಕೊಂಡ ಆರೋಪ ಮಾಡಲಾಗಿದೆ.

ಸೋಮವಾರ ಅಮಿತಾಬ್ ಠಾಕೂರ್ ಅವರು ಮುಲಾಯಂ ಸಿಂಗ್ ಹಾಗೂ ಅಖಿಲೇಶ್ ಯಾದವ್ ಅವರ ದುರಾಡಳಿತದ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಲು ತೆರಳಿದ್ದರು. ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಅದರೆ, ರಾತ್ರಿ ವೇಳೆಗೆ ಅಖಿಲೇಶ್ ಯಾದವ್ ಅವರು ಸೇಡು ತೀರಿಸಿಕೊಂಡಿದ್ದು, ಅಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Amitabh Thakur suspended

ಎಸ್ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಧಮಕಿ ಹಾಕಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಶನಿವಾರ ದೂರು ದಾಖಲಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ಅಮಿತಾಬ್ ವಿರುದ್ಧ ಗೋಮತಿ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿತ್ತು. ಅಮಿತಾಭ್ ಠಾಕೂರ್ ವಿರುದ್ಧ ಘಾಜಿಯಾಬಾದ್‌ನ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಅತ್ಯಾಚಾರ ಮುಂತಾದ ಸುಳ್ಳು ಆರೋಪಗಳಲ್ಲಿ ತಮ್ಮನ್ನು ಸಿಕ್ಕಿಸಿ ಹಾಕಲು ಅಖಿಲೇಶ್ ಯಾದವ್ ಸರಕಾರದಲ್ಲಿ ಗಣಿ ಸಚಿವರಾಗಿರುವ ಗಾಯತ್ರಿ ಪ್ರಸಾದ್ ಪ್ರಜಾಪತಿ ಹಾಗೂ ಇತರ ಹಲವರು ತಮ್ಮ ವಿರುದ್ಧ ಸಂಚು ಹೂಡಿದ್ದಾರೆ ಎಂಬುದಾಗಿ ಅಮಿತಾಭ್ ಮತ್ತು ಅವರ ಸಾಮಾಜಿಕ ಕಾರ್ಯಕರ್ತೆ ಪತ್ನಿ ನೂತನ್ ಠಾಕೂರ್ ದೂರು ದಾಖಲಿಸಿದ್ದರು.

English summary
Senior IPS officer Amitabh Thakur, who is locked in a tussle with ruling Samajwadi Party(SP) chief Mulayam Singh Yadav and took his fight to the Centre, was tonight suspended by the Uttar Pradesh government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X