ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Shaligram stone: ರಾಮ, ಸೀತೆಯ ವಿಗ್ರಹ ನಿರ್ಮಾಣಕ್ಕಾಗಿ ನೇಪಾಳದಿಂದ ಅಯೋಧ್ಯೆ ತಲುಪಿದ ಸಾಲಿಗ್ರಾಮ ಶಿಲೆಗಳು

ನೇಪಾಳದಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ಎರಡು ಅಪರೂಪದ ಸಾಲಿಗ್ರಾಮ ಶಿಲೆಗಳನ್ನು ತರಿಸಲಾಗಿದ್ದು, ಇವುಗಳಿಗೆ ಜನರು ಭಕ್ತಿಪೂರ್ವಕ ನಮನ ಮಾಡಿ ಅದ್ದೂರಿಯಿಂದ ಸ್ವಾಗತಿಸಿದ್ದಾರೆ. ಇವುಗಳ ವಿಶೇಷತೆ ತಿಳಿಯಲು ಮುಂದೆ ಓದಿ.

|
Google Oneindia Kannada News

ಲಕ್ನೋ, ಫೆಬ್ರವರಿ. 02: ಅಯೋಧ್ಯೆಯ ರಾಮಮಂದಿರಕ್ಕಾಗಿ ನೇಪಾಳದಿಂದ ತರಿಸಲಾಗಿರುವ ಎರಡು ಸಾಲಿಗ್ರಾಮದ ಕಲ್ಲುಗಳು ಗುರುವಾರ ತಮ್ಮ ಗಮ್ಯಸ್ಥಾನವನ್ನು ತಲುಪಿವೆ. ಈ ಕಲ್ಲುಗಳನ್ನು ಹಿಂದೂ ಧರ್ಮದಲ್ಲಿ ಭಗವಾನ್ ವಿಷ್ಣುವಿನ ಅಮೂರ್ತ ರೂಪದ ಪ್ರಾತಿನಿಧ್ಯಗಳು ಎಂದು ಭಾವಿಸಲಾಗುತ್ತದೆ.

ಈ ಶಿಲೆಗಳನ್ನು ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಭಗವಾನ್ ರಾಮನ ವಿಗ್ರಹ ಮತ್ತು ಸೀತಾದೇವಿಯ ವಿಗ್ರಹವನ್ನು ಕೆತ್ತಲು ಬಳಸಲಾಗುತ್ತದೆ ಎಂದು ಹೇಳಲಾಗಿದೆ.

Bharat Gaurav: ಫೆ.17 ರಂದು ಶ್ರೀರಾಮ್-ಜಾನಕಿ ಯಾತ್ರೆ ದೆಹಲಿಯಿಂದ ಫ್ರಾರಂಭBharat Gaurav: ಫೆ.17 ರಂದು ಶ್ರೀರಾಮ್-ಜಾನಕಿ ಯಾತ್ರೆ ದೆಹಲಿಯಿಂದ ಫ್ರಾರಂಭ

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಾಲಿಗ್ರಾಮ ಕಲ್ಲುಗಳನ್ನು ಹಸ್ತಾಂತರಿಸುವ ಮೊದಲು ಈ ಕಲ್ಲುಗಳಿಗೆ ಅರ್ಚಕರು ಮತ್ತು ಸ್ಥಳೀಯರು ಹೂಮಾಲೆಯಿಂದ ಅಲಂಕರಿಸಿ ಧಾರ್ಮಿಕ ವಿಧಿಗಳನ್ನು ಮಾಡಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

Two Shaligram stones reach Ayodhya from Nepal, will be used to Ram idol

ಈ ಬಂಡೆಗಳನ್ನು ರಾಮ ಮತ್ತು ಜಾನಕಿ ಮೂರ್ತಿಗಳ ನಿರ್ಮಾಣಕ್ಕೆ ಬಳಸಿಕೊಳ್ಳುವ ನಿರೀಕ್ಷೆ ಇದ್ದು, ನಿರ್ಮಾಣ ಹಂತದಲ್ಲಿರುವ ರಾಮಮಂದಿರದ ಮುಖ್ಯ ದೇವಾಲಯದ ಸಂಕೀರ್ಣದಲ್ಲಿ ಇದನ್ನು ಇರಿಸಲಾಗುವುದು.

"60 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಈ ಸಾಲಿಗ್ರಾಮ ಶಿಲೆಗಳು ಎರಡು ವಿಭಿನ್ನ ಟ್ರಕ್‌ಗಳಲ್ಲಿ ನೇಪಾಳದಿಂದ ಅಯೋಧ್ಯೆಗೆ ತಲುಪಿವೆ. ಒಂದು ಬಂಡೆ 26 ಟನ್ ಮತ್ತು ಇನ್ನೊಂದು 14 ಟನ್ ತೂಕವಿದೆ" ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಚೇರಿ ಉಸ್ತುವಾರಿ ಪ್ರಕಾಶ್ ಗುಪ್ತಾ ಮಾಹಿತಿ ನೀಡಿದ್ದಾರೆ.

ಈ ಕಲ್ಲಿನಿಂದ ಕೆತ್ತಿದ ಮಗುವಿನ ರೂಪದಲ್ಲಿರುವ ಶ್ರೀರಾಮನ ವಿಗ್ರಹವನ್ನು ರಾಮಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗುವುದು. ಮುಂದಿನ ವರ್ಷ ಜನವರಿಯಲ್ಲಿ ಮಕರ ಸಂಕ್ರಾಂತಿ ಹಬ್ಬದ ವೇಳೆಗೆ ವಿಗ್ರಹ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Two Shaligram stones reach Ayodhya from Nepal, will be used to Ram idol

ನೇಪಾಳದ ಮುಸ್ತಾಂಗ್ ಜಿಲ್ಲೆಯ ಸಾಲಿಗ್ರಾಮ ಅಥವಾ ಮುಕ್ತಿನಾಥ (ಮೋಕ್ಷದ ಸ್ಥಳ) ಸಮೀಪವಿರುವ ಸ್ಥಳದಲ್ಲಿ ಗಂಡಕಿ ನದಿಯಿಂದ ಈ ಎರಡು ಬಂಡೆಗಳು ತರಿಸಲಾಗಿದೆ.

ನೇಪಾಳದಲ್ಲಿ ಕಾಳಿ ಗಂಡಕಿ ಎಂಬ ಜಲಪಾತವಿದೆ. ಇದು ಗಣೇಶ್ವರ ಧಾಮ್ ಗಂಡ್ಕಿಯಿಂದ ಉತ್ತರಕ್ಕೆ 85 ಕಿಮೀ ದೂರದಲ್ಲಿರುವ ದಾಮೋದರ್ ಕುಂಡ್‌ನಿಂದ ಹುಟ್ಟುತ್ತದೆ. ಎರಡೂ ಬಂಡೆಗಳನ್ನು ಅಲ್ಲಿಂದ ತರಲಾಗಿದೆ. ಈ ಸ್ಥಳವು ಸಮುದ್ರ ಮಟ್ಟದಿಂದ 6,000 ಅಡಿ ಎತ್ತರದಲ್ಲಿದೆ. ಇದು ಕೋಟಿ ವರ್ಷಗಳಷ್ಟು ಹಳೆಯದು ಎಂದೂ ಜನ ಹೇಳುತ್ತಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.

ಇನ್ನು, ಅಯೋಧ್ಯೆಯಲ್ಲಿ ರಾಮ ಮಂದಿರವನ್ನು 2024ರ ಜನವರಿ 1 ರಂದು ಉದ್ಘಾಟಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಹಿಂದೆ ತ್ರಿಪುರಾದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.

ಪೂರ್ಣಗೊಂಡಿರುವ ರಾಮ ಮಂದಿರವು ನೆಲ ಅಂತಸ್ತಿನಲ್ಲಿ 160 ಆವರಣಗಳನ್ನು, ಮೊದಲ ಮಹಡಿಯಲ್ಲಿ 132 ಆವರಣಗಳನ್ನು ಮತ್ತು ಎರಡನೇ ಮಹಡಿಯಲ್ಲಿ 74 ಆವರಣಗಳನ್ನು ಹೊಂದಿರುತ್ತದೆ. ಐದು ಮಂಟಪಗಳು ಇರುತ್ತವೆ. ಮೈದಾನದಲ್ಲಿ ಯಾತ್ರಿಕರ ಸೌಕರ್ಯ ಕೇಂದ್ರ, ವಸ್ತುಸಂಗ್ರಹಾಲಯ, ದಾಖಲೆಗಳು, ಸಂಶೋಧನಾ ಕೇಂದ್ರ, ಸಭಾಂಗಣ, ಗೋಶಾಲೆ, ಆಡಳಿತ ಕಟ್ಟಡ ಮತ್ತು ಅರ್ಚಕರಿಗೆ ಕೊಠಡಿಗಳನ್ನು ಹೊಂದಿದೆ.

English summary
Two rare Shaligram stones dispatched from Nepal reached Ram Temple in Ayodhya, theay are used construct Lord Ram idol. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X