ಮೆಮನ್ ಬೆಂಬಲಿಸುವವರು ದೇಶ ದ್ರೋಹಿಗಳು: ಟ್ವೀಟ್ ಅಭಿಮತ
ಬೆಂಗಳೂರು, ಜುಲೈ 21: ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿ ನಾಗ್ಪುರದ ಜೈಲಿನಲ್ಲಿರುವ ಯಾಕೂಬ್ ಮೆಮನ್ ಗೆ ಇದ್ದ ಕೊನೆಯ ಆಶಾಕಿರಣವೂ ಕತ್ತಲಾಗಿಬಿಟ್ಟಿತು. ಮೆಮನ್ ಸಲ್ಲಿಸಿದ್ದ ಕ್ಯೂರೇಟರ್ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ಬದಿಗೆ ಸರಿಸಿತು. ಮೊದಲೇ ಮೌನಿಯಾದ ಮೆಮನ್ ಈಗ ಮೂಕನಾಗಿ ಅಳಿದುಳಿದ ದಿನಗಳನ್ನು ಎಣಿಸುತ್ತಿದ್ದಾನೆ.
1993ರ ಸರಣಿ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ ಯಾಕೂಬ್ ಅಬ್ದುಲ್ ರಜಾಕ್ ಮೆಮನ್ ಗೆ ಜುಲೈ 30ರಂದು ಗಲ್ಲಿಗೇರಿಸಲು ಸಕಲ ಸಿದ್ಧತೆಯಾಗಿದೆ ಎಂದು ನಾಗ್ಪುರದ ಜೈಲಾಧಿಕಾರಿಗಳು ಹೇಳಿದ್ದಾರೆ. ಜುಲೈ 30-ಮೆಮನ್ ಹುಟ್ಟುಹಬ್ಬದ ದಿನಾಂಕವಾಗಿದ್ದು, ಅಂದೇ ಆತ ನೇಣಿಗೇರಬೇಕಿದೆ. ಮಹಾರಾಷ್ಟ್ರದ ನಾಗ್ಪುರ ಜೈಲಿನಲ್ಲಿ ಜುಲೈ 30ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೇರಿಸಲು ಮುಹೂರ್ತ ಫಿಕ್ಸ್ ಆಗಿದೆ.[ಹುಟ್ಟುಹಬ್ಬದ ದಿನದಂದೇ ಯಾಕೂಬ್ ಗೆ ಗಲ್ಲು ಶಿಕ್ಷೆ]
ಮುಂಬೈನಲ್ಲಿ 1993 ಮಾರ್ಚ್ 12 ನಡೆದಿದ್ದ ಸರಣಿ ಬಾಂಬ್ ಸ್ಫೋಟದಲ್ಲಿ 257 ಮಂದಿ ಮೃತಪಟ್ಟು, 713 ಮಂದಿ ಗಾಯಗೊಂಡಿದ್ದರು. ಸಿಬಿಐ ಇದರ ತನಿಖೆ ನಡೆಸಿ ದಾವೂದ್ ಇಬ್ರಾಹಿಂ ಸೇರಿದಂತೆ ಹಲವರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ಟೈಗರ್ ಮೆಮನ್ ನ ಸೋದರನಾದ ಯಾಕೂಬ್ ಮೆಮನ್(53) ಚಾರ್ಟೆಡ್ ಅಕೌಂಟೆಂಟ್ ಕೆಲಸ ಮಾಡುತ್ತಿದ್ದ.
ಈ ವಿಷಯವನ್ನು ಕೂಡಾ ಟ್ವಿಟ್ಟರ್ ನಲ್ಲಿ ಪ್ರಸ್ತಾಪಿಸಿ ಒಬ್ಬ ಒಳ್ಳೆ CAಗೆ ತಪ್ಪು ದಾರಿ ತೋರಿಸಲಾಗಿದೆ ಎಂದಿದ್ದಾರೆ. ಟ್ವಿಟ್ಟರ್ ನಲ್ಲಿ ಬಹುತೇಕ ಮಂದಿ ಮೆಮನ್ ಗೆ ತುಂಬಾ ತಡವಾಗಿ ಈ ಶಿಕ್ಷೆ ಸಿಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೆಮನ್ ಗಲ್ಲಿಗೇರುವುದು ಖಚಿತ
ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ಟಾಡಾ ನ್ಯಾಯಾಲಯ ಮೆಮನ್ ಸೇರಿದಂತೆ 10 ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಮರಣದಂಡನೆ ಶಿಕ್ಷೆ ಪ್ರಶ್ನಿಸಿ ಮೆಮೊನ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಏಪ್ರಿಲ್ 9, 2015 ರಂದು ಅರ್ಜಿ ತಿರಸ್ಕರಿಸಿತ್ತು.
ನಂತರ ರಾಷ್ಟ್ರಪತಿಗಳಿಗೆ ಕ್ಷಮಾದಾನ ನೀಡುವಂತೆ ಮೆಮನ್ ಬೇಡಿಕೊಂಡಿದ್ದ ಅರ್ಜಿ ಕೂಡಾ ಜೀವದಾನ ನೀಡಲಿಲ್ಲ. ಈಗ ಕ್ಯೂರೇಟರ್ ಅರ್ಜಿ ಕೂಡಾ ವಜಾಗೊಂಡಿದ್ದು, ಮೆಮನ್ ಗಲ್ಲಿಗೇರುವುದು ಖಚಿತವಾಗಿದೆ.
|
ಗಲ್ಲುಗೇರಿಸುವುದರಲ್ಲಿ ತಪ್ಪೇನಿಲ್ಲ
ಗಲ್ಲುಗೇರಿಸುವುದರಲ್ಲಿ ತಪ್ಪೇನಿಲ್ಲ, ಉಗ್ರರು, ಬಾಂಬ್ ಇಡುವ ಇಂಥವರಿಗೆ ಇದೇ ಸರಿಯಾದ ಶಿಕ್ಷೆ.
|
ಕೊನೆಗೂ ಕಾನೂನಿನ ಕಣ್ಣಿನಲ್ಲಿ ಮೆಮನ್ ಉಗ್ರನಾದ
ಕೊನೆಗೂ ಕಾನೂನಿನ ಕಣ್ಣಿನಲ್ಲಿ ಮೆಮನ್ ಉಗ್ರನಾಗಿ ಕಂಡಿದ್ದಾನೆ. ಅದರೂ 22 ವರ್ಷಗಳ ಕಾಲ ತುಂಬಾ ವಿಳಂಬವಾಯಿತು.
|
ಒಂದೇ ಒಂದು ಬ್ಯಾಕ್ಟೀರಿಯಾವನ್ನು ಬಿಡಬಾರದು
ಭಯೋತ್ಪಾದನೆ ಮಾಡುವ ಒಂದೇ ಒಂದು ಬ್ಯಾಕ್ಟೀರಿಯಾವನ್ನು ಸುಮ್ಮನೆ ಬಿಡಬಾರದು.
|
ಮೆಮನ್ ಬೆಂಬಲಿಸುವವರಿಗೆ ಟಾಂಗ್ ಕೊಟ್ಟರು
ಮೆಮನ್ ಬೆಂಬಲಿಸುವವರಿಗೆ ಅಲ್ಲೇ ಪ್ರತಿಕ್ರಿಯಿಸಿದ ಕೆಲ ಸಾರ್ವಜನಿಕರು.
|
ಮೊದಲು ಬಾಕಿ ಇರುವ ಪ್ರಕರಣಗಳನ್ನು ನೋಡಿ
ಮೊದಲು ಬಾಕಿ ಇರುವ ಪ್ರಕರಣಗಳನ್ನು ನೋಡಿ, ಎಲ್ಲವನ್ನು ಇತ್ಯರ್ಥಗೊಳಿಸಿ.











Click it and Unblock the Notifications