ವಿಶ್ವದಾಖಲೆ ಬರೆದ ಇಸ್ರೊಗೆ ಟ್ವಿಟ್ಟರಿನಲ್ಲಿ ಅಭಿನಂದನೆಗಳ ಮಹಾಪೂರ

Subscribe to Oneindia Kannada
ಬೆಂಗಳೂರು, ಫೆಬ್ರವರಿ 15: ಏಕಕಾಲಕ್ಕೆ ಒಂದೇ ಉಡಾವಣಾ ವಾಹಕದಲ್ಲಿ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿ ಇಸ್ರೊ ವಿಶ್ವದಾಖಲೆ ಬರೆದಿದೆ. ವಿಶ್ವದ ಬೇರಾವ ದೇಶಗಳೂ ಮಾಡದ ಈ ಐತಿಹಾಸಿಕ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯಿಂದ ಆದಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯವರೆಗೆ ಗಣ್ಯಾತಿಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.[104 ಉಪಗ್ರಹಗಳನ್ನು ಒಟ್ಟಿಗೆ ಉಡಾಯಿಸಿ ಹೊಸ ದಾಖಲೆ ಬರೆದ ಇಸ್ರೋ]

ಭಾರತೀಯರಿಂದ ಇಸ್ರೊ ವಿಜ್ಞಾನಿಗಳಿಗೆ ಸೆಲ್ಯೂಟ್ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಸ್ರೋ ದೇಶದ ಬಾಹ್ಯಾಕಾಶ ತಂತ್ರಜ್ಞಾನದ ಅಭಿವೃದ್ಧಿಗೆ ಇಂಥಹ ಕೊಡುಗೆಗಳನ್ನು ನೀಡುತ್ತಿರಲಿ ಎಂದು ಘನವೆತ್ತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಹೀಗೆ ಒಬ್ಬೊಬ್ಬರೂ ತಮ್ಮದೇ ರೀತಿಯಲ್ಲಿ ಶುಭಾಷಯಗಳನ್ನು ಕೋರಿದ್ದಾರೆ.[ನಭಕ್ಕೆ ಹಾರಿದ 104 ಉಪಗ್ರಹಗಳ ಕಾರ್ಯ ಯೋಜನೆಯೇನು?]

ನರೇಂದ್ರ ಮೋದಿ

ಕಾರ್ಟೋಸ್ಟಾಟ್ ಜತೆಗೆ 103 ಉಪಗ್ರಹಗಳನ್ನು ಪಿಎಸ್ಎಲ್'ವಿ-ಸಿ37 ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೊಗೆ ಅಭಿನಂದನೆಗಳು. ನಮ್ಮ ಬಾಹ್ಯಾಕಾಶ ವಿಜ್ಞಾನ ಸಮುದಾಯಕ್ಕೆ ಇದೊಂದು ಹೆಮ್ಮೆಯ ಕ್ಷಣ. ಭಾರತ ನಮ್ಮ ವಿಜ್ಞಾನಿಗಳಿಗೆ ಸೆಲ್ಯೂಟ್ ಮಾಡುತ್ತದೆ ಎಂದು ಪ್ರಧಾನ ನರೇಂದ್ರ ಮೋದಿ ತಮ್ಮ ಟ್ವಿಟ್ಟರ್ ಸಂದೇಶದಲ್ಲಿ ಹೇಳಿದ್ದಾರೆ.[ಇಸ್ರೋ ಅಧ್ಯಕ್ಷ ಕನ್ನಡಿಗ ಕಿರಣ್ ಕುಮಾರ್ ವ್ಯಕ್ತಿಚಿತ್ರ]

ಪ್ರಣಬ್ ಮುಖರ್ಜಿ

104 ಉಪಗ್ರಹಗಳನ್ನು ಪಿಎಸ್ಎಲ್'ವಿ-ಸಿ37ರಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೊಗೆ ಅಭಿನಂದನೆಗಳು. ನಮ್ಮ ಬಾಹ್ಯಾಕಾಶ ಕಾರ್ಯಕ್ರಮಗಳ ಇತಿಹಾಸದಲ್ಲಿ ಈ ದಿನ ಮೈಲುಗಲ್ಲಾಗಲಿದೆ. ಈ ಸಾಧನೆ ದೇಶಕ್ಕೆ ಹೆಮ್ಮೆ ತಂದಿದೆ. ಈ ಯಶಸ್ವೀ ಸಾಧನೆ ಮೂಲಕ ಭಾರತ ತನ್ನ ಬಾಹ್ಯಾಕಾಶ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಇದೇ ರೀತಿ ಮುಂದೆಯೂ ಇಸ್ರೋ ಕೆಲಸ ಮಾಡಿ ಭಾರತದ ಬಾಹ್ಯಾಕಾಶ ಕ್ಷೇತ್ರದ ಻ಅಭಿವೃದ್ಧಿಗೆ ಕೈಜೋಡಿಸಲಿ ಎಂದು ಕೇಳಿಕೊಳ್ಳುವುದಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ

ಒಂದೇ ಯೋಜನೆಯಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡಿ ವಿಶ್ವದಾಖಲೆ ಬರೆದ ಇಸ್ರೊಗೆ ಅಭಿನಂದನೆಗಳು. ಇದು ಭಾರತದ ಬಾಹ್ಯಾಕಾಶ ಯೋಜನೆಗಳು ಮತ್ತು ಭಾರತಕ್ಕೆ ಹಮ್ಮೆಯ ಕ್ಷಣಗಳು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಬಿ.ಎಸ್.ಯಡಿಯೂರಪ್ಪ

ಇಸ್ರೊ ಹಾಗೂ ಕಿರಣ್ ಕುಮಾರ್ ಮತ್ತು ತಂಡಕ್ಕೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕೆ ಅಭಿನಂದನೆಗಳು ಅಂತ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸಂದೇಶ ನೀಡಿದ್ದಾರೆ.

ವೆಂಕಯ್ಯ ನಾಯ್ಡು

ಇಸ್ರೊ ತಂಡಕ್ಕೆ ಅಭಿನಂದನೆಗಳು. ಪಿಎಸ್ಎಲ್'ವಿ-ಸಿ37 ನಲ್ಲಿ ಕಾರ್ಟೋಸ್ಟಾಟ್ ಜತೆಗೆ 103 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದೀರಿ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಟ್ವಿಟ್ಟರ್ ಸಂದೇಶದಲ್ಲಿ ಹೇಳಿದ್ದಾರೆ.

ಪ್ರಕಾಶ್ ಜಾವ್ಡೇಕರ್

ದಾಖಲೆಯ 104 ಉಪಗ್ರಹಗಳನ್ನು ಒಂದೇ ಯೋಜನೆಯಲ್ಲಿ ಉಡಾವಣೆ ಮಾಡಿದ ಇಸ್ರೊ ವಿಜ್ಯಾನಿಗಳ ತಂಡಕ್ಕೆ ಅಭಿನಂದನೆಗಳು ಅಂತ ಪ್ರಕಾಶ್ ಜಾವ್ಡೇಕರ್ ತಮ್ಮ ಶುಭ ಸಂದೇಶದಲ್ಲಿ ತಿಳಿಸಿದ್ದಾರೆ. ದೇಶಕ್ಕೆ ಇದೊಂದು ಹೆಮ್ಮೆಯ ಕ್ಷಣ ಎಂದು ಅವರು ಬಣ್ಣಿಸಿದ್ದಾರೆ.

ಜಯಂತ್ ಸಿನ್ಹಾ

ಇಸ್ರೊಗೆ ಅಭಿನಂದನೆಗಳು. ದಾಖಲೆಯ 104 ಉಪಗ್ರಹಗಳ ಉಡಾವಣೆಯಿಂದ ನಮಗೆಲ್ಲಾ ಹೆಮ್ಮೆಯಾಗಿದೆ. ನಮ್ಮ ಇಸ್ರೋ ವಿಜ್ಞಾನಿಗಳು ಅಪರೂಪದ ಸಾಧನೆ ಮೆರೆದಿದ್ದಾರೆ ಎಂದು ಕೇಂದ್ರ ಸಚಿವ ಜಯಂತ್ ಸಿನ್ಹಾ ಬಣ್ಣಿಸಿದ್ದಾರೆ.

ರಾಜ್ದೀಪ್ ಸರ್ದೇಸಾಯಿ

ಇಸ್ರೊಗೆ ಜೈ! ಈ ಮೇಕ್ ಇನ್ ಇಂಡಿಯಾ ಸಂಸ್ಥೆಯೊಂದಕ್ಕೆ ನಾವೆಲ್ಲಾ ಹೆಮ್ಮೆ ಪಡಬೇಕು ಎಂದು ಟ್ವೀಟ್ ಮಾಡಿದ್ದಾರೆ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ.

ಕಿರಣ್ ರಿಜಿಜು

ಇಸ್ರೊ ಯಶಸ್ಸನ್ನು ಸಂಭ್ರಮಿಸೋಣ! 104 ಉಪಗ್ರಹಗಳನ್ನು ಒಮ್ಮೆಗೆ ಪಿಎಸ್ಎಲ್'ವಿ - ಸಿ37 ಮೂಲಕ ಉಡಾವಣೆ ಮಾಡಿದ ಇಸ್ರೊಗೆ ಅಭಿನಂದನೆಗಳು ಎಂದು ಕೇಂದ್ರ ಗೃಹಖಾತೆ ರಾಜ್ಯ ದರ್ಜೆ ಸಚಿವ ಕಿರಣ್ ರಿಜಿಜು ಟ್ವಿಟ್ಟರಿನಲ್ಲಿ ಹೇಳಿದ್ದಾರೆ.

ಅಮಿತಾಬ್ ಬಚ್ಚನ್

ಅಭಿನಂದನೆಗಳು. ಒಂದೇ ಪಿಎಸ್ಎಲ್'ವಿಯಲ್ಲಿ 104 ಉಪಗ್ರಹ ಉಡಾವಣೆ ಮಾಡಿ ಇಸ್ರೊ ವಿಶ್ವದಾಖಲೆ ಮಾಡಿದೆ. ಒಂದು ದಿನ ನಾವೂ ಚಂದ್ರನ ಮೇಲೆ ಕಾಲಿಡುವ ನಿರೀಕ್ಷೆ ಇದೆ ಎಂದು ಟ್ವೀಟ್ ಮಾಡಿದ್ದಾರೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian Space Research Organization (ISRO) created history by launching 104 satellite in a single mission. Prime Minister Narendra Modi and so many other celebrities congratulated ISRO for their great success.
Please Wait while comments are loading...