ತನ್ನ ಮೇಲೆ ರೇಪ್ ಕೇಸ್ ಹಾಕಿದವಳನ್ನೇ ಮದುವೆಯಾದ ಶಾಸಕ!
ಅಗರ್ತಲಾ, ಜೂನ್ 11: ಆತ ಆಡಳಿತ ಪಕ್ಷ ರಾಜಕಾರಣಿ. ಜನಪ್ರತಿನಿಧಿಯಾಗಿ ಆಯ್ಕೆಯಾದವರು. ಇತ್ತೀಚೆಗೆ ಮಹಿಳೆಯೊಬ್ಬರು ಆತನ ಮೇಲೆ ಅತ್ಯಾಚಾರ ಪ್ರಕರಣದ ಆರೋಪ ಹೊರೆಸಿದ್ದರು. ಕಂಗಾಲಾದ ಶಾಸಕ, ಕೊನೆಗೆ ಆಕೆಯನ್ನೆ ಮದುವೆಯಾದ ಘಟನೆ ನಡೆದಿದೆ.
ತನ್ನ ಮೇಲೆ ರೇಪ್ ಕೇಸ್ ಹಾಕಿದ ಮಹಿಳೆಯನ್ನೇ ತ್ರಿಪುರಾದ ಐಪಿಎಫ್ ಟಿ ಶಾಸಕ ಧನಂಜಯ್ ಅವರು ಮದುವೆಯಾಗಿದ್ದಾರೆ. ' ಹೌದು ನಾನು ಆಕೆಯನ್ನು ಅಗರ್ತಲಾದ ಚತುರ್ ದಾಸ್ ದೇಗುಲದಲ್ಲಿ ವರಿಸಿದ್ದಾರೆ' ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. Indigenous People's Front of Triupura ಪಕ್ಷ ಕೂಡಾ ಸುದ್ದಿಯನ್ನು ಖಚಿತಪಡಿಸಿದೆ.
ವಕ್ತಾರರಾದ ಅಮಿತ್ ದೇಬ್ರಾಮಾ ಅವರು ಮಾತನಾಡಿ, ಎರಡು ಕಡೆಯವರು ಶಾಂತಿಯುತವಾಗಿ ಒಪ್ಪಂದ ಮಾಡಿಕೊಂಡು ಸುಖಾಂತ್ಯ ಹಾಡಲು ಬಯಸಿದರು. ಹೀಗಾಗಿ, ದೇಗುಲದಲ್ಲಿ ಎರಡು ಕಡೆ ಮನೆಯವರ ಉಪಸ್ಥಿತಿಯಲ್ಲಿ ಮದುವೆ ನಡೆಸಲಾಯಿತು. ಈ ಮೂಲಕ ದೂರು, ಕೋರ್ಟ್ ವಿಚಾರಣೆಗೆ ಅಂತ್ಯ ಹಾಡಲಾಗಿದೆ ಎಂದರು.

ಮೇ 20ರಂದು ಅಗರ್ತಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಶಾಸಕ ಧನಂಜಯ್ ವಿರುದ್ಧ ದೂರು ದಾಖಲಾಗಿತ್ತು. ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು. ರಿಮಾ ವ್ಯಾಲಿ ಕ್ಷೇತ್ರದ ಐ ಪಿ ಎಫ್ ಟಿ ಶಾಸಕ ಧನಂಜಯ್ ಅವರೇ ನನ್ನ ಸ್ಥಿತಿಗೆ ಕಾರಣ ಎಂದು ಸ್ಪಷ್ಟವಾಗಿ ದೂರಿನಲ್ಲಿ ಹೇಳಲಾಗಿತ್ತು.
ಅತ್ಯಾಚಾರ, ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಕೈಗೊಂಡಿದ್ದರು. ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಮೆಟ್ಟಿಲೇರಿದ್ದ ಶಾಸಕ ಧನಂಜಯ್ ಗೆ ನಿರಾಶೆಯಾಗಿತ್ತು. ಜೂನ್ 01ರಂದು ತ್ರಿಪುರಾ ಹೈಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಕೊನೆಗೆ ವಿಧಿಯಿಲ್ಲದೆ, ಅತ್ಯಾಚಾರ ಸಂತ್ರಸ್ತೆಯನ್ನೇ ಮದುವೆಯಾಗಲು ಧನಂಜಯ್ ಒಪ್ಪಿಕೊಂಡರು. ಸದ್ಯ ಧಲಾಯಿ ಜಿಲ್ಲೆಯ ಗಂಡಚೆರಾ ಎಂಬಲ್ಲಿ ಮಹಿಳೆ ವಾಸವಿದ್ದಾರೆ.(ಪಿಟಿಐ)












Click it and Unblock the Notifications