ಹೊಸ ಸಂಸ್ಕೃತಿ ಮುಂದುವರೆಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ, ಫೆಬ್ರವರಿ 01: ಮೊದಲ ಬಾರಿಗೆ ಹಣಕಾಸು ಸಚಿವರಾಗಿ ಬಜೆಟ್ ಮಂಡಿಸಿದಾಗ ನಾಂದಿ ಹಾಡಿದ ಹೊಸ ಸಂಸ್ಕೃತಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮುಂದುವರೆಸಿದ್ದಾರೆ. ಏಳೆಂಟು ತಿಂಗಳ ಹಿಂಡೆ ಸುದೀರ್ಘ ಕಾಲದ ಸಂಪ್ರದಾಯಕ್ಕೆ ಅಂತ್ಯ ಹಾಡಿ ಹೊಸ ನಡೆ ಇಟ್ಟು ಎಲ್ಲರ ಗಮನ ಸೆಳೆದಿದ್ದಲ್ಲದೆ, ಮೆಚ್ಚುಗೆ ಗಳಿಸಿದ್ದರು.

ಕೇಂದ್ರ ಸರ್ಕಾರ 2020-21ನೇ ಸಾಲಿನ ಬಜೆಟ್​ ಮಂಡನೆ ಮಾಡಲಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಮಂಡಿಸುತ್ತಿರುವ ಸಂಪೂರ್ಣ ಬಜೆಟ್​ ಮಂಡನೆ ಮಾಡುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಲೋಕಸಭೆಗೆ ಬ್ರಿಫ್ ಕೇಸ್ ಬದಲಿಗೆ Bahi Khata ಹೊತ್ತು ತಂದಿದ್ದಾರೆ.

ಬಜೆಟ್ ಮಂಡನೆ ಮಾಡುತ್ತಿದ್ದ ಸಚಿವರು ಚರ್ಮದ ಬ್ರೀಫ್‌ಕೇಸ್‌ನಲ್ಲಿ ಬಜೆಟ್ ಪ್ರತಿಗಳನ್ನು ತರುತ್ತಿದ್ದರು. ದೊಡ್ಡ ಮೊತ್ತದ ಆಯವ್ಯಯದ ಕುರಿತಾಗಿ ಬಜೆಟ್ ಮಂಡಿಸುವುದರ ಸಂಕೇತವಾಗಿ ಈ ಬ್ರೀಫ್‌ಕೇಸ್‌ಅನ್ನು ಬಳಸಲಾಗುತ್ತಿತ್ತು.

ಕೆಂಪು ಬಣ್ಣದ ಪುಟಾಣಿ ಚೀಲ

ಕೆಂಪು ಬಣ್ಣದ ಪುಟಾಣಿ ಚೀಲ

ನಿರ್ಮಲಾ ಸೀತಾರಾಮನ್ ಅವರು ಕೆಂಪು ಬಣ್ಣದ ಪುಟಾಣಿ ಚೀಲವನ್ನು ತಂದಿದ್ದಾರೆ. ಅದರಲ್ಲಿ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಸ್ಥಂಭದ ಲಾಂಛನವಿದೆ. ಈ ಚೀಲಕ್ಕೆ 'ಬಹಿ ಖಾತಾ' (ಲೆಡ್ಜರ್) ಎಂದು ಕರೆಯಲಾಗುತ್ತದೆ. ಈ ಮೂಲಕ ಹಳೆಯ 'ಬ್ರೀಫ್‌ಕೇಸ್ ಸಂಸ್ಕೃತಿ'ಯನ್ನು ಅಂತ್ಯಗೊಳಿಸಿ, ಹೊಸ ಸಂಸ್ಕೃತಿ, ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು.

ಏನಿದು ಗ್ಲಾಡ್ ಸ್ಟೋನ್ ಬಾಕ್ಸ್?

ಏನಿದು ಗ್ಲಾಡ್ ಸ್ಟೋನ್ ಬಾಕ್ಸ್?

ಬಜೆಟ್ ಬ್ರೀಫ್ ಕೇಸ್ ಎಂಬುದು ಬ್ರಿಟಿಷರ ಬಜೆಟ್ ಹೊತ್ತು ತರುವ ಗ್ಲಾಡ್ ಸ್ಟೋನ್ ಬಾಕ್ಸ್ ಗೆ ಸಮಾನಂತರವಾಗಿ ಬಳಕೆಯಲ್ಲಿತ್ತು. ಮಾಜಿ ಪ್ರಧಾನಿ, ನಾಲ್ಕು ಬಾರಿ ಚಾನ್ಸಲೆರ್ ವಿಲಿಯಂ ಗ್ಲಾಡ್ ಸ್ಟೋನ್ ಅವರು ಕೆಂಪು ಬಣ್ಣದ ಸೂಟ್ ಕೇಸ್ ಹಾಗೂ ಅದರ ಮೇಲೆ ರಾಣಿಯ ಮೋನೋಗ್ರಾಮ್ ಚಿನ್ನದ ಅಚ್ಚಿನ ಚಿನ್ಹೆ ಹೊಂದಿರುತ್ತಿತ್ತು. 1860ರಲ್ಲಿ ಆರಂಭವಾದ ಈ ಸೂಟ್ ಕೇಸ್ ಸಂಸ್ಕೃತಿ ಭಾರತದಲ್ಲೂ ಜಾರಿಯಲ್ಲಿತ್ತು. 2010ರಲ್ಲಿ ನಿರ್ಮಲಾ ಸೀತಾರಾಮನ್ ಅವರು ಇದಕ್ಕೆ ಅಂತ್ಯ ಹಾಡಿ, ದೇಶಿ ಟಚ್ ನೀಡಿದರು.

ಚರ್ಮದ ಚೀಲದಲ್ಲಿ ಕಡತ

ಚರ್ಮದ ಚೀಲದಲ್ಲಿ ಕಡತ

ಜುಲೈ 05, 2019ರಂದು ಮೊದಲ ಬಾರಿಗೆ ಬಹಿ ಖಾತಾದೊಂದಿಗೆ ಬಜೆಟ್ ಪ್ರತಿಯನ್ನು ಸಂಸತ್ತಿಗೆ ತಂದ ನಿರ್ಮಲಾ ಅವರ ನಡೆಗೆ ಭಾರಿ ಪ್ರಶಂಸೆ ವ್ಯಕ್ತವಾಯಿತು.

1947ರಲ್ಲಿ ಮೊದಲ ಹಣಕಾಸು ಸಚಿವ ಆರ್.ಎನ್. ಷಣ್ಮುಖಂ ಚೆಟ್ಟಿ ಅವರು ದೇಶದ ಪ್ರಪ್ರಥಮ ಹಣಕಾಸು ಬಜೆಟ್ ಮಂಡಿಸುವ ಸಂದರ್ಭದಲ್ಲಿ ಚರ್ಮದ ಚೀಲದಲ್ಲಿ ಕಡತವನ್ನು ಕೊಂಡೊಯ್ದಿದ್ದರು.

ಪೂರ್ಣ ಬಜೆಟ್ ಮಂಡಿಸುತ್ತಿರುವ ಮಹಿಳಾ ಸಚಿವೆ

ಪೂರ್ಣ ಬಜೆಟ್ ಮಂಡಿಸುತ್ತಿರುವ ಮಹಿಳಾ ಸಚಿವೆ

1970ರಿಂದ ಹಣಕಾಸು ಸಚಿವರು ಚರ್ಮದ ಬ್ರೀಫ್‌ಕೇಸ್ ಹಿಡಿದು ಬರುವುದು ಸಂಪ್ರದಾಯವಾಗಿ ಆರಂಭವಾಗಿತ್ತು. ಇದು 1860ರಿಂದಲೂ ಬ್ರಿಟನ್‌ನಲ್ಲಿ ನಡೆದುಬರುತ್ತಿದ್ದ ಪದ್ಧತಿಯಾಗಿತ್ತು. ಭಾರತದಲ್ಲಿ ಬಳಸುತ್ತಿದ್ದ ಬ್ರೀಫ್‌ಕೇಸ್‌ನ ಬಣ್ಣ ಮತ್ತು ಆಕಾರ ಮಾತ್ರ ಬದಲಾಗಿತ್ತು.

ನಿರ್ಮಲಾ ಸೀತಾರಾಮನ್ ಅವರು 1970ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಬಜೆಟ್ ಮಂಡಿಸಿದ ನಂತರ 49 ವರ್ಷದ ಬಳಿಕ ಕೇಂದ್ರದಲ್ಲಿ ಬಜೆಟ್ ಮಂಡಿಸುತ್ತಿರುವ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+