UP Assembly Polls: 1 ಕೋಟಿ ಮಹಿಳೆಯರಿಗೆ ಗುಡ್‌ನ್ಯೂಸ್‌; ₹1 ಲಕ್ಷದವರೆಗೆ ಬಡ್ಡಿ ಇಲ್ಲದೆ ಸಾಲ, 3 ಕಂತುಗಳಲ್ಲಿ ಹಣ!

UP Assembly Polls: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ರಾಜ್ಯದ 1 ಕೋಟಿ ಮಹಿಳೆಯರಿಗೆ ತಲಾ ₹1 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಯನ್ನು ಸರ್ಕಾರ ರೂಪಿಸುತ್ತಿದೆ.

ಉತ್ತರ ಪ್ರದೇಶ ಮಹಿಳಾ ಉದ್ಯಮಿ ಕ್ರೆಡಿಟ್ ಯೋಜನೆ ಅಡಿಯಲ್ಲಿ ಅರ್ಹ ಮಹಿಳೆಯರಿಗೆ ಸಾಲದ ಮೊತ್ತವನ್ನು ಒಂದೇ ಬಾರಿಗೆ ನೀಡದೆ. ಮೂರು ಹಂತಗಳಲ್ಲಿ ನೀಡುವ ಉದ್ದೇಶವಿದೆ. ಸಣ್ಣ ಉದ್ಯಮ ಆರಂಭಿಸಲು ಅಥವಾ ಈಗಾಗಲೇ ನಡೆಸುತ್ತಿರುವ ವ್ಯವಹಾರವನ್ನು ವಿಸ್ತರಿಸಲು ಈ ಸಾಲವನ್ನು ಬಳಸಿಕೊಳ್ಳಬಹುದಾಗಿದೆ.

UP Assembly Polls Yogi Government s Big Scheme 1 Crore Women to Get Interest-Free Loans Up to 1 Lakh

ಮೂರು ಕಂತುಗಳಲ್ಲಿ ₹1 ಲಕ್ಷ

ಪ್ರಸ್ತಾವಿತ ಯೋಜನೆಯಡಿ ಮಹಿಳೆಯರಿಗೆ ಒಟ್ಟು ₹1 ಲಕ್ಷದವರೆಗೆ ಸಾಲ ಸಿಗುವ ಸಾಧ್ಯತೆಯಿದೆ. ಅದರಂತೆ, ಮೊದಲ ಕಂತಿನ ₹20,000 ಅನ್ನು ಪಡೆದು, ಅದನ್ನು ನಿಗದಿತ ಸಮಯದಲ್ಲಿ ಸರಿಯಾಗಿ ಮರುಪಾವತಿ ಮಾಡಿದ ಮಹಿಳೆಯರು ಎರಡನೇ ಕಂತಿನ ₹30,000 ಪಡೆಯಲು ಅರ್ಹರಾಗುತ್ತಾರೆ. ಎರಡನೇ ಕಂತಿನ ಹಣವನ್ನು ಕೂಡ ಸಮಯಕ್ಕೆ ಮರುಪಾವತಿಸಿದ ಬಳಿಕ ಮೂರನೇ ಹಂತದಲ್ಲಿ ₹50,000 ಪಡೆಯುವ ಅವಕಾಶ ಇರಲಿದೆ ಎಂದು ವರದಿಗಳು ತಿಳಿಸಿವೆ. ಹೀಗಾಗಿ ಮೂರು ಕಂತುಗಳ ಮೂಲಕ ಒಟ್ಟು ₹1 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಪಡೆಯಲು ಅವಕಾಶ ಕಲ್ಪಿಸುವ ಉದ್ದೇಶ ಸರ್ಕಾರದ್ದಾಗಿದೆ.

ಯಾರಿಗೆ ಯೋಜನೆಯ ಲಾಭ?

ಈ ಯೋಜನೆಯನ್ನು ಮುಖ್ಯವಾಗಿ ಉತ್ತರ ಪ್ರದೇಶ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ (UPSRLM) ಗೆ ಸಂಬಂಧಿಸಿದ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗುತ್ತಿದೆ. ಸ್ವಸಹಾಯ ಸಂಘಗಳ (SHGs) ಮೂಲಕ ಈಗಾಗಲೇ ಸಣ್ಣ ಪ್ರಮಾಣದ ಚಟುವಟಿಕೆಗಳಲ್ಲಿ ತೊಡಗಿರುವ ಮಹಿಳೆಯರು ತಮ್ಮ ಉದ್ಯಮವನ್ನು ಮತ್ತಷ್ಟು ವಿಸ್ತರಿಸಲು ಈ ಸಾಲವನ್ನು ಬಳಸಿಕೊಳ್ಳಬಹುದು. ಹೊಸದಾಗಿ ಸಣ್ಣ ಉದ್ಯಮ ಆರಂಭಿಸಲು ಬಯಸುವ ಮಹಿಳೆಯರಿಗೂ ಯೋಜನೆ ನೆರವಾಗುವ ನಿರೀಕ್ಷೆಯಿದೆ.

ವಿಶೇಷ ಕ್ರೆಡಿಟ್ ಕಾರ್ಡ್ ನೀಡುವ ಚಿಂತನೆ

ಯೋಜನೆಯ ಭಾಗವಾಗಿ ಅರ್ಹ ಮಹಿಳೆಯರಿಗೆ ವಿಶೇಷ ಕ್ರೆಡಿಟ್ ಕಾರ್ಡ್ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ. ಈ ಕಾರ್ಡ್‌ ಅನ್ನು ಸಣ್ಣ ಉದ್ಯಮ ಆರಂಭಿಸಲು ಅಥವಾ ಈಗಾಗಲೇ ಇರುವ ಉದ್ಯಮವನ್ನು ವಿಸ್ತರಿಸಲು ಬಳಸುವ ರೀತಿಯಲ್ಲಿ ವ್ಯವಸ್ಥೆ ರೂಪಿಸುವ ಸಾಧ್ಯತೆಯಿದೆ.

ಬ್ಯಾಂಕ್‌ಗಳಿಗೆ ಈ ಸಾಲ ಸೌಲಭ್ಯಕ್ಕಾಗಿ ಪ್ರಾಥಮಿಕ ರೂಪುರೇಷೆ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಮತ್ತೊಂದೆಡೆ, ಗ್ರಾಮೀಣಾಭಿವೃದ್ಧಿ ಇಲಾಖೆ ಯೋಜನೆಯ ಅಧಿಕೃತ ಪ್ರಸ್ತಾವನೆ ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿದೆ ಎಂದು ವರದಿಗಳು ತಿಳಿಸಿವೆ.

ಮಹಿಳೆಯರಿಗೆ ಡಿಜಿಟಲ್‌ ಐಡಿ ಕಾರ್ಡ್

ಮಹಿಳಾ ಸ್ವಸಹಾಯ ಸಂಘಗಳ ಡಿಜಿಟಲ್ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಐಡಿ ಕಾರ್ಡ್‌ಗಳನ್ನು ಪರಿಚಯಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. QR ಕೋಡ್‌ ಸೇರಿದಂತೆ ಡಿಜಿಟಲ್ ಸೌಲಭ್ಯಗಳನ್ನು ಹೊಂದಿರುವ ಈ ಕಾರ್ಡ್‌ಗಳ ಮೂಲಕ ಮಹಿಳೆಯರನ್ನು ಡಿಜಿಟಲ್ ಪಾವತಿ ವ್ಯವಸ್ಥೆ, ಆನ್‌ಲೈನ್ ಮಾರ್ಕೆಟಿಂಗ್, ಇ-ಕಾಮರ್ಸ್ ಮತ್ತು ಇತರ ಹಣಕಾಸು ಸೇವೆಗಳೊಂದಿಗೆ ಸಂಪರ್ಕಿಸುವ ಉದ್ದೇಶವಿದೆ.

ಇದರಿಂದ ಮಹಿಳೆಯರು ಸಾಂಪ್ರದಾಯಿಕ ಸ್ವಸಹಾಯ ಸಂಘಗಳ ಚಟುವಟಿಕೆಗಳನ್ನು ಮೀರಿ ತಮ್ಮ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಹಾಗೂ ಮಾರುಕಟ್ಟೆಯನ್ನು ವಿಸ್ತರಿಸಲು ನೆರವಾಗಲಿದೆ ಎಂಬ ನಿರೀಕ್ಷೆಯಿದೆ.

UP Assembly Polls:100 'ಮಹಿಳಾ ಶಕ್ತಿ ಕೇಂದ್ರ' ಸ್ಥಾಪನೆ?

ಮಹಿಳೆಯರಿಗೆ ಉದ್ಯೋಗ, ಉದ್ಯಮ ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 100 'ಮಹಿಳಾ ಶಕ್ತಿ ಕೇಂದ್ರ'ಗಳನ್ನು ಸ್ಥಾಪಿಸುವ ಬಗ್ಗೆಯೂ ಉತ್ತರ ಪ್ರದೇಶ ಸರ್ಕಾರ ಪರಿಶೀಲನೆ ನಡೆಸುತ್ತಿದೆ.

ಈ ಕೇಂದ್ರಗಳ ಮೂಲಕ ಮಹಿಳೆಯರಿಗೆ ವಿವಿಧ ಸರ್ಕಾರಿ ಯೋಜನೆಗಳು, ಉದ್ಯಮ ಅವಕಾಶಗಳು, ಡಿಜಿಟಲ್ ಸೇವೆಗಳು ಮತ್ತು ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದ ನೆರವು ಒದಗಿಸುವ ಉದ್ದೇಶವಿದೆ.

UP Assembly Polls:ಕೆಶವ್ ಪ್ರಸಾದ್ ಮೌರ್ಯ ನೇತೃತ್ವದಲ್ಲಿ ಸಿದ್ಧತೆ

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೆಶವ್ ಪ್ರಸಾದ್ ಮೌರ್ಯ ವರು ಈ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಯೋಜನಾ ಭವನದಲ್ಲಿ ನಡೆದಿದ್ದು, ಯೋಜನೆಯ ರೂಪುರೇಷೆ ಮತ್ತು ಅನುಷ್ಠಾನದ ಸಿದ್ಧತೆಗಳ ಕುರಿತು ಚರ್ಚೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+