ಕೊರೊನಾ ವೈರಸ್: ತ್ರಿಪುರದ ವ್ಯಕ್ತಿ ಮಲೇಷ್ಯಾದಲ್ಲಿ ಸಾವು

ಅಗರ್‌ತಲಾ, ಜನವರಿ 30: ಮಾರಣಾಂತಿಕ ಕೊರೊನಾ ವೈರಸ್‌ಗೆ ತುತ್ತಾಗಿದ್ದ ತ್ರಿಪುರ ಮೂಲದ ವ್ಯಕ್ತಿ ಮಲೇಷ್ಯಾದಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೇರಳದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು ಇದು ಎರಡನೇ ಪ್ರಕರಣವಾಗಿದೆ. ಮೃತ ವ್ಯಕ್ತಿ ಕರೊನಾ ವೈರಸ್‌ನಿಂದಲೇ ಮೃತಪಟ್ಟಿದ್ದಾರೆ ಎನ್ನುವ ಕುರಿತು ಸರ್ಕಾರಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತ್ರಿಪುರದ ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರಾದ ರಾಧಾ ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎಲ್ಲಾ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿಭಾಗಗಳು, ಏರ್‌ಪೋರ್ಟ್‌ ಸೇರಿದಂತೆ ಹಲವೆಡೆ ವಿಶೇಷ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Tripura Youth Dies In Malaysia Due To Coronavirus

ಮನೀರ್ ಹುಸೇನ್ 2018ರಿಂದ ಮಲೇಷ್ಯಾದ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ, ಬುಧವಾರ ಮಗ ಮೃತಪಟ್ಟಿರುವುದಾಗಿ ರೆಸ್ಟೋರೆಂಟ್‌ನಿಂದ ಕರೆ ಬಂದಿತ್ತು ಎಂದು ತಂದೆ ಸಹಜನ್ ಮಿಯಾ ತಿಳಿಸಿದ್ದಾರೆ.

ಹುಸೇನ್ ಕ್ರಿಕೆಟ್ ಆಟಗಾರ ಆಗಿದ್ದು, 2016ರಲ್ಲಿ ಮದುವೆಯಾಗಿದ್ದರು, ತ್ರಿಪುರದಲ್ಲಿ ಉತ್ತಮ ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ಮಲೇಷ್ಯಾಕ್ಕೆ ಹೋಗಿದ್ದರು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+