‘ಹಿಂದೂಗಳನ್ನು ಬಲೆಗೆ ಬೀಳಿಸು ಯತ್ನ': ದೆಹಲಿ ಉಚಿತ ಬೈಬಲ್ ವಿತರಣೆ ವಿರುದ್ಧ ವಿಎಚ್‌ಪಿ ಗಂಭೀರ ಆರೋಪ
ದೆಹಲಿಯ ವಿಶ್ವ ಪುಸ್ತಕ ಮೇಳದಲ್ಲಿ ಮಾಡಲಾದ ಬೈಬಲ್‌ಗಳ ಉಚಿತ ವಿತರಣೆ ಗೊಂದಲವನ್ನು ಸೃಷ್ಟಿ ಮಾಡಿದೆ.
ದೆಹಲಿಯ ವಿಶ್ವ ಪುಸ್ತಕ ಮೇಳದಲ್ಲಿ ಮಾಡಲಾದ ಬೈಬಲ್‌ಗಳ ಉಚಿತ ವಿತರಣೆ ಗೊಂದಲವನ್ನು ಸೃಷ್ಟಿ ಮಾಡಿದೆ. ಪುಸ್ತಕ ಮೇಳದಲ್ಲಿ ಬೈಬಲ್‌ಗಳ ಉಚಿತ ವಿತರಣೆ ವಿರೋಧಿಸಿ ನಡೆದ ಪ್ರತಿಭಟನೆಯ ನಂತರವೂ ವಿರೋಧ ವ್ಯಕ್ತವಾಗಿದೆ. ಹಿಂದೂ ಬಲಪಂಥೀಯ ಸಂಘಟನೆ, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಗುಂಪುಗಳು ಬೈಬಲ್‌ಗಳ ಉಚಿತ ವಿತರಣೆ ಮಾಡಿದ ಕ್ರಿಶ್ಚಿಯನ್ ಗುಂಪುಗಳು ಮತ್ತು ಮಿಷನರಿಗಳು ಮೇಲೆ "ಹಿಂದೂಗಳನ್ನು ಬಲೆಗೆ ಬೀಳಿಸುತ್ತಿವೆ" ಎಂದು ಆರೋಪಿಸಿವೆ.
ಈ ಬಗ್ಗೆ ಮಾತನಾಡಿದ ವಿಎಚ್‌ಪಿ ವಕ್ತಾರ ವಿನೋದ್ ಬನ್ಸಾಲ್, ಪ್ರತಿಭಟಿಸುವ ಸದಸ್ಯರು ನಮಗೆ ನೇರವಾಗಿ ಸಂಬಂಧಿಸಿಲ್ಲ. ಉಚಿತ ಪುಸ್ತಕಗಳನ್ನು ವಿತರಿಸುವುದು ವಿಷಯವಲ್ಲ. ಇದು ಮನಸ್ಥಿತಿಯ ಪ್ರಶ್ನೆಯಾಗಿದೆ. ಇದು ಜನರಿಗೆ ಪುಸ್ತಕಗಳನ್ನು ಹಂಚುವ, ಪುಸ್ತಕವನ್ನು ಹಿಂಬಾಲಿಸುವ ಅಥವಾ ಮೋಸ ಮಾಡುವ, ಇತರ ಧರ್ಮಗಳನ್ನು ಅವಹೇಳನ ಮಾಡುವ ವಿಧಾನವಾಗಿದೆ ಎಂದು ಹೇಳಿದರು. ಜೊತೆಗೆ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆಯಲ್ಲಿ ಭಾಗಿಯಾಗಲು ನಿರಾಕರಿಸುತ್ತದೆ ಎಂದಿದ್ದಾರೆ.

ನವದೆಹಲಿ ವಿಶ್ವ ಪುಸ್ತಕ ಮೇಳವೊಂದು (ಎನ್‌ಡಿಡಬ್ಲ್ಯುಬಿಎಫ್) ನಡೆಯುತ್ತಿದೆ. ಇಲ್ಲಿ ಬೈಬಲ್ ಪ್ರತಿಗಳನ್ನು ಉಚಿತವಾಗಿ ವಿತರಿಸುವುದನ್ನು ವಿರೋಧಿಸಿ ಜನರ ಗುಂಪು ಕ್ರಿಶ್ಚಿಯನ್ ಸಂಘಟನೆಯೊಂದರಲ್ಲಿ ಪ್ರತಿಭಟನೆ ನಡೆಸಿದೆ.
ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಗಿಡಿಯನ್ಸ್ ಇಂಟರ್‌ನ್ಯಾಶನಲ್ ಎಂಬ ಕ್ರಿಶ್ಚಿಯನ್ ಸಂಸ್ಥೆಯು ನಡೆಸುತ್ತಿರುವ ಸ್ಟಾಲ್‌ನಲ್ಲಿ ಕೆಲವು ಪುರುಷರು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಿದ್ದಾರೆ ಮತ್ತು ಉಚಿತ ಬೈಬಲ್‌ಗಳ ವಿತರಣೆಯನ್ನು ನಿಲ್ಲಿಸುವಂತೆ ಒತ್ತಾಯಿಸುವುದನ್ನು ವಿಡಿಯೊ ತೋರಿಸಿದೆ.
ಪೊಲೀಸರ ಪ್ರಕಾರ, ಪುಸ್ತಕ ಮೇಳದ ಆಯೋಜಕರು ಅಥವಾ ಗಿಡಿಯನ್ಸ್ ಇಂಟರ್ನ್ಯಾಷನಲ್ ಈ ವಿಷಯದಲ್ಲಿ ಯಾವುದೇ ದೂರು ದಾಖಲಿಸಿಲ್ಲ. "ಪ್ರತಿಭಟನೆಯಲ್ಲಿ ಯಾವುದೇ ಹಿಂಸಾಚಾರ ವರದಿಯಾಗಿಲ್ಲ ಅಥವಾ ಯಾವುದೇ ಪುಸ್ತಕಗಳನ್ನು ಹರಿದು ಹಾಕಲಾಗಿಲ್ಲ" ಎಂದು ತಿಳಿಸಿದ್ದಾರೆ.

ಗಿಡಿಯನ್ಸ್ ಇಂಟರ್‌ನ್ಯಾಶನಲ್ 1899ರಲ್ಲಿ ಸ್ಥಾಪಿಸಲಾದ ಇವಾಂಜೆಲಿಕಲ್ ಕ್ರಿಶ್ಚಿಯನ್ ಅಸೋಸಿಯೇಷನ್ ಆಗಿದೆ. ಅದರ ಪ್ರಾಥಮಿಕ ಚಟುವಟಿಕೆಯು ಬೈಬಲ್‌ನ ಪ್ರತಿಗಳನ್ನು ಉಚಿತವಾಗಿ ವಿತರಿಸುತ್ತಿದೆ ಎಂದು ಅದರ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಗಿಡಿಯನ್ಸ್ ಇಂಟರ್‌ನ್ಯಾಶನಲ್‌ನಿಂದ ಯಾವುದೇ ತಕ್ಷಣದ ಕಾಮೆಂಟ್ ಇಲ್ಲ.
ಪ್ರತಿಭಟನಾನಿರತ ಸದಸ್ಯರಲ್ಲಿ ಒಬ್ಬರು 'ಹಿಂದೂ ಯುನೈಟೆಡ್ ಫ್ರಂಟ್' ನ ದೆಹಲಿ ಮುಖ್ಯಸ್ಥ ಎಂದು ಹೇಳಿಕೊಂಡ ವಿಡಿಯೊ, ಜನರು ಅವರೊಂದಿಗೆ ವಾಗ್ವಾದ ಮಾಡುವುದನ್ನು ಮತ್ತು ಸಂವಿಧಾನ ಹಾಗೂ ಅದರ ಅಡಿಯಲ್ಲಿ ಪ್ರತಿಪಾದಿಸಲಾದ ಹಕ್ಕುಗಳ ಬಗ್ಗೆ ಮಾತನಾಡುವುದನ್ನು ತೋರಿಸಲಾಗಿದೆ.












Click it and Unblock the Notifications