ಜಾರ್ಖಂಡ್‌ನಲ್ಲಿ ಫುಟ್‌ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಇಬ್ಬರ ಸಾವು

ಡೂಮ್ಕಾ, ಸೆಪ್ಟೆಂಬರ್‌ 24: ಶನಿವಾರ ಸಂಜೆ ಜಾರ್ಖಂಡ್‌ನ ದುಮ್ಕಾ ಜಿಲ್ಲೆಯ ಆಟದ ಮೈದಾನದಲ್ಲಿ ಸ್ಥಳೀಯ ಫುಟ್‌ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಇಬ್ಬರು ಪ್ರೇಕ್ಷಕರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗುಡುಗು ಸಹಿತ ಭಾರೀ ಮಳೆಯ ನಂತರ ಹನ್ಸ್ದಿಹಾ ಪ್ರದೇಶದ ಆಟದ ಮೈದಾನದ ಪಕ್ಕದಲ್ಲಿ ಹಲವಾರು ಪ್ರೇಕ್ಷಕರು ಟೆಂಟ್ ಅಡಿಯಲ್ಲಿ ಆಶ್ರಯ ಪಡೆದಾಗ ಈ ಘಟನೆ ಸಂಭವಿಸಿದೆ.

Two killed in lightning strike during football match in Jharkhand

ಸಿಡಿಲು ಟೆಂಟ್‌ಗೆ ಅಪ್ಪಳಿಸಿದ್ದು, ಶಿವಲಾಲ್ ಸೊರೆನ್ (32) ಮತ್ತು ಸಂತ್ಲಾಲ್ ಹೆಂಬ್ರಾಮ್ (20) ಎಂಬ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಹನ್ಸ್ದಿಹಾ ಪೊಲೀಸ್ ಠಾಣಾಧಿಕಾರಿ ಜಿತೇಂದ್ರ ಕುಮಾರ್ ಸಾಹು ತಿಳಿಸಿದ್ದಾರೆ.

ಎಲ್ಲಾ ಗಾಯಾಳುಗಳನ್ನು ಸರೈಯಾಹತ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಜಿಲ್ಲಾ ಸಿವಿಲ್ ಸರ್ಜನ್ ಬಚ್ಚಾ ಪ್ರಸಾದ್ ಸಿಂಗ್ ಮಾತನಾಡಿ, ಅವರಲ್ಲಿ ಒಬ್ಬರನ್ನು ಪ್ರಥಮ ಚಿಕಿತ್ಸೆ ನೀಡಿದ ನಂತರ ಬಿಡುಗಡೆ ಮಾಡಲಾಗಿದ್ದು, ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾ ಸಿವಿಲ್ ಸರ್ಜನ್ ಬಚ್ಚಾ ಪ್ರಸಾದ್ ಸಿಂಗ್ ಮಾತನಾಡಿ, ಅವರಲ್ಲಿ ಒಬ್ಬರನ್ನು ಪ್ರಥಮ ಚಿಕಿತ್ಸೆ ನೀಡಿದ ನಂತರ ಡಿಸ್ಜಾರ್ಜ್‌ ಮಾಡಲಾಗಿದ್ದು, ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.

ಇದೇ ಮಾದರಿ ಕಳೆದ ಒಡಿಶಾದ ಭಾನುವಾರ ಮಧ್ಯಾಹ್ನ ಸುಂದರ್‌ಗಢ ಜಿಲ್ಲೆಯ ಬ್ರಹ್ಮಣಿ ತರಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಗರ್ಜನ್ ಗ್ರಾಮ ಪಂಚಾಯತ್ (ಜಿಪಿ) ಯ ಬಿರುಯಲ್ ಗ್ರಾಮದಲ್ಲಿ ಪುಟ್‌ಬಾಲ್‌ ಪಂದ್ಯಾಟದ ವೇಳೆ ಸಿಡಿಲು ಬಡಿದು ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಮೃತರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+