Cyclone Biparjoy: ಬಾಹ್ಯಾಕಾಶದಿಂದ ಬಿಪರ್‌ಜಾಯ್ ಚಂಡಮಾರುತದ ಚಿತ್ರಗಳನ್ನು ಸೆರೆಹಿಡಿದ ಗಗನಯಾತ್ರಿ

ಯುಎಇ ಗಗನಯಾತ್ರಿ ಅಲ್-ನೆಯಾದಿ ಬಾಹ್ಯಾಕಾಶದಿಂದ ಬೈಪರ್‌ಜೋಯ್ ಚಂಡಮಾರುತದ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಚಿತ್ರಗಳು ಮತ್ತು ವಿಡಿಯೋ ಹಂಚಿಕೊಂಡಿದ್ದು, ಬಿಪರ್‌ಜಾಯ್ ತೀವ್ರತೆಯನ್ನು ನೋಡಬಹುದಾಗಿದೆ.

ಅರೇಬಿಯನ್ ಸಮುದ್ರದಲ್ಲಿ ಬಿಪರ್‌ಜಾಯ್ ಚಂಡಮಾರುತ ರಚನೆಯಾಗುತ್ತಿರುವುದನ್ನು ಬಾಹ್ಯಾಕಾಶದಿಂದ ಸೆರೆಹಿಡಿದಿದ್ದಾರೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಅರಬ್ ಗಗನಯಾತ್ರಿ ಅಲ್-ನೆಯಾದಿ, ಜೂನ್ 15 ರಂದು ಗುಜರಾತ್‌ನಲ್ಲಿ ಭೂಕುಸಿತವನ್ನು ಉಂಟುಮಾಡುವ ಚಂಡಮಾರುತದ ರಚನೆಯಾಗುತ್ತಿರುವ ಫೋಟೊ, ವಿಡಿಯೋ ಹಂಚಿಕೊಂಡಿದ್ದಾರೆ.

 UAE Astronaut Captures Cyclone Biparjoy from Space

ಚಂಡಮಾರುತದ ವೀಡಿಯೊವನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿರುವ ಅವರು, "ಐಎಸ್‌ಎಸ್ ಹಲವಾರು ನೈಸರ್ಗಿಕ ವಿದ್ಯಮಾನಗಳ ಬಗ್ಗೆ ಒಂದು ವಿಶೇಷ ದೃಷ್ಟಿಕೋನವನ್ನು ಒದಗಿಸುತ್ತದೆ, ಇದು ಹವಾಮಾನವನ್ನು ನಿರ್ಧರಿಸುವಲ್ಲಿ ತಜ್ಞರಿಗೆ ಸಹಾಯ ಮಾಡುತ್ತದೆ." ಎಂದು ಬರೆದುಕೊಂಡಿದ್ದಾರೆ.

4 ನಿಮಿಷಗಳ ವಿಡಿಯೋವನ್ನು ಹಂಚಿಕೊಂಡಿದ್ದು, ಅರೇಬಿಯನ್ ಪೆನಿನ್ಸುಲಾದಲ್ಲಿ ಯುಎಇ ಮತ್ತು ಓಮನ್ ಮೇಲೆ ಹಾದುಹೋದ ನಂತರ ಸೈಕ್ಲೋನ್ ರಚನೆಯಾಗುತ್ತಿರುವುದನ್ನು ಕಾಣಬಹುದು. ಚಂಡಮಾರುತದ ಸಂದರ್ಭದಲ್ಲಿ ಗುಡುಗು, ಬಿರುಗಾಳಿಗೆ ಕಾರಣವಾಗುವ ಮೋಡಗಳ ಬೃಹತ್ ರಚನೆಯನ್ನು ವಿಡಿಯೋದಲ್ಲಿ ನೋಡಬಹುದು.

ಗುಜರಾತ್ ಕರಾವಳಿ ತೀರದತ್ತ ಬಿಪರ್‌ಜಾಯ್

ತೀವ್ರತೆ ಪಡೆದುಕೊಂಡಿರುವ ಬಿಪರ್‌ಜಾಯ್ ಚಂಡಮಾರುತ ಗುಜರಾತ್ ಕರಾವಳಿ ಕಡೆಗೆ ಚಲಿಸುತ್ತಿದ್ದು, ಗುರುವಾರ ಸಂಜೆ ವೇಳೆಗೆ ಜಖೌ ಬಂದರಿನ ಬಳಿ ಭೂಕುಸಿತವನ್ನು ಉಂಟುಮಾಡಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಗಂಟೆಗೆ 125 ರಿಂದ 135 ಕಿಲೋ ಮೀಟರ್ ವೇಗದಲ್ಲಿ ಅಪ್ಪಳಿಸಿವು ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ.

ಚಂಡಮಾರುತವು ಸೌರಾಷ್ಟ್ರ ಮತ್ತು ಕಚ್ ಮತ್ತು ಪಕ್ಕದ ಪಾಕಿಸ್ತಾನದ ಕರಾವಳಿಯನ್ನು ದಾಟಲಿದೆ. ಗುಜರಾತ್‌ನ ಆರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಮುಂಜಾಗ್ರತಾ ಕ್ರಮವಾಗಿ ಸಮುದ್ರ ತೀರದ 74,000 ಜನರನ್ನು ತಾತ್ಕಾಲಿಕ ಆಶ್ರಯ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕಚ್‌ ಮತ್ತು ದ್ವಾರಕಾ ಜಿಲ್ಲೆಗಳ ಮೇಲೆ ಚಂಡಮಾರುತದ ಪ್ರಭಾವ ಹೆಚ್ಚಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಕಳೆದ 25 ವರ್ಷಗಳಲ್ಲಿ ಗುಜರಾತ್ ಅನ್ನು ದಾಟಿದ ಮೊದಲ ಚಂಡಮಾರುತ ಬಿಪರ್‌ಜಾಯ್ ಆಗಿದೆ. ಜೂನ್ 1998 ರಲ್ಲಿ, ಅತ್ಯಂತ ತೀವ್ರವಾದ ಚಂಡಮಾರುತವು ಕಚ್ ಮತ್ತು ಸೌರಾಷ್ಟ್ರದ ಕರಾವಳಿ ಜಿಲ್ಲೆಗಳ ಮೇಲೆ ಅಪ್ಪಳಿಸಿತ್ತು, ಕರಾವಳಿ ಪ್ರದೇಶಗಳಿಗೆ ಭಾರಿ ಹಾನಿ ಮಾಡಿದ್ದಲ್ಲದೆ, 3000 ಜನ ಪ್ರಾಣ ಕಳೆದುಕೊಂಡಿದ್ದರು.

ಈ ಬಾರಿ ಹೆಚ್ಚಿನ ಸಾವು ನೋವು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+