ICC World Cup 2023: ಸನಾತನ ಧರ್ಮ ವಿರೋಧಿಸಿದ್ದ ಉದಯನಿಧಿ ಸ್ಟಾಲಿನ್‌ಗೆ ಐಸಿಸಿ ವಿಶ್ವಕಪ್ ಫೈನಲ್‌ಗೆ ಟಿಕೆಟ್ ಸಿಕ್ಕಿಲ್ಲವಂತೆ!

ಸನಾತನ ಧರ್ಮದ ಬಗ್ಗೆ ಮಾತನಾಡಿ ದೇಶಾದ್ಯಂತ ಸುದ್ದಿಯಾಗಿದ್ದ ಉದಯನಿಧಿ ಸ್ಟಾಲಿನ್‌ ಈಗ ಮತ್ತೆ ಸದ್ದು ಮಾಡುತ್ತಿದ್ದಾರೆ. ಆದರೆ ಈ ಬಾರಿ ಉದಯನಿಧಿ ಸ್ಟಾಲಿನ್‌ ಸುದ್ದಿಯಾಗಿ, ಸದ್ದು ಮಾಡುತ್ತಿರುವುದು ಸನಾತನ ಹಿಂದೂ ಧರ್ಮದ ಕಾರಣಕ್ಕೆ ಅಲ್ಲ. ಬದಲಾಗಿ ಇದೀಗ ಉದಯನಿಧಿ ಸ್ಟಾಲಿನ್‌ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಮ್ಯಾಚ್ ಬಗ್ಗೆ ಮಾತನಾಡಿದ್ದು, ವೈರಲ್ ಆಗುತ್ತಿದೆ. ಹಾಗಾದ್ರೆ ಉದಯನಿಧಿ ಸ್ಟಾಲಿನ್‌ ಐಸಿಸಿ ವಿಶ್ವಕಪ್ ಬಗ್ಗೆ ಹೇಳಿದ್ದೇನು?

ಹೌದು, ತಮಿಳುನಾಡಿನ ಕ್ರೀಡಾ ಸಚಿವರೂ ಆದ ಉದಯನಿಧಿ ಸ್ಟಾಲಿನ್‌ಗೆ ಕ್ರಿಕೆಟ್ ಅಂದರೆ ಇಷ್ಟವಂತೆ. ಅದ್ರಲ್ಲೂ ಐಸಿಸಿ ವಿಶ್ವಕಪ್ ಬಗ್ಗೆಯೂ ಅವರಿಗೆ ತುಂಬಾ ಆಸಕ್ತಿ ಇದೆಯಂತೆ. ಹೀಗೆ ಎಲ್ಲಾ ಕ್ರಿಕೆಟ್ ಪ್ರೇಮಿಗಳಿಗೂ ಇರುವಂತೆ ಖುದ್ದಾಗಿ ಕ್ರೀಡಾಂಗಣಕ್ಕೆ ಹೋಗಿ ಮ್ಯಾಚ್ ನೋಡುವ ಆಸೆ ಉದಯನಿಧಿ ಸ್ಟಾಲಿನ್‌ಗೆ ಇದೆ. ಆದ್ರೂ ಭಾರತ VS ಆಸ್ಟ್ರೇಲಿಯಾ ನಡುವೆ ನಡೆಯಲಿರುವ, 2023 ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಟಿಕೆಟ್ ಸಿಕ್ಕಿಲ್ಲವಂತೆ. ಇದನ್ನ ಖುದ್ದು ಉದಯನಿಧಿ ಸ್ಟಾಲಿನ್ ಅವರೇ ಹೇಳಿಕೊಂಡು ಬೇಸರ ಹೊರಹಾಕಿದ್ದಾರೆ.

icc-world-cup-2023-final-match

ಉದಯನಿಧಿ ವಿಶ್ವಕಪ್ ಬಗ್ಗೆ ಹೇಳಿದ್ದೇನು?

ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಹಾಗೂ ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಮೊಮ್ಮಗ ಉದಯನಿಧಿ ಸ್ಟಾಲಿನ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಉದಯನಿಧಿ ಸ್ಟಾಲಿನ್ ನೀಡಿದ್ದ ಕೆಲವು ಹೇಳಿಕೆಗಳು ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದರು. ಹೀಗಿದ್ರೂ, ತಮ್ಮ ನಿಲುವಿನಲ್ಲಿ ಯಾವುದೆ ಬದಲಾವಣೆ ಇಲ್ಲ ಅಂತಾರೆ ಉದಯನಿಧಿ ಸ್ಟಾಲಿನ್. ಹೀಗೆ ಉದಯನಿಧಿ ಸ್ಟಾಲಿನ್ ಹೇಳಿಕೆ ಎಲ್ಲೆಲ್ಲೂ ವೈರಲ್ ಆಗುವಾಗ, ಮತ್ತೊಮ್ಮೆ ಸದ್ದು ಮಾಡಿ ಗಮನ ಸೆಳೆದಿದ್ದಾರೆ. ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡುವ ವೇಳೆ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ನೋಡುವ ಆಸೆಯನ್ನು ಉದಯನಿಧಿ ಸ್ಟಾಲಿನ್ ವ್ಯಕ್ತಪಡಿಸಿದ್ದಾರೆ. ಹಾಗೇ ನನಗೂ ಮ್ಯಾಚ್ ಟಿಕೆಟ್ ಸಿಕ್ಕಿಲ್ಲ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.

ಎಲ್ಲರಂತೆ ನಾನೂ ಕಾಯುತ್ತಿದ್ದೇನೆ!

ಈ ಬಗ್ಗೆ ಮಾತನಾಡಿದ ಉದಯನಿಧಿ ಸ್ಟಾಲಿನ್, ಎಲ್ಲರಂತೆ ನಾನು ಕೂಡ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕಾಯುತ್ತಿದ್ದೇನೆ. ಆದರೆ ನನಗೆ ಈವರೆಗೂ ಟಿಕೆಟ್ ಸಿಕ್ಕಿಲ್ಲ. ಟಿಕೆಟ್‌ಗಳು ಖಾಲಿ ಆಗಿವೆ ಅಂತಾ ಹೇಳಿದ್ದಾರೆ. ಹೀಗಾಗಿ ಟಿಕೆಟ್ ಸಿಕ್ಕರೆ ನಾನು ಕೂಡ ಖುದ್ದು ಅಲ್ಲಿಗೆ ತೆರಳಿ ಪಂದ್ಯ ನೋಡ್ತೀನಿ ಎಂದಿದ್ದಾರೆ. 2023 ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜನೆ ಆಗಿದೆ. ಈ ಕಾರಣ ಪಂದ್ಯ ನೋಡಲು ಇಚ್ಛಿಸುವವರು ಗುಜರಾತ್ ರಾಜಧಾನಿಗೆ ಪ್ರಯಾಣ ಬೆಳೆಸಬೇಕಿದೆ.

icc-world-cup-2023-final-match

ಫೈನಲ್ ಪಂದ್ಯಕ್ಕೆ ಪ್ರಧಾನಿ ಬರ್ತಾರಾ?

ಭಾರತ & ಆಸ್ಟ್ರೇಲಿಯಾ ನಡುವೆ ಏಕದಿನ ವಿಶ್ವಕಪ್ ಅಖಾಡ ರಂಗೇರಿದೆ. 20 ವರ್ಷದ ಹಿಂದೆ ಕಂಡಿದ್ದ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜಾಗಿದೆ. ಗುಜರಾತ್‌ನ ಅಹಮದಾಬಾದ್ ಕ್ರೀಡಾಂಗಣ ಫೈನಲ್ ಪಂದ್ಯಕ್ಕೆ ಸಜ್ಜಾಗುತ್ತಿದ್ದು, ಕ್ರಿಕೆಟ್ ಲೋಕದ ಗಣ್ಯರು, ವಿವಿಧ ಕ್ಷೇತ್ರಗಳ ಪ್ರಮುಖರು ಪಂದ್ಯ ವೀಕ್ಷಿಸಲು ಬರ್ತಿದ್ದಾರೆ. ಹೀಗೆ ಭಾರತಕ್ಕೆ 2 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಭಾರತ ತಂಡದ ಮಾಜಿ ನಾಯಕರಾದ ಕಪಿಲ್ ದೇವ್ & ಮಹೇಂದ್ರ ಸಿಂಗ್ ಧೋನಿ ಅವರಿಗೆ ಕೂಡ ಫೈನಲ್ ಮ್ಯಾಚ್‌ಗೆ ಬರುವಂತೆ ಆಹ್ವಾನ ನೀಡಲಾಗಿದೆ.

ಈ ಎಲ್ಲಾ ಕಾರಣಕ್ಕೆ ಫೈನಲ್ ಮ್ಯಾಚ್ ಟಿಕೆಟ್‌ಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿ ಆಗಿದೆ. ಈ ನಡುವೆ ಪ್ರಧಾನಿ ಮೋದಿ ಅವರಿಗೂ ಐಸಿಸಿ ಕಡೆಯಿಂದ ವಿಶೇಷ ಆಹ್ವಾನ ನೀಡಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಭಾಗವಹಿಸುವ ನಿರೀಕ್ಷೆ ದಟ್ಟವಾಗಿದೆ. ಹಾಗೂ ಜಗತ್ತಿನಲ್ಲಿ ಈವರೆಗೆ ನಡೆದ ವಿಶ್ವಕಪ್‌ಗಳಲ್ಲಿ ಐಸಿಸಿ ಏಕದಿನ ವರ್ಲ್ಡ್ ಕಪ್ ಗೆಲ್ಲಿಸಿಕೊಟ್ಟಿದ್ದ ತಂಡಗಳ ನಾಯಕರನ್ನು ಕೂಡ ಕರೆಸಲಾಗುತ್ತಿದೆ. ಒಟ್ಟಿನಲ್ಲಿ ನಾಳೆ ಅಂದ್ರೆ ನವೆಂಬರ್ 19 ಭಾನುವಾರ ಇಡೀ ಜಗತ್ತು ಭಾರತದ ಮೇಲೆ ಕಣ್ಣಿಟ್ಟು ಕೂರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+