ಅನ್ ಲಾಕ್ 1.0: ಜಿಮ್ ತೆರೆಯಲು ಅನುಮತಿ ನೀಡಿದ ಸಿಕ್ಕಿಂ ಸರ್ಕಾರ
ಜೂನ್ 10: ಮಹಾಮಾರಿ ಕೋವಿಡ್-19 ತಡೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಗಿತ್ತು. ಪರಿಣಾಮ, ಹೋಟೆಲ್, ರೆಸ್ಟೋರೆಂಟ್, ಜಿಮ್, ಧಾರ್ಮಿಕ ಕೇಂದ್ರಗಳು ಬಂದ್ ಆದವು. ಆದ್ರೀಗ ಕಂಟೇನ್ಮೆಂಟ್ ಝೋನ್ ಗಳಲ್ಲಿ ಮಾತ್ರ ಲಾಕ್ ಡೌನ್ ಮುಂದುವರೆಯಲಿದ್ದು, ಉಳಿದ ಪ್ರದೇಶಗಳನ್ನು 'ಅನ್ ಲಾಕ್' ಮಾಡಲಾಗುತ್ತಿದೆ.
Recommended Video
ಸದ್ಯ ದೇಶದಾದ್ಯಂತ ಅನ್ ಲಾಕ್ 1.0 ಜಾರಿಯಲ್ಲಿದೆ. ಧಾರ್ಮಿಕ ಕೇಂದ್ರಗಳು, ಹೋಟೆಲ್, ರೆಸ್ಟೋರೆಂಟ್, ಮಾಲ್ ಗಳು ರೀ-ಓಪನ್ ಆಗಿವೆ. ಆದ್ರೆ, ಜಿಮ್ ಗಳು ಮಾತ್ರ ಎಲ್ಲೂ ತೆರೆದಿಲ್ಲ.
ಹೀಗಿರುವಾಗಲೇ, ಜಿಮ್ ಗಳನ್ನು ತೆರೆಯಲು ಸಿಕ್ಕಿಂ ಸರ್ಕಾರ ಅನುಮತಿ ನೀಡಿದೆ.
ಇಂದಿನಿಂದ (ಬುಧವಾರ, ಜೂನ್ 10) ಸಿಕ್ಕಿಂನಲ್ಲಿ ಜಿಮ್ ಗಳು ತೆರೆಯಲಿವೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 6 ಗಂಟೆಯವರೆಗೂ ಜಿಮ್ ಗಳನ್ನು ಓಪನ್ ಮಾಡಬಹುದಾಗಿದೆ. ಒಮ್ಮೆಲೆ 50% ರಷ್ಟು ಮಂದಿಗೆ ಮಾತ್ರ ಜಿಮ್ ಒಳಗೆ ಪ್ರವೇಶ ನೀಡಬೇಕು ಎಂದು ಸಿಕ್ಕಿಂ ಸರ್ಕಾರ ಸೂಚಿಸಿದೆ.

ಲಾಕ್ ಡೌನ್ ನಿಂದಾಗಿ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ಸಿಕ್ಕಿಂಗೆ ಭಾರಿ ಹೊಡೆತ ಬಿದ್ದಿತ್ತು. ಹೋಟೆಲ್, ರೆಸ್ಟೋರೆಂಟ್ ಉದ್ಯಮಕ್ಕೂ ಪೆಟ್ಟು ಬಿದ್ದಿತ್ತು.
ಇಂದಿನಿಂದ (ಬುಧವಾರ, ಜೂನ್ 10) ಸಿಕ್ಕಿಂನಲ್ಲಿ ಹೋಟೆಲ್, ರೆಸ್ಟೋರೆಂಟ್ ಗಳನ್ನೂ ತೆರೆಯಲಾಗಿದೆ. ಕೋವಿಡ್-19 ತಡೆಗಟ್ಟಲು ನೀಡಲಾಗಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ತಿಳಿಸಿದೆ.












Click it and Unblock the Notifications