Shiv Sena: ಸೋತ ಮೇಲೆ ಹಳಿಗೆ ಮರಳುತ್ತಿದೆಯೇ ಉದ್ಧವ್ ಠಾಕ್ರೆ ಶಿವಸೇನೆ, ಕಾಂಗ್ರೆಸ್‌ನಿಂದ ದೂರ... ದೂರ..
ಮಹಾರಾಷ್ಟ್ರದಲ್ಲಿ ಈಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲುಕಂಡ ಮೇಲೆ ಶಿವಸೇನಾ ತನ್ನ ಸಿದ್ಧಾಂತಕ್ಕೆ ಮರಳುತ್ತಿರುವ ಮುನ್ಸೂಚನೆ ಕಾಣಿಸುತ್ತಿದೆ. ಈಚೆಗೆ ನಡೆದ ಚುನಾವಣೆಯಲ್ಲಿ ಶಿವಸೇನಾ (ಉದ್ಧವ್ ಠಾಕ್ರೆ ಬಣ) ಹೀನಾಯ ಸೋಲು ಅನುಭವಿಸಿತ್ತು. ಈ ಪಕ್ಷವು ಮಹಾ ವಿಕಾಸ್ ಅಘಾಡಿಯಲ್ಲಿ ಅಂದರೆ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿತ್ತು. ಆದರೆ, ಈ ಚುನಾವಣೆಯಲ್ಲಿ ಶಿವಸೇನೆ ಮುಖಭಂಗ ಅನುಭವಿಸಿದೆ. ಹೀಗಾಗಿ, ಮತ್ತೆ ಹಿಂದುತ್ವ ಹಾಗೂ ಹಿಂದೂಪರ ಸಿದ್ಧಾಂತಕ್ಕೆ ಮರಳುವ ಮುನ್ಸೂಚೆ ಕಾಣುತ್ತಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿಯು ಅಮೋಘ ಯಶಸ್ಸು ಸಾಧಿಸಿದ್ದು, ಸರ್ಕಾರ ರಚನೆ ಮಾಡಿದೆ. ಆದರೆ, ಮೂಲ ಶಿವಸೇನೆ ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳುವ ಆತಂಕದಲ್ಲಿ ಇದೆ. ಕಾಂಗ್ರೆಸ್‌ನೊಂದಿಗೆ ಕಳೆದ ಐದು ವರ್ಷಗಳಿಂದ ಈ ಪಕ್ಷ ಗುರುತಿಸಿಕೊಂಡಿತ್ತು. ಹೀಗಾಗಿ, ಈ ಬಾರಿ ಚುನಾವಣೆಯನ್ನೂ ಈ ಪಕ್ಷಗಳು ಸೀಟು ಹಂಚಿಕೆ ಮಾಡಿಕೊಂಡೇ ಎದುರಿಸಿದ್ದವು. ಆದರೆ, ಇದೀಗ ಮಹಾಯುತಿಯಿಂದ ಹಂತ ಹಂತವಾಗಿ ಶಿವಸೇನೆ ಹೊರಗೆ ಬರ್ತಿದೆ. ಈ ಬಾರಿಯ ಚುನಾವಣೆಯಲ್ಲಿ ವಕ್ಫ್ ಆಸ್ತಿ ವಿಚಾರವನ್ನು ಶಿವಸೇನಾ (ಯುಬಿಟಿ) ಬಣ ಮುಂದಿಟ್ಟುಕೊಂಡು ಪ್ರಚಾರ ಮಾಡಿತ್ತು ಎಂದೂ ವರದಿಯಾಗಿತ್ತು.

ಮೂಲ ಶಿವಸೇನೆ ಮೊದಲಿನಿಂದಲೂ ಹಿಂದುತ್ವದೊಂದಿಗೆ ಗುರುತಿಸಿಕೊಂಡಿದೆ. ಬಾಳಠಾಕ್ರೆ ಅವರು ಶಿವಸೇನೆಯ ಸಂಸ್ಥಾಪಕರು ಅವರು ಪಕ್ಷವನ್ನು ಉಗ್ರ ಹಿಂದುತ್ವ ಹಾಗೂ ಮಹಾರಾಷ್ಟ್ರದ ಅಸ್ತಿತ್ವದ ವಿಷಯಗಳ ಮೇಲೆಯೇ ಕಟ್ಟಿದ್ದರು. ಅಲ್ಲದೇ ಸುದೀರ್ಘ ಅವಧಿ ಈ ಪಕ್ಷ ಇದೇ ಸಿದ್ಧಾಂತದ ಅಡಿಯಲ್ಲೇ ಖ್ಯಾತಿ ಗಳಿಸಿತ್ತು. ಆದರೆ, 2019ರ ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಎರಡೂ ವರೆ ವರ್ಷಗಳ ಕಾಲ ಅಧಿಕಾರವನ್ನೂ ನಡೆಸಿತು. ಅಲ್ಲಿಯ ವರೆಗೂ ಈ ಪಕ್ಷ ಬಿಜೆಪಿಯೊಂದಿಗೆ ಗುರುತಿಸಿಕೊಂಡಿತ್ತು. ಆದರೆ, ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದನ್ನು ಆ ಪಕ್ಷದ ಕೆಲವು ನಾಯಕರೇ ಒಪ್ಪಿಕೊಳ್ಳಲಿಲ್ಲ. ಈ ಕಾರಣವೂ ಸೇರಿ ಪಕ್ಷ ವಿಭಜನೆ ಆಯಿತು. ಇದೀಗ ಹೀನಾಯ ಸೋಲು ಆಗಿದೆ ಇದೀಗ ಶಿವಸೇನಾ ತನ್ನ ಹಳೆಯ ಅಸ್ತಿತ್ವಕ್ಕೆ ಮರಳುವ ಮುನ್ಸೂಚನೆ ಕಾಣುತ್ತಿದೆ.
ಬಾಬರಿ ಮಸೀದಿ ಧ್ವಂಸದ ಬಗ್ಗೆ ಹಾಗೂ ಪತ್ರಿಕೆಯೊಂದರಲ್ಲಿ ಜಾಹೀರಾತು ಬಂದಿದ್ದು ಅದನ್ನು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಆಪ್ತ ಸಹಾಯಕರೊಬ್ಬರು ಪೋಸ್ಟ್ ಮಾಡಿದ್ದಾರೆ. ಇದು ಶಿವಸೇನಾದ ಹಿಂದುತ್ವದ ಕಡೆ ಮರಳುವ ಮೊದಲ ಮುನ್ಸೂಚನೆ ಎಂದೇ ಹೇಳಲಾಗಿದೆ. ಅಲ್ಲದೇ ಇದರ ಬೆನ್ನಲ್ಲೇ ಸಮಾಜವಾದಿ ಪಕ್ಷವು ಮಹಾವಿಕಾಸ್ ಅಘಾಡಿಯಿಂದ ಅಂತರ ಕಾಪಾಡಿಕೊಳ್ಳಲು ಮುಂದಾಗಿದೆ.
ಉದ್ಧವ್ ಠಾಕ್ರೆ ಬಣದ ಹಲವರು ಈ ರೀತಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಕೆಲವರು ಬಾಬ್ರಿ ಮಸೀದಿ ಧ್ವಂಸ ಮಾಡಿದವರಿಗೆ ಅಭಿನಂದನೆಗಳು ಹಾಗೂ ಸಮರ್ಥನೆ ಮಾಡಿಕೊಂಡು ಮಾಡಿದ ಪೋಸ್ಟ್‌ಗೆ ವಿರೋಧ ವ್ಯಕ್ತವಾಗಿದೆ. ಇನ್ನು ಸಮಾಜವಾದಿ ಪಕ್ಷ ಮಹಾವಿಕಾಸ್ ಅಘಾಡಿಯಿಂದ ಹೊರಗೆ ಹೋಗುತ್ತಿರುವುದಕ್ಕೆ ಶಿವಸೇನಾದ ಶಾಸಕ ಹಾಗೂ ಉದ್ಧವ್ ಠಾಕ್ರೆ ಮಗ ಆದಿತ್ಯ ಠಾಕ್ರೆ ವ್ಯಂಗ್ಯವಾಡಿರುವುದು ವರದಿಯಾಗಿದೆ.












Click it and Unblock the Notifications