ತಿರುಪತಿಯ 300 ರೂ. ದರ್ಶನ ಟಿಕೆಟ್ ರೆಪ್ಪೆ ಮುಚ್ಚುವುದರೊಳಗೆ ಖಾಲಿಯಾಗುವುದಕ್ಕೆ ಕಾರಣ ಹೇಳಿದ TTD

ತಿರುಪತಿ ತಿರುಮಲ ತಿಮ್ಮಪ್ಪನ ಸನ್ನಿಧಾನಕ್ಕೆ ದಿನಾ ಲಕ್ಷಾಂತರ ಭಕ್ತರು ಬರ್ತಾರೆ. ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಮತ್ತೂ ಹೆಚ್ಚಿದೆ. ಸರ್ವ ದರ್ಶನದಲ್ಲಿ ಹೋದರೆ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕು. ಅದಕ್ಕಾಗಿ ಜನ 300 ರೂಪಾಯಿ ವಿಶೇಷ ದರ್ಶನ ಟಿಕೆಟ್‌ ಬುಕ್‌ ಮಾಡ್ತಾರೆ. ಆದ್ರೆ ಈಗ ಈ ಟಿಕೆಟ್‌ ಸಿಗೋದೇ ಕಷ್ಟ. ಮುನ್ನೂರು ರೂಪಾಯಿಯ ಸ್ಪೆಷಲ್‌ ದರ್ಶನ ಟಿಕೆಟ್‌ಗೆ ಪೈಪೋಟಿ ಹೆಚ್ಚಾಗ್ತಾ ಇದೆ. ದಿನಕ್ಕೆ ಇಂತಿಷ್ಟು ಭಕ್ತರು ದರ್ಶನಕ್ಕೆ ಬರಬಹುದು ಎನ್ನುವ ಅಂದಾಜಿನ ಮೇರೆಗೆ ಟಿಕೆಟ್‌ ಬಿಡುಗಡೆ ಮಾಡಲಾಗುತ್ತದೆ. ಆದ್ರೆ ಈಗ ಕೋಟಾಕ್ಕಿಂತ ಹೆಚ್ಚಿನ ಬೇಡಿಕೆ ಟಿಕೆಟ್‌ಗೆ ಇದೆ. ಹೀಗಾಗಿ ಈ ಟಿಕೆಟ್‌ ಸಿಗುವುದು ಅಥವಾ ಬುಕ್‌ ಮಾಡುವುದು ಭಕ್ತರಿಗೆ ಕಷ್ಟವಾಗ್ತಾ ಇದೆ ಎಂದು ತಿರುಮಲ ತಿರುಪತಿ ದೇವಸ್ಥಾನ (TTD) ಸ್ಪಷ್ಟಪಡಿಸಿದೆ.

ಆನ್‌ಲೈನ್ ಟಿಕೆಟ್ ಬುಕಿಂಗ್‌ನಲ್ಲಿ ಟೆಕ್ನಿಕಲ್‌ ಪ್ರಾಬ್ಲಂ ಜಾಸ್ತಿಯಾಗ್ತಾ ಇದೆ ಅಂತ ಸೋಶಿಯಲ್‌ ಮಿಡಿಯಾದಲ್ಲಿ ಭಕ್ತರು ಆತಂಕ ಹೊರ ಹಾಕ್ತಾ ಇದ್ದಾರೆ. ಇದನ್ನು ಗಮನಿಸಿದ ಟಿಟಿಡಿ ಸಮಸ್ಯೆಗೆ ಏನು ಕಾರಣ ಎನ್ನುವ ಸ್ಷಷ್ಟ ಮಾಹಿತಿ ನೀಡಿದೆ.

TTD Clarifies The Reason Why 300 Rupees Darshan Ticket Sell Out Fast Tirupati Tirumala Online Booking

ದರ್ಶನದ ಟಿಕೆಟ್‌ ಬುಕ್‌ ಮಾಡಲು ಟಿಟಿಡಿ ತನ್ನದೇ ಆದ ಆನ್‌ಲೈನ್ ಬುಕಿಂಗ್ ಪ್ಲಾಟ್‌ಫಾರ್ಮ್ ಹೊಂದಿದೆ. ಇಲ್ಲಿ ಟಿಕೆಟ್‌ ಬುಕ್‌ ಮಾಡುವಾಗ ಬರುವ ಟ್ರಾಫಿಕ್‌ ಅನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುವಂತೆ ಗೂಗಲ್ ಕ್ಲೌಡ್ ಪ್ಲಾಟ್‌ಫಾರ್ಮ್, ಲೋಡ್ ಬ್ಯಾಲೆನ್ಸಿಂಗ್, ಆಟೋ-ಸ್ಕೇಲಿಂಗ್, ಡಿಸ್ಟ್ರಿಬ್ಯೂಟೆಡ್ ಅಪ್ಲಿಕೇಶನ್ ಆರ್ಕಿಟೆಕ್ಚರ್ ಮತ್ತು ಹಾರಿಜಾಂಟಲ್ ಸ್ಕೇಲಿಂಗ್‌ನಂತಹ ತಂತ್ರಜ್ಞಾನ ಬಳಸಲಾಗಗ್ತದೆ ಎಂದು ಟಿಟಿಡಿ ಹೇಳಿದೆ. ಇನ್ನು ಟೆಕ್ನಿಕಲ್‌ ಟೀಂ ಸಿಸ್ಟಮ್ ಕಾರ್ಯಕ್ಷಮತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತವೆ.

ಟಿಕೆಟ್ ರಿಲೀಸ್‌ ಮಾಡುವಾಗ ಅರ್ಜಿ ಪರಿಶೀಲನೆ, ಇನ್‌ಫ್ರಾಸ್ಟ್ರಕ್ಚರ್‌ ಹೆಲ್ತ್‌, ವಹಿವಾಟು ಮತ್ತು ಭದ್ರತೆಯ ಮೇಲ್ವಿಚಾರಣೆ ಮಾಡಲು ಟೆಕ್ನಿಕಲ್‌ ವಾರ್‌ ರೂಮ್‌ ಕೂಡಾ ಇದೆ ಅಂತ ಟಿಟಿಡಿ ತಿಳಿಸಿದೆ.

ಲಭ್ಯವಿರುವ ಕೋಟಾಕ್ಕಿಂತ ಸುಮಾರು ಒಂಬತ್ತು ಪಟ್ಟು ಬೇಡಿಕೆ

ಟಿಟಿಡಿ ಪ್ರಕಾರ, ಟಿಕೆಟ್‌ಗೆ ಬೇಡಿಕೆ ಎಷ್ಟು ಹೆಚ್ಚಾಗಿದೆ ಅಂದ್ರೆ ಸುಮಾರು ಆರು ಲಕ್ಷ ಬಳಕೆದಾರರು ಏಕಕಾಲದಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಲು ಪ್ರಯತ್ನಿಸಬಹುದು. ಎಲ್ಲಾರೂ ಕುಟುಂಬ ನಾಲ್ಕು ಸದಸ್ಯರಿಗೆ ಟಿಕೆಟ್‌ಗಳನ್ನು ಬುಕ್ ಮಾಡಲು ಪ್ರಯತ್ನಿಸಿದ್ರೂ ಸಂಭಾವ್ಯ ಬೇಡಿಕೆ 24 ಲಕ್ಷ ಟಿಕೆಟ್‌ಗಳನ್ನು ತಲುಪಬಹುದು. ಆದರೆ ಇಲ್ಲಿ ಇರುವ ಟಿಕೆಟ್‌ ಕೇವಲ 2.69 ಲಕ್ಷ ಮಾತ್ರ. ಅಂದರೆ ಮೀಸಲಿಟ್ಟಿರುವ ಟಿಕೆಟ್‌ನ ಒಂಭತ್ತು ಪಟ್ಟು ಹೆಚ್ಚು ಬೇಡಿಕೆ ಇದೆ. ಸಾವಿರಾರು ಭಕ್ತರು ಒಂದೇ ಸ್ಲಾಟ್‌ನ ಟಿಕೆಟ್‌ ಬುಕ್‌ ಮಾಡಲು ಹೋದಾಗ ಪೋರ್ಟಲ್‌ ಓಪನ್‌ ಆದ ತಕ್ಷಣವೇ ಟಿಕೆಟ್‌ ಖಾಲಿಯಾಗಿ ಬಿಡುತ್ತವೆ ಎಂದು ಟಿಟಿಡಿ ಹೇಳಿದೆ.

ಟ್ರಾಫಿಕ್ ನಿರ್ವಹಿಸಲು ವರ್ಚುವಲ್ ಕ್ಯೂ

ದರ್ಶನ ಟಿಕೆಟ್‌ ಬುಕ್‌ ಮಾಡಲು ಜನ ಈ ರೀತಿ ಮುಗಿ ಬೀಳುತ್ತಿರೋದ್ರಿಂದ ಈ ಟ್ರಾಫಿಕ್ ನಿಯಂತ್ರಿಸಲು ಮತ್ತು ಬ್ಯಾಕೆಂಡ್ ವ್ಯವಸ್ಥೆ ಮೇಲಿನ ಅತಿಯಾದ ಹೊರೆ ತಡೆಯಲು ವರ್ಚುವಲ್ ಕ್ಯೂ ಬಳಸಲಾಗುತ್ತದೆ ಎಂದು ಟಿಟಿಡಿ ಹೇಳಿದೆ. ವರ್ಚುವಲ್ ಕ್ಯೂ ಅಂದರೆ ಭಕ್ತರಿಗೆ ಟಿಕೆಟ್ ನಿರಾಕರಿಸುವ ಉದ್ದೇಶ ಖಂಡಿತಾ ಅಲ್ಲ. ಇದು ಒಂದೇ ಸಮಯದಲ್ಲಿ ಒಟ್ಟಿಗೆ ಬರುವ ರಿಕ್ವೆಸ್ಟ್‌ಗಳನ್ನು ನಿರ್ವಹಿಸುವ ತಾಂತ್ರಿಕ ಕಾರ್ಯವಿಧಾನ ಎಂದು ಅದು ಸ್ಪಷ್ಟಪಡಿಸಿದೆ.

ಹೆಚ್ಚಿನ ಬೇಡಿಕೆಯಿಂದಾಗಿ ಟಿಕೆಟ್‌ಗಳು ಬೇಗನೆ ಖಾಲಿಯಾದಾಗ ಸ್ಲಾಟ್ ಅನ್‌ಅವೈಲೇಬಲ್‌ ಎನ್ನುವ ಮೆಸೇಜ್‌ ಕಾಣಿಸಬಹುದು. ಅದನ್ನೇ ಟೆಕ್ನಿಕಲ್‌ ಪ್ರಾಬ್ಲಂ ಎಂದು ಹೇಳುವುದು ಸರಿಯಲ್ಲ ಎಂದು ಟಿಟಿಡಿ ತಿಳಿಸಿದೆ.

ಆನ್‌ಲೈನ್ ಪೇಮೆಂಟ್‌ ಅದರ ಅಪ್ಲಿಕೇಶನ್ ಮಾತ್ರವಲ್ಲ ಎಕ್ಸ್‌ಟರ್ನಲ್‌ ಪೇಮೆಂಟ್‌ ಗೇಟ್‌ವೇಗಳು, ಬ್ಯಾಂಕಿಂಗ್ ನೆಟ್‌ವರ್ಕ್‌ಗಳು ಮತ್ತು ಯುಪಿಐ ವ್ಯವಸ್ಥೆಗಳ ಮೇಲೂ ಅವಲಂಬಿತವಾಗಿದೆ ಎಂದು ಟಿಟಿಡಿ ಒತ್ತಿ ಹೇಳಿದೆ. ಆದ್ದರಿಂದ, ಪೇಮೇಂಟ್‌ ಆಗದೇ ಹೋದಾಗ ನಿರ್ದಿಷ್ಟ ಹಂತವನ್ನು ಪರಿಶೀಲಿಸುವ ಅಗತ್ಯವಿದೆ. ಟಿಕೆಟ್ ಸಿಕ್ಕಿಲ್ಲ ಎಂದಾಕ್ಷಣ ಅದನ್ನು ಆನ್‌ಲೈನ್ ಬುಕಿಂಗ್ ವ್ಯವಸ್ಥೆಯ ವೈಫಲ್ಯ ಎಂದು ಪರಿಗಣಿಸಬಾರದು ಎಂದು ಅದು ಹೇಳಿದೆ.

ಬುಕಿಂಗ್ ವ್ಯವಸ್ಥೆಗೆ ನಿರಂತರ ಅಪ್‌ಡೇಟ್‌

ಭಕ್ತರ ಪ್ರತಿಕ್ರಿಯೆಯ ಆಧಾರದ ಮೇಲೆ ಆನ್‌ಲೈನ್ ಬುಕಿಂಗ್, ಅಪ್ಲಿಕೇಶನ್ ಮತ್ತು ಡೇಟಾಬೇಸ್ ಪರ್ಫಾರ್ಮೆನ್ಸ್‌, ಹೆಚ್ಚಿನ ಲೋಡ್ ನಿರ್ವಹಣೆ, ಭದ್ರತೆ, ಆಂಟಿ-ಬೋಟ್ ಕಾರ್ಯವಿಧಾನಗಳು ಮತ್ತು ಪಾವತಿ ಪ್ರಕ್ರಿಯೆ ಸುಧಾರಣೆಗಳ ಕುರಿತು ಟಿಟಿಡಿ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದೆ.

ಶ್ರೀ ಪದ್ಮಾವತಿ ಅಮ್ಮವಾರಿ ದೇವಸ್ಥಾನ, ಶ್ರೀ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಮತ್ತು ಶ್ರೀ ಗೋವಿಂದರಾಜ ಸ್ವಾಮಿ ದೇವಸ್ಥಾನಗಳ ದರ್ಶನ ಮತ್ತು ಸೇವಾ ಕೋಟಾಗಳನ್ನು ಒಂದೇ ಆನ್‌ಲೈನ್ ವ್ಯವಸ್ಥೆಯ ಮೂಲಕ ರಿಲೀಸ್‌ ಮಾಡಲಾಗುತ್ತದೆ ಎಂದು ಟಿಟಿಡಿ ಗಮನಿಸಿದೆ. ಈ ಸೇವೆಗಳಿಗೆ ಬೇಡಿಕೆ ಕಡಿಮೆ ಇರುವುದರಿಂದ, ಬುಕಿಂಗ್‌ ಸರಾಗವಾಗಿ ಆಗಿ ಬಿಡುತ್ತದೆ ಎಂದು ಅದು ಹೇಳಿದೆ.

ಬೇಡಿಕೆ ಹೆಚ್ಚಾಗಿದ್ದಾಗ ಎಲ್ಲಾ ಬುಕಿಂಗ್ ಪ್ರಯತ್ನವೂ ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬುದನ್ನು ಭಕ್ತರು ಅರ್ಥಮಾಡಿಕೊಳ್ಳಬೇಕೆಂದು ಟಿಟಿಡಿ ಮನವಿ ಮಾಡಿದೆ. ನಿರ್ದಿಷ್ಟ ಪ್ರಯತ್ನದಲ್ಲಿ ಟಿಕೆಟ್ ಪಡೆಯಲು ಸಾಧ್ಯವಾಗದ ಕಾರಣ ವ್ಯವಸ್ಥೆಯು ವಿಫಲವಾಗಿದೆ ಎಂದು ತೀರ್ಮಾನಿಸಬೇಡಿ ಎಂದು ವಿನಂತಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಮಾಹಿತಿಯನ್ನು ನಂಬಬೇಡಿ ಎಂದು ಭಕ್ತರಿಗೆ ಮನವಿ ಮಾಡಿದೆ. ಸುರಕ್ಷಿತ, ಪಾರದರ್ಶಕ ಮತ್ತು ಪರಿಣಾಮಕಾರಿ ಆನ್‌ಲೈನ್ ಬುಕಿಂಗ್ ಸೇವೆ ಒದಗಿಸಲು ನಿರಂತರ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+