ಆಧಾರ್ ಬಳಕೆ ಹಾಗೂ ಅದರ ಸುತ್ತ ಇರುವ ವಿವಾದಗಳು...
ಆಧಾರ್ ಬಗ್ಗೆ ನನಗೆ ಎಲ್ಲ ಗೊತ್ತಿದೆ ಅನ್ನುವವರಿಗೂ ಕೆಲವು ತಪ್ಪು ಮಾಹಿತಿ, ಅಭಿಪ್ರಾಯಗಳಿವೆ. ಆಧಾರ್ ಬಗ್ಗೆ ಹಲವು ವಿಶಿಷ್ಟ ವಿವರಗಳು ಹಾಗೂ ಅದರ ಮಿತಿಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿಯಿದೆ
ಆಧಾರ್ ಹಾಗೂ ಆದರ ದುರ್ಬಳಕೆ ಬಗ್ಗೆ ಹಲವು ಮಾಧ್ಯಮಗಳು ಚರ್ಚಿಸುತ್ತಿವೆ. ಜನರಿಗೆ ನಾನಾ ಅಭಿಪ್ರಾಯಗಳಿದ್ದರೂ ಆಧಾರ್ ಬಗ್ಗೆ ಎಲ್ಲ ವಿವರಗಳನ್ನು ತಿಳಿದಿರಬೇಕು. ಇಂದಿನ ನನ್ನ ಲೇಖನದಲ್ಲಿ ಸಾಮಾನ್ಯವಾಗಿ ಏಳುವ ಪ್ರಶ್ನೆಗಳಿಗೆ ಆಧಾರ್ ನ ಪ್ರಮುಖ ಅಂಶಗಳನ್ನು ವಿವರಿಸಲು ಪ್ರಯತ್ನಿಸುತ್ತಾ ಇದ್ದೀನಿ.
ಆಧಾರ್ ಬಗ್ಗೆ ಈಗಾಗಲೇ ಪರಿಚಯ ಇದ್ದರೂ ಇದು ಸ್ವಲ್ಪ ವಿಭಿನ್ನ. ಈ ಬಗ್ಗೆ ಕೆಲವು ತಪ್ಪಾದ ಅಭಿಪ್ರಾಯ ಇರುವವರು ಸಹ ತಮಗೆ ಎಲ್ಲ ಗೊತ್ತಿದೆ ಎಂಬ ನಂಬಿಕೆಯಲ್ಲಿದ್ದಾರೆ. ಭಾರತೀಯ ನಿವಾಸಿಗಳಿಗೆ ಯುಐಡಿಎಐನಿಂದ ಯುನಿಕ್ ಐಡಿ ವಿತರಿಸುವುದೊಂದೇ ಅಲ್ಲ. ಆನ್ ಲೈನ್ ವೆರಿಫಿಕೇಷನ್ ಸೇವೆ ಒದಗಿಸುತ್ತದೆ. ಅಷ್ಟು ಬಿಟ್ಟರೆ ಆಧಾರ್ ಗೆ ಸಂಬಂಧಿಸಿದ ಯಾವುದೇ ಸೇವೆಯನ್ನು ಯುಐಡಿಎಐ ಒದಗಿಸಲ್ಲ.[ಜಾರ್ಖಂಡ್: 14 ಲಕ್ಷ ಜನರ ಆಧಾರ್ ಬಹಿರಂಗವಾದರೂ ಕ್ರಮವಿಲ್ಲ]

ಆಧಾರ್ ಬಗ್ಗೆ ನಿಮಗೆ ತುಂಬ ಸುಲಭವಾಗಿ ಅರ್ಥವಾಗುವಂತೆ ಕೆಲವು ಅಂಶಗಳನ್ನು ಇಲ್ಲಿ ವಿವರಿಸ್ತೀನಿ
* ಆಧಾರ್ ಅನ್ನೋದನ್ನು ಗುರುತಿಗಾಗಿಯೇ ರೂಪಿಸಲಾಗಿದೆ. ಅದು ಪಾಸ್ ಪೋರ್ಟ್ ಅಥವಾ ಪ್ಯಾನ್ ಕಾರ್ಡ್ ನಂತಲ್ಲ. ಈ ವ್ಯವಸ್ಥೆ ಕೆಲವು ವಾಸ್ತವದ ಜತೆಗೆ ಮಿತಿಗಳನ್ನು ಕೂಡ ಹೊಂದಿದೆ. ಈ ಸತ್ಯವನ್ನು ಸೇವೆ ಒದಗಿಸುವ ಬ್ಯಾಂಕ್ ನಂಥವು ಅರ್ಥ ಮಾಡಿಕೊಳ್ಳಬೇಕು. ನೀವಿದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಅಂದರೆ, ಆಧಾರ್ ಒಂಥರಾ ವಿದ್ಯುತ್ ಇದ್ದ ಹಾಗೆ, ಕೆಲವು ಸಲ ಕೆಲಸ ಮಾಡಲ್ಲ. ಅದೇ ರೀತಿ ಕೆಲವು ಸನ್ನಿವೇಶಗಳಲ್ಲಿ ಆಧಾರ್ ಕೂಡ ಕೆಲಸ ಮಾಡಲ್ಲ.
ಅದ್ದರಿಂದ ಒಂದೋ ವಿದ್ಯುತ್ ಬಳಕೆಯೇ ಮಾಡಬಾರದು. ಅಥವಾ ಅದು ಯಾವಾಗೆಲ್ಲ ಬಳಕೆ ಆಗುತ್ತದೆ ಎಂದು ತಿಳಿದಿರಬೇಕು. ಇನ್ನೊಂದು ಸರಳ ಉದಾಹರಣೆ ಅಂದರೆ, ಬೆರಳಿನ ಗುರುತು ಹಾಗೂ ಐರಿಸ್ ಗುರುತು ಇಲ್ಲದವರಿಗೆ ಬಯೋಮೆಟ್ರಿಕ್ ರಹಿತವಾದ ವ್ಯವಸ್ಥೆಯೊಂದನ್ನು ಮಾಡಿದೆ. ಆ ಪ್ರಕಾರ ಯಾವುದೇ ದುರ್ಬಳಕೆ ಆಗದಂತೆ ಎಚ್ಚರಿಕೆ ವಹಿಸಿ, ಆಧಾರ್ ವಿತರಿಸಲಾಗುತ್ತದೆ.[ಆಧಾರ್ ಪ್ರಚಾರಕ್ಕೆ ಮಕ್ಕಳಿಗಾಗಿ ವಿಡಿಯೋ ಸ್ಪರ್ಧೆ, ನಗದು ಬಹುಮಾನ]
ಅಂಥ ವ್ಯಕ್ತಿಗಳನ್ನು ಬಯೋಮೆಟ್ರಿಕ್ ಮೂಲಕ ಗುರುತು ಹಿಡಿಯಲು ಸಾಧ್ಯವೇ ಇಲ್ಲ. ಅಂತಹವರು ಒಟಿಪಿ (ಒನ್ ಟೈಮ್ ಪಾಸ್ ವರ್ಡ್) ಮೂಲಕ ತಮ್ಮ ಗುರುತನ್ನು ಖಾತ್ರಿ ಪಡಿಸಬಹುದು. ಒಂದುವೇಳೆ ಅಂಥವರ ಬಳಿ ಮೊಬೈಲ್ ಫೋನ್ ಇಲ್ಲ ಅಂದುಕೊಳ್ಳಿ (ಆಧಾರ್ ಗೆ ನೋಂದಣಿ ಮಾಡಿಸಲು ಮೊಬೈಲ್ ಫೋನ್ ಕಡ್ಡಾಯವಲ್ಲ). ಅಂಥ ಸಂದರ್ಭದಲ್ಲಿ ಕೆಲವು ಸೂಕ್ಷ್ಮ ಪರ್ಯಾಯಗಳನ್ನು ರೂಪಿಸಬೇಕಾಗುತ್ತದೆ.
ಆಧಾರ್ ವಿತರಣೆಗೂ ಮುನ್ನ ಹೇಗೆ ಪರಿಸ್ಥಿತಿ ನಿಭಾಯಿಸುತ್ತಿದ್ದರೂ ಅದೇ ರೀತಿ ಯಾವುದಾದರೂ ಫೋಟೋ ಐಡೆಂಟಿಟಿ ಬಳಸಬೇಕಾಗುತ್ತದೆ. ಇಲ್ಲಿ ಮತ್ತೊಂದು ಸೂಕ್ಷ್ಮ ಸಂಗತಿ ಇದೆ. ಅಂಥ ಸಂದರ್ಭದಲ್ಲೂ ದುರ್ಬಳಕೆ ಆಗದಂತೆ ಎಚ್ಚರ ವಹಿಸಬೇಕಾಗುತ್ತದೆ.
* ಆಧಾರ್ ಥರ ಜಗತ್ತಿನ ಯಾವ ಭಾಗದಲ್ಲಾದರೂ ನಿಮ್ಮನ್ನು ಗುರುತಿಸಬಹುದಾದ ಮತ್ತೊಂದು ವ್ಯವಸ್ಥೆ ಯಾವ ದೇಶದಲ್ಲೂ ಇಲ್ಲ. ಜನ್ಮ ದಿನದ ನೋಂದಣಿ ಮಾಡಿಸುವುದು ಹಲವು ದೇಶಗಳಲ್ಲಿ ಪರಿಣಾಮಕಾರಿಯಾಗಿದೆ. ಆದರೆ ಭಾರತದಲ್ಲಂತೂ ಅಂಥ ವ್ಯವಸ್ಥೆ ಇಲ್ಲ. ಏಕೆಂದರೆ ಮನೆಯಲ್ಲೇ ಹೆರಿಗೆಗಳಾಗುತ್ತವೆ.[ದೇಶದೊಳಗಿನ ವಿಮಾನ ಯಾನಕ್ಕೆ ಆಧಾರ್ ಕಡ್ಡಾಯಗೊಳಿಸಲು ಸಿದ್ಧತೆ]
ಭಾರತದಂಥ ದೇಶದಲ್ಲಿ ಎಲ್ಲ ಕಡೆಯೂ ನೋಡಲಿಕ್ಕೆ ಸಿಗಬಹುದಾದ ಜನ್ಮ ದಿನಾಂಕ ನೋಂದಣಿ ವ್ಯವಸ್ಥೆ ಇಲ್ಲವಾದ್ದರಿಂದ ಮತ್ತೊಂದು ಐಡಿ ಬೇಕಾಗುತ್ತದೆ. ಆದ್ದರಿಂದ ಯುಐಎಡಿಐ ಬಯೋಮೆಟ್ರಿಕ್ಸ್ ನ ಆಯ್ಕೆ ಮಾಡಿಕೊಂಡಿದೆ. ಒಂದು ವೇಳೆ ಸೇವೆ ಒದಗಿಸುವ ಸಂಸ್ಥೆ ನಿರ್ಧರಿಸಿದರೆ ಎಲ್ಲಕ್ಕೂ ಆಧಾರ್ ಜೋಡಣೆ ಮಾಡಿ ನಕಲಿ ಅನಿಸುವಂಥದ್ದನ್ನೆಲ್ಲ ಇಲ್ಲದಂತೆ ಮಾಡಬಹುದು.
ಇಂಥ ಹಲವು ಸಂಗತಿಗಳು ಆಧಾರ್ ನ ಸುತ್ತ ಹೆಣೆದುಕೊಂಡಿವೆ. ಆದರೆ ಈ ಬಗ್ಗೆ ಗೊತ್ತಿರಲೇಬೇಕು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications