ಬೆಂಗಳೂರಿನ ಎರಡು ಕೇಂದ್ರೀಯ ಸಶಸ್ತ್ರ ಪಡೆಗಳು ಉತ್ತರ ಪ್ರದೇಶಕ್ಕೆ

ಬೆಂಗಳೂರು, ಮೇ 30: ಬೆಂಗಳೂರು ಬಳಿ ಇರುವ ಕೇಂದ್ರೀಯ ಮೀಸಲು ಪಡೆ(ಸಿಆರ್‌ಪಿಎಫ್) ಇದೀಗ ಉತ್ತರ ಪ್ರದೇಶದ ಚಂದೌಲಿಗೆ ಸ್ಥಳಾಂತರವಾಗಲಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

ಬೆಂಗಳೂರು ಹತ್ತಿರ ತರಳು ಗ್ರಾಮದಲ್ಲಿ ಕೇಂದ್ರೀಯ ಮೀಸಲು ಪಡೆಯ ಎರಡು ಕೇಂದ್ರಗಳಿತ್ತು. ಅವುಗಳನ್ನು ಸ್ಥಳಾಂತರಿಸಲಾಗುತ್ತಿದೆ. ಕೇಂದ್ರದಲ್ಲಿ 8 ಸಾವಿರ ಸಿಬ್ಬಂದಿಗಳಿದ್ದರು ಎಂದು ಮೂಲಗಳು ತಿಳಿಸಿವೆ. ಈ ಎರಡು ಕೇಂದ್ರಗಳು ಉತ್ತರ ಪ್ರದೇಶದ ವಾರಣಾಸಿ ವಿಭಾಗದ ಚಂದೌಲಿಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮೇ 17ರಂದು ಕಚೇರಿಗೆ ಪತ್ರ ಬರೆಯಲಾಗಿದೆ.

ಇದೀಗ ಸಿಆರ್‌ಪಿಎಫ್‌ನ ಈ ಎರಡು ಕೇಂದ್ರಗಳು ವಾರಣಾಸಿಯಲ್ಲಿ 4 ಸಾವಿರ ಚದರಡಿಯ ರೇಂಜ್ ಹೆಡ್‌ಕ್ವಾಟರ್ಸ್‌ ಮತ್ತು ಮುಘಲ್ ಸರಾಯಿಯಲ್ಲಿನ 57,840 ಚದರಡಿಯ ಗ್ರೂಪ್ ಸೆಂಟರ್ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದೆ. ನಂತರದಲ್ಲಿ ಚಂದೌಲಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಭೂಮಿ ಪಡೆದು ನೆಲೆ ಸ್ಥಾಪಿಸಿದ ಬಳಿಕ ಅಲ್ಲಿ ವರ್ಗಾವಣೆಗೊಳ್ಳಲಿವೆ ಎಂದು ಸಚಿವಾಲಯ ಮೂಲಗಳು ತಿಳಿಸಿವೆ.

Two CRPF centers in Karnataka shifted Uttar Pradesh

ಈಗಾಗಲೇ ಉತ್ತರ ಪ್ರದೇಶದಲ್ಲಿ ಸಿಆರ್‌ಪಿಎಳ್‌ನ ಐದು ಗ್ರೂಪ್ ಸೆಂಟರ್‌ಗಳಿದ್ದು, ಅಲಹಾಬಾದ್, ಲಖನೌ, ರಾಂಪುರ, ಗ್ರೇಟರ್ ನೊಯ್ಡಾ ಮತ್ತು ಅಮೇಠಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದೀಗ ಚಂದೌಲಿ ಇದಕ್ಕೆ ಸೇರ್ಪಡೆಯಾಗಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರು ಜನಿಸಿರುವ ಬಾಬಹೋರಾ ಗ್ರಾಮವು ಚಂದೌಲಿ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಸಾಮಾನ್ಯವಾಗಿ ಗ್ರೂಪ್ ಸೆಂಟರ್‌ನಲ್ಲಿ ನಾಲ್ಕರಿಂದ ಐದು ಬೆಟಾಲಿಯನ್‌ಗಳನ್ನು ಹೊಂದಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+