ಹಗರಣಗಳ ಆರೋಪ: ಕೊನೆಗೂ ಮೌನ ಮುರಿದ ಕೇಜ್ರಿವಾಲ್
ಎರಡು ದಿನಗಳ ಹಿಂದೆ, ಕೇಜ್ರಿವಾಲ್ ಮಂತ್ರಿಮಂಡಲದಿಂದ ಹೊರದಬ್ಬಲ್ಪಟ್ಟಿದ್ದ ಕಪಿಲ್ ಮಿಶ್ರಾ, ಕೇಜ್ರಿವಾಲ್ ವಿರುದ್ಧ ಲಂಚದಾರೋಪ ಮಾಡಿದ್ದಕ್ಕೆ ಟ್ವಿಟರ್ ನಲ್ಲಿ ಉತ್ತರ.
ನವದೆಹಲಿ, ಮೇ 8: ಸಹ ಸಚಿವರೊಬ್ಬರಿಂದ ಲಂಚ ಸ್ವೀಕಾರದ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇದೇ ಮೊದಲ ಬಾರಿಗೆ ತುಟಿ ಬಿಚ್ಚಿದ್ದಾರೆ.
ಎರಡು ದಿನಗಳ ಹಿಂದೆ, ಕೇಜ್ರಿವಾಲ್ ಮಂತ್ರಿಮಂಡಲದಿಂದ ಹೊರದಬ್ಬಲ್ಪಟ್ಟಿದ್ದ ಕಪಿಲ್ ಮಿಶ್ರಾ, ಕೇಜ್ರಿವಾಲ್ ವಿರುದ್ಧ ಲಂಚದಾರೋಪ ಮಾಡಿದ್ದರು. ಇದು ಆಡಳಿತಾರೂಢ ಆಮ್ ಆದ್ಮಿ ಪಾರ್ಟಿಯಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಅಲ್ಲದೆ, ಈ ಪ್ರಕರಣದ ವಿರುದ್ಧ ತನಿಖೆಗೂ ಆದೇಶಿಸಲಾಗಿದೆ.[ಕೇಜ್ರಿವಾಲ್ ವಿರುದ್ಧ ಮತ್ತೊಂದು ಹಗರಣದ ಆರೋಪ]

ಈ ಎಲ್ಲಾ ಬೆಳವಣಿಗೆಗಳ ಹೊರತಾಗಿಯೂ ಕೇಜ್ರಿವಾಲ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸೋಮವಾರ ರಾತ್ರಿ ವೇಳೆಗೆ ಟ್ವಿಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ''ನಾಳೆಯಿಂದ (ಮೇ 9) ದೆಹಲಿ ವಿಧಾನ ಮಂಡಲ ವಿಶೇಷ ಅಧಿವೇಶನ ಆರಂಭಗೊಳ್ಳಲಿದೆ. ಅಲ್ಲಿ, ನನ್ನ ಮೇಲಿನ ಆರೋಪಗಳು ಚರ್ಚೆಗೆ ಬರಲಿವೆ. ಆಗ ಸತ್ಯ ಏನೆಂಬುದು ಹೊರಬೀಳುತ್ತದೆ'' ಎಂದು ತಿಳಿಸಿದ್ದಾರೆ.[ಏನಿದು ಎಎಪಿ ಸರಕಾರವನ್ನೇ ನಡುಗಿಸಿದ 'ವಾಟರ್ ಟ್ಯಾಂಕರ್ ಸ್ಕ್ಯಾಮ್'?]












Click it and Unblock the Notifications