ಉದ್ಯೋಗದ ಬೆನ್ನು ಬೀಳಬೇಡಿ, ಟ್ಯಾಕ್ಸಿ ಅಥವಾ ರಿಕ್ಷಾ ಓಡಿಸಿ ಎಂದ ಯುಪಿ DCM: ಭುಗಿಲೆದ್ದ ಆಕ್ರೋಶ

ಲಕ್ನೋ: ಯುವಕರು ಸರ್ಕಾರಿ ಅಥವಾ ಖಾಸಗಿ ಉದ್ಯೋಗಗಳ ಹಿಂದೆ ಓಡುವುದನ್ನ ಬಿಟ್ಟು, ಇ-ರಿಕ್ಷಾ ಹಾಗೂ ಟ್ಯಾಕ್ಸಿ ಓಡಿಸುವ ಮೂಲಕ ಸ್ವಾವಲಂಬಿಗಳಾಗಬೇಕು ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ನೀಡಿರುವ ಸಲಹೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಅವರ ಈ ಹೇಳಿಕೆ ಈಗ ತೀವ್ರ ರಾಜಕೀಯ ಜಟಾಪಟಿಗೂ ಕಾರಣವಾಗಿದ್ದು, ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಸೆಪ್ಟೆಂಬರ್ 23ರಂದು ಲಕ್ನೋದಲ್ಲಿ ಭಾರತ್ ಟ್ಯಾಕ್ಸಿ ಸೇವೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವಕರಿಗೆ ಸ್ವಯಂ ಉದ್ಯೋಗದ ಪಾಠ ಮಾಡಿದರು. ಆದರೆ, ಉದ್ಯೋಗ ಸೃಷ್ಟಿಯ ಬದಲು ಯುವಕರಿಗೆ ಟ್ಯಾಕ್ಸಿ ಓಡಿಸುವಂತೆ ಪ್ರೇರೇಪಿಸಿರುವುದು ಯುವಜನತೆಯ ಕೆಂಗಣ್ಣಿಗೆ ಗುರಿಯಾಗಿದೆ.

UP Deputy CM Brajesh Pathak Asks Youth to Drive E-Rickshaws Instead of Chasing Jobs Sparks Row

ಉದ್ಯೋಗ ಬಿಟ್ಟು ರಿಕ್ಷಾ ಓಡಿಸಿ ಎಂದ ಡಿಸಿಎಂ

ಸಾಂಪ್ರದಾಯಿಕ ಉದ್ಯೋಗಗಳ ಬೆನ್ನೇರಿ ಹೋದರೆ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಯುವಕರು ಉದ್ಯೋಗದ ಬೆನ್ನು ಬೀಳಬಾರದು. ಬದಲಾಗಿ, ದಿನಕ್ಕೆ ಕೇವಲ ನಾಲ್ಕು ಗಂಟೆಗಳ ಕಾಲ ಟ್ಯಾಕ್ಸಿ ಅಥವಾ ಇ-ರಿಕ್ಷಾ ಓಡಿಸಿ, ಮಧ್ಯಾಹ್ನದ ಸಮಯವನ್ನ ನಿಮ್ಮ ಮಕ್ಕಳೊಂದಿಗೆ ಕಳೆಯಿರಿ ಎಂದು ಬ್ರಜೇಶ್ ಪಾಠಕ್ ಸಲಹೆ ನೀಡಿದರು.

ಟ್ಯಾಕ್ಸಿ ಓಡಿಸುವುದರಿಂದ ಯುವಕರಿಗೆ ತಮ್ಮ ಸಮಯದ ಮೇಲೆ ಹೆಚ್ಚಿನ ನಿಯಂತ್ರಣವಿರುತ್ತದೆ. ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಮನೆಗೆ ಬಂದು ಊಟ ಮಾಡಿ, ಮಕ್ಕಳೊಂದಿಗೆ ವಿಶ್ರಾಂತಿ ಪಡೆದು, ಮತ್ತೆ ಸಂಜೆ ಕೆಲಸಕ್ಕೆ ಮರಳಿ ರಾತ್ರಿ 10 ಗಂಟೆಯವರೆಗೆ ದುಡಿಯಬಹುದು. ಇದರಿಂದ ಹಣವೂ ಬರುತ್ತದೆ, ನೆಮ್ಮದಿಯೂ ಸಿಗುತ್ತದೆ ಎಂದರು.

ತಮ್ಮ ಮಾತನ್ನ ಸಮರ್ಥಿಸಿಕೊಳ್ಳಲು, "ಪರಾಧೀನ ಸಪ್ನೇಹು ಸುಖ್ ನಹಿ" (ಬೇರೆಯವರ ಮೇಲಿನ ಅವಲಂಬನೆಯಿಂದ ಎಂದಿಗೂ ಸುಖ ಸಿಗುವುದಿಲ್ಲ) ಎಂಬ ಹಿಂದಿ ಗಾದೆಯನ್ನ ಸಹ ಅವರು ಉಲ್ಲೇಖಿಸಿದರು.

ಸಮಾಜವಾದಿ ಪಕ್ಷದ ಟೀಕೆ

ಉಪಮುಖ್ಯಮಂತ್ರಿಯ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ವಿರೋಧ ಪಕ್ಷಗಳು ಮುಗಿಬಿದ್ದಿವೆ. ಸಮಾಜವಾದಿ ಪಕ್ಷದ ಸಂಸದ ಪುಷ್ಪೇಂದ್ರ ಸರೋಜ್ ಅವರು ಉಪಮುಖ್ಯಮಂತ್ರಿಗಳ ಕಾಲೆಳೆದಿದ್ದಾರೆ. "ಇಂದಿನ ಯುವಕರು ದೇಶವನ್ನ ಮುನ್ನಡೆಸಬೇಕಾದವರು. ಅವರನ್ನು ರಿಕ್ಷಾ ಓಡಿಸಲು ಹೇಳುವುದು ಎಷ್ಟರ ಮಟ್ಟಿಗೆ ಸರಿ? ಮಾನ್ಯ ಉಪಮುಖ್ಯಮಂತ್ರಿಗಳೇ, ಒಂದು ವೇಳೆ ನಿಮಗೆ ರಿಕ್ಷಾ ಓಡಿಸುವ ಬಗ್ಗೆ ಅಷ್ಟೊಂದು ಆಸಕ್ತಿ ಇದ್ದರೆ, ನಾನು ನಿಮಗೆ ಒಂದು ಇ-ರಿಕ್ಷಾವನ್ನ ಉಡುಗೊರೆಯಾಗಿ ಕಳುಹಿಸುತ್ತೇನೆ ಬನ್ನಿ" ಎಂದು ವ್ಯಂಗ್ಯ ಮಾಡಿದ್ದಾರೆ. ಅಲ್ಲದೇ ಯುವಕರ ಉದ್ಯೋಗದ ಕನಸುಗಳಿಗೆ ಸರ್ಕಾರ ತಣ್ಣೀರು ಎರಚುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ನೆಟ್ಟಿಗರ ಆಕ್ರೋಶ

ಕೇವಲ ರಾಜಕೀಯ ನಾಯಕರು ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲೂ ಡಿಸಿಎಂ ಹೇಳಿಕೆಗೆ ನೆಟ್ಟಿಗರ ಆಕ್ರೋಶ ವ್ಯಕ್ತವಾಗಿದೆ ನೋಡಿ. "ನಿಮ್ಮ ಮಕ್ಕಳಿಗೆ ನೀವು ಇ-ರಿಕ್ಷಾ ಕೊಡಿಸಿ, ಅವರು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲಿ. ನೀವು ಕೂಡ ರಾಜಕೀಯ ಅಧಿಕಾರವನ್ನ ಬಿಟ್ಟು ಬಂದು ಇ-ರಿಕ್ಷಾ ಓಡಿಸಿ" ಎಂದು ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಕಿಡಿಕಾರಿದ್ದಾರೆ.

ತಾವು ರಾಜಕೀಯ ಸ್ಥಾನಮಾನದ ಎಲ್ಲಾ ಐಷಾರಾಮಿ ಸೌಲಭ್ಯಗಳನ್ನ ಅನುಭವಿಸುತ್ತಾ, ಉದ್ಯೋಗಕ್ಕಾಗಿ ಹಗಲಿರುಳು ಕಷ್ಟಪಡುತ್ತಿರುವ ಯುವಜನತೆಗೆ ಇಂತಹ ಸಲಹೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಹಲವರು ಪ್ರಶ್ನಿಸಿದ್ದಾರೆ.

ಭಾರತದಾದ್ಯಂತ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ ಲಕ್ಷಾಂತರ ಯುವಕರು ಉತ್ತಮ ಭವಿಷ್ಯಕ್ಕಾಗಿ ಕಷ್ಟಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಉಪಮುಖ್ಯಮಂತ್ರಿಯೊಬ್ಬರು ಸರ್ಕಾರದ ವೈಫಲ್ಯವನ್ನ ಮುಚ್ಚಿಹಾಕಲು ಇಂತಹ ಹೇಳಿಕೆಗಳನ್ನ ನೀಡುತ್ತಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+