Union Budget 2025: ಸೂಕ್ಷ್ಮ ಮತ್ತು ಸಮಗ್ರ ಆರ್ಥಶಾಸ್ತ್ರ ಎಂದರೇನು? ಇಲ್ಲಿದೆ ವಿವರ
ಬೆಂಗಳೂರು, ಜನವರಿ 27: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪ್ರಸಕ್ತ 2025-26 ರ ಬಜೆಟ್ ಮಂಡನೆಗೆ ಸಜ್ಜಾಗಿದೆ. ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಬಜೆಟ್ ಮಂಡಿಸಲಿದ್ದಾರೆ. ಇದು ದೇಶ ಆರ್ಥಿಕತೆಗೆ ಸಂಬಂಧಿಸಿದ್ದು, ತೆರಿಗೆ ಸಂಗ್ರಹ, ಜಿಡಿಪಿ, ಅಭಿವೃದ್ಧಿಗೆ ಹಣ ಹಂಚಿಕೆಯ ಅಂಶಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ವೈಯಕ್ತಿಕ ಆದಾಯ, ಉತ್ಪಾದನೆ, ರಾಷ್ಟ್ರೀಯ ಆದಾಯ ಉದ್ಯೋಗ ಅಂಶಗಳನ್ನು ಒಳಗೊಂಡಿದೆ.
ಈ ವಿಷಯಗಳಿಗೆ ಸಂಬಂಧಿಸಿದಂತೆ ಅರ್ಥಶಾಸ್ತ್ರವನ್ನು ಎರಡು ವಿಭಾಗಗಳಾಗಿ ವಿಂಗಡಣೆಗೊಂಡ ಸೂಕ್ಷ್ಮ ಅರ್ಥಶಾಸ್ತ್ರ ಮತ್ತು ಸ್ಥೂಲ ಅರ್ಥಶಾಸ್ತ್ರ ಏನೆಂದು ತಿಳಿಸಬೇಕಾಗುತ್ತದೆ. ಸೂಕ್ಷ್ಮ ಅರ್ಥಶಾಸ್ತ್ರವು ವ್ಯಕ್ತಿಗಳ ವೈಯಕ್ತಿ ಆದಾಯ ಮತ್ತು ವ್ಯವಹಾರ ನಿರ್ಧಾರಗಳಿಗೆ ಸಂಬಂಧಿಸಿದ ಅಧಯ್ಯನವಾಗಿದೆ. ಇನ್ನೂ ಸಮಗ್ರ (ಸ್ಥೂಲ) ಅರ್ಥಶಾಸ್ತ್ರವು ಹೆಸರೇ ಹೇಳುವಂತೆ ದೇಶ ಆರ್ಥಿಕತೆ, ಸರ್ಕಾರದ ನಿರ್ಧಾರಗಳಿಗೆ ಸಬಂಧಿಸಿದ್ದಾಗಿದೆ.

ನೋಡಲು ಈ ಸೂಕ್ಷ್ಮ-ಸ್ಥೂಲ ಅರ್ಥಶಾಸ್ತ್ರವು ವಿಭಿನ್ನವಾಗಿ ಕಂಡರು ಸಹಿತ ವಾಸ್ತವದಲ್ಲಿ ಅವುಗಳು ಒಂದಕ್ಕೊಂದು ಪರಸ್ಪರ ಅವಲಂಬಿತವಾಗಿವೆ. ಪೂರಕ ಅಂಶಗಳನ್ನು ಒಳಗೊಂಡಿವೆ.
ಜನರಿಗೆ ಅಗತ್ಯವಾದ್ದನ್ನು ಪೂರೈಕೆ ಮಾಡುವ, ಬೇಡಿಕೆ ಮತ್ತು ಬೆಲೆ ಮಟ್ಟವನ್ನು ನಿರ್ಧರಿಸುವ ಇತರ ಶಕ್ತಿಗಳ ಮೇಲೆ ಸೂಕ್ಷ್ಮ ಅರ್ಥಶಾಸ್ತ್ರ ಕೇಂದ್ರೀಕರಿಸುತ್ತದೆ. ಇವೆಲ್ಲದ್ದನ್ನು ಒಳಗೊಂಡಂತೆ ಒಟ್ಟಾರೆ ಸ್ವರೂಪದ ನಿರ್ಧರಿಸುವುದು ಸಮಗ್ರ ಆರ್ಥಿಕತೆಯ ಲಕ್ಷಣವಾಗಿದೆ. ಹೂಡಿಕೆದಾರರು ಒಂದು ರಂಗದಲ್ಲಿ ಹೂಡಿಕೆ ಮಾಡುತ್ತಾರೆ ಎಂದರೆ ಅದು ಅವರ ವೈಯಕ್ತಿಕ ನಿರ್ಧಾರದ ಮೇಲೆ ನಡೆಯುವುದರಿಂದ ಸೂಕ್ಷ್ಮ ಅರ್ಥಶಾಸ್ತ್ರ ಎನ್ನಬಹುದು. ಆದರೆ ಅದು ಸಮಗ್ರ ಆರ್ಥಿಕತೆಗೆ ಪೂರಕವಾಗಿರುತ್ತದೆ.
ಹಣ ಹಂಚಿಕೆ, ಹಣಕಾಸು ನೀತಿ ರೂಪಿಸಲು ಪೂರಕ
ಮುಖ್ಯವಾಗಿ ಸ್ಥೂಲ ಅರ್ಥಶಾಸ್ತ್ರವು ದೇಶದ ಆರ್ಥಿಕ ಹಾಗೂ ಹಣಕಾಸು ನೀತಿ ರೂಪಿಸಲು ವಿಶ್ಲೇಷಣಾತ್ಮಕ ಸಾಧನವಾಗಿ ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲದೇ ಬಜೆಟ್‌ನಲ್ಲಿ ಆಯಾ ಕ್ಷೇತ್ರಗಳಿಗೆ, ಅಭಿವೃದ್ಧಿಗೆ ಹಣ ಹಂಚಿಕೆ ಮಾಡಲಾಗುತ್ತದೆ. ಸರಕು-ಸೇವೆ, ವ್ಯಾಪಾರಗಳ ಬೆಲೆ, ತೆರಿಗೆ ಹೇರಿಕೆ-ಇಳಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದೆಲ್ಲವು ಸ್ಥೂಲ ಅರ್ಥಶಾಸ್ತ್ರದ ಅಂಶಗಳನ್ನು ಪರಿಗಣಿಸಿ ಮಾಡಲಾಗುತ್ತದೆ.

ಪೂರೈಕೆ, ಬೇಡಿಕೆ ಮತ್ತು ಸಮತೋಲನ, ಉತ್ಪಾದನಾ ಸಿದ್ಧಾಂತ, ಉತ್ಪಾದನಾ ವೆಚ್ಚಗಳು ಸೇರಿದಂತೆ ಅನೇಕ ಅಂಶಗಳನ್ನು ಒಳಗೊಂಡಿವೆ. ಬೇಡಿಕೆ ಪೂರೈಕೆ, ಬೆಲೆಗಳ ನಿರ್ಧಾರ, ಸ್ಪರ್ಧಾತ್ಮಕ ಯುಗದಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕರು ಬೇಡಿಕೆಯ ಆಧಾರದಲ್ಲಿ ಬೆಲೆ ನಿಗದಿ ಪಡಿಸಲಾಗಿದೆ. ಇಂತಹ ಸಮಯದಲ್ಲಿ ಆರ್ಥಿಕ ಅಸಮತೋಲನ ಆಗದಂತೆ ನೋಡಿಕೊಳ್ಳಲಾಗುತ್ತದೆ.
ದೇಶದ ಆರ್ಥಿಕ ನೀತಿಗಳು, ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಸ್ಥೂಲ ಅರ್ಥಶಾಸ್ತ್ರವು ಅಧ್ಯಯನ ಮಾಡುತ್ತದೆ. ಬಿಡಿ ಬಿಡಯಾಗಿ ವಿಶೇಷಿಸುತ್ತದೆ. ಇದನ್ನು ಟಾಪ್-ಡೌನ್ ವಿಧಾನ ಎಂದು ಕರೆಯಲಾಗುತ್ತದೆ. "ಹಣದುಬ್ಬರ ದರ ಏನಾಗಿರಬೇಕು?" ಅಥವಾ "ಆರ್ಥಿಕ ಬೆಳವಣಿಗೆ ಏನು ಉತ್ತೇಜಿಸುತ್ತದೆ? ಎಂಬ ಹಲವು ಪ್ರಶ್ನೆಗಳಿಗೆ ಈ ಅಧ್ಯಯನದಿಂದ ಉತ್ತರ ಸಿಗುತ್ತದೆ.
ಈ ಮೇಲಿನ ಎಲ್ಲ ಅಂಶಗಳು ಒಳಗೊಂಡು ಮುಂದಿನ ತಿಂಗಳು ಫೆಬ್ರವರಿ ಮೊದಲ ದಿನ ವಿತ್ತ ಸಚಿವೆ ಬಜೆಟ್ ಮಂಡನೆ ಮಾಡಲಿದ್ದಾರೆ.












Click it and Unblock the Notifications