ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್-2020: ಭಾರತದಲ್ಲಿ 100 ಅಲ್ಲ, 105 ಸ್ಮಾರ್ಟ್ ಸಿಟಿ

|
Google Oneindia Kannada News

ನವದೆಹಲಿ, ಫೆಬ್ರವರಿ.01: ದೇಶದಲ್ಲಿ 5 ಹೊಸ ಸ್ಮಾರ್ಟ್ ಸಿಟಿ ನಿರ್ಮಾಣ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ರಾಜ್ಯ ಮತ್ತು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

2020-21ನೇ ಸಾಲಿನ ಕೇಂದ್ರ ಬಜೆಟ್ ಮಂಡಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 5 ಹೊಸ ಸ್ಮಾರ್ಟ್ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ, ಈ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಕೇಂದ್ರದ ಅನುದಾನದ ಬಗ್ಗೆ ಬಜೆಟ್ ನಲ್ಲಿ ಉಲ್ಲೇಖಿಸಿಲ್ಲ.

ಭಾರತ್ ನೆಟ್ ಯೋಜನೆ: ಭಾರತದ ಮನೆ ಮನೆಗೂ ಇಂಟರ್ ನೆಟ್ ಸೇವೆ! ಭಾರತ್ ನೆಟ್ ಯೋಜನೆ: ಭಾರತದ ಮನೆ ಮನೆಗೂ ಇಂಟರ್ ನೆಟ್ ಸೇವೆ!

ಕಳೆದ 2018-19ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣಕ್ಕಾಗಿ ಬರೋಬ್ಬರಿ 6,169 ಕೋಟಿ ರುಪಾಯಿ ಅನುದಾನವನ್ನು ಮೀಸಲು ಇಡಲಾಗಿತ್ತು. ಇನ್ನು, 2019-2020ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಶೇ.4.5ರಷ್ಟು ಹೆಚ್ಚುವರಿ ಅನುದಾನವನ್ನು ನೀಡಿತ್ತು. ಅಂದರೆ 6,450 ಕೋಟಿ ರುಪಾಯಿ ಅನುದಾನವನ್ನು ಘೋಷಿಸಲಾಗಿತ್ತು.

Union Budget 2020: Central Government Propose Creation Of 5 New Smart Cities

ಭಾರತದಲ್ಲಿ 2015ರ ಜೂನ್.25ರಂದು ಮೊದಲ ಬಾರಿಗೆ ಸ್ಮಾರ್ಟ್ ಸಿಟಿ ನಿರ್ಮಾಣದ ಬಗ್ಗೆ ಕೇಂದ್ರ ಸರ್ಕಾರ ಘೋಷಿಸಿತು. ನಾಲ್ಕು ಹಂತಗಳಲ್ಲಿ 100 ಸ್ಮಾರ್ಟ್ ಸಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು.

2016, ಜನವರಿ.28ರಂದು ಭುವನೇಶ್ವರ್ ಸೇರಿದಂತೆ 20 ಸ್ಮಾರ್ಟ್ ಸಿಟಿಗಳನ್ನು ಒಳಗೊಂಡ ಮೊದಲ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿತು. 2016, ಮೇ.24ರಂದು ಲಕ್ನೋ ಸೇರಿದಂತೆ 13 ಸ್ಮಾರ್ಟ್ ಸಿಟಿಗಳನ್ನೊಳಗೊಂಡ 2ನೇ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿತ್ತು.

ಆದಾಯ ತೆರಿಗೆ ಮಿತಿ ಹೆಚ್ಚಳವಿಲ್ಲ, ನಿರ್ಮಲಾ ಹೇಳಿದ ತೆರಿಗೆ ಲೆಕ್ಕವೇನು? ಆದಾಯ ತೆರಿಗೆ ಮಿತಿ ಹೆಚ್ಚಳವಿಲ್ಲ, ನಿರ್ಮಲಾ ಹೇಳಿದ ತೆರಿಗೆ ಲೆಕ್ಕವೇನು?

2016ರ ಸೆಪ್ಟಂಬರ್.20ರಂದು 27 ಸ್ಮಾರ್ಟ್ ಸಿಟಿಗಳ 3ನೇ ಪಟ್ಟಿಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿತು. ನಂತರ 2017ರ ಜೂನ್.23ರಂದು 30 ಸ್ಮಾರ್ಟ್ ಸಿಟಿಗಳನ್ನೊಳಗೊಂಡ ನಾಲ್ಕನೇ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿತ್ತು.

ಇನ್ನು, ಸ್ಮಾರ್ಟ್ ಸಿಟಿ ಯೋಜನೆಯು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದ್ದು, ಈ ಯೋಜನೆಗೆ ಕೇಂದ್ರ ಸರ್ಕಾರವು ಒಂದು ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ 500 ಕೋಟಿ ರುಪಾಯಿ ಅನುದಾನವನ್ನು ನೀಡಲಿದೆ.

English summary
Union Budget 2020: Central Government Propose Creation Of 5 New Smart Cities In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X