ಕೇಂದ್ರ ಬಜೆಟ್ 2026 PDF: ಬಜೆಟ್‌ನ ಪೂರ್ಣ ದಾಖಲೆ ಎಲ್ಲಿ ಸಿಗುತ್ತೆ? ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿವರ
ನವದೆಹಲಿ: ಇಂದು (ಫೆಬ್ರವರಿ 1, 2026) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸುತ್ತಿದ್ದಾರೆ. ಇದು ಕೇವಲ ಸರ್ಕಾರದ ಆದಾಯ ಮತ್ತು ವೆಚ್ಚಗಳ ಲೆಕ್ಕಾಚಾರದ ಪಟ್ಟಿಯಲ್ಲ; ಬದಲಾಗಿ ಮುಂಬರುವ ವರ್ಷದಲ್ಲಿ ದೇಶದ ಆರ್ಥಿಕ ದಿಕ್ಕು ಮತ್ತು ಅಭಿವೃದ್ಧಿಯ ಆದ್ಯತೆಗಳು ನಿರ್ಧರಿಸುವ ಸಮಗ್ರ ದಾಖಲೆಯಾಗಿದೆ.
ಸಂಪನ್ಮೂಲಗಳನ್ನು ಹೇಗೆ ಸಂಗ್ರಹಿಸಲಾಗುತ್ತದೆ, ಅವುಗಳನ್ನು ಎಲ್ಲಿ ಮತ್ತು ಹೇಗೆ ಖರ್ಚು ಮಾಡಲಾಗುತ್ತದೆ ಹಾಗೂ ದೇಶವು ಯಾವ ರೀತಿಯ ಆರ್ಥಿಕ ಹಾದಿಯನ್ನು ತುಳಿಯಲಿದೆ ಎಂಬುದನ್ನು ಈ ಬಜೆಟ್ ನಿರ್ಧರಿಸುತ್ತದೆ. ಹಿಂದಿನ ವರ್ಷಗಳಂತೆ, ಆರ್ಥಿಕ ಸಮೀಕ್ಷೆಯ (Economic Survey) ನಂತರ ಬಜೆಟ್ ಮಂಡನೆಯಾಗುತ್ತಿದ್ದು, ಅದರಲ್ಲಿನ ಅಂಶಗಳನ್ನು ಆಧರಿಸಿ ಪ್ರಮುಖ ಘೋಷಣೆಗಳನ್ನು ಮಾಡಲಾಗುತ್ತದೆ.

ಬಜೆಟ್‌ನ ಪೂರ್ಣ ದಾಖಲೆ ಡೌನ್‌ಲೋಡ್ ಮಾಡುವುದು ಹೇಗೆ?
ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿ, ಇತ್ತೀಚಿನ ವರ್ಷಗಳಲ್ಲಿ ಬಜೆಟ್ ಅನ್ನು 'ಪೇಪರ್‌ಲೆಸ್' (Paperless) ಮಾಡಲಾಗಿದೆ. ಬಜೆಟ್ ಭಾಷಣ ಮುಗಿದ ತಕ್ಷಣ, ಜನಸಾಮಾನ್ಯರು, ಪತ್ರಕರ್ತರು ಮತ್ತು ವಿದ್ಯಾರ್ಥಿಗಳು ಬಜೆಟ್‌ನ ಅಧಿಕೃತ ಮತ್ತು ಪೂರ್ಣ ದಾಖಲೆಯನ್ನು ಆನ್‌ಲೈನ್ ಮೂಲಕ ಸುಲಭವಾಗಿ ಪಡೆಯಬಹುದು.
PDF ಡೌನ್‌ಲೋಡ್ ಮಾಡುವುದು ಹೇಗೆ?
1. ಬಜೆಟ್ ದಾಖಲೆಗಳನ್ನು ಪಡೆಯಲು ಸರ್ಕಾರದ ಅಧಿಕೃತ ವೆಬ್‌ಸೈಟ್ www.indiabudget.gov.in ಗೆ ಭೇಟಿ ನೀಡಿ.
2. ಅಲ್ಲಿ 'Budget Documents' ವಿಭಾಗದಲ್ಲಿ 2026-27ನೇ ಸಾಲಿನ ಆಯ್ಕೆಯನ್ನು ಕ್ಲಿಕ್ ಮಾಡಿ.
ನೀವು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾಷಣ, ಹಣಕಾಸು ಮಸೂದೆ ಮತ್ತು ಅನುದಾನದ ಬೇಡಿಕೆಗಳ ಪಿಡಿಎಫ್ ಫೈಲ್‌ಗಳನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಬಜೆಟ್‌ನ ಹಿಂದಿನ ಮತ್ತು ಪ್ರಸ್ತುತ ದಾಖಲೆಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಬಳಸಬಹುದು: https://www.indiabudget.gov.in/previous_union_budget.php
ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ.












Click it and Unblock the Notifications