ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಶಾಕ್ ಕೊಟ್ಟ ರೈಲ್ವೆ ಇಲಾಖೆ

ನವದೆಹಲಿ, ಜನವರಿ 1:ದೇಶದ ಸಾರಿಗೆ ವ್ಯವಸ್ಥೆಯ ಆಧಾರ ಸ್ತಂಭವಾಗಿರುವ ರೈಲುಗಳ ಪ್ರಯಾಣ ದರ ಹೆಚ್ಚಳದ ಮೂಲಕ ಹೊಸ ವರ್ಷಕ್ಕೆ ಶಾಕ್ ನೀಡಲಾಗಿದೆ.

ಇಂದಿನಿಂದಲೇ ಅನ್ವಯವಾಗುವಂತೆ ರೈಲ್ವೆ ಪ್ರಯಾಣ ದರದಲ್ಲಿ ಹೆಚ್ಚಳ ಮಾಡಲಾಗಿದೆ.ಕೇಂದ್ರ ರೈಲ್ವೆ ಸಚಿವಾಲಯದ ಆದೇಶದ ಪ್ರಕಾರ ಹವಾ ನಿಯಂತ್ರಿತ ರೈಲುಗಳ ಪ್ರಯಾಣದಲ್ಲಿ ಪ್ರತಿ ಕಿ.ಮೀಗೆ ನಾಲ್ಕು ಪೈಸೆ ಹೆಚ್ಚಳ ಮಾಡಿದ್ದರೆ, ಉಳಿದ ಸಾಮಾನ್ಯ ರೈಲುಗಳಲ್ಲಿ ಪ್ರತಿ ಕಿ.ಮೀ ತಲಾ ಒಂದು ಪೈಸೆ ಪ್ರಯಾಣ ದರ ಹೆಚ್ಚಿಸಲಾಗಿದೆ.

ಆದರೆ ಈ ಹೆಚ್ಚಳವು ಸಬ್ ಅರ್ಬನ್ ರೈಲು ಸೇವೆಗಳಿಗೆ ಅನ್ವಯವಾಗುವುದಿಲ್ಲ.ಈ ನೂತನ ದರ ಹೆಚ್ಚಳದಿಂದ ಅಂದಾಜು ಹವಾನಿಯಂತ್ರಿತ ರೈಲುಗಳಲ್ಲಿ ನೂರು ಕಿ.ಮೀ ಪ್ರಯಾಣ ಮಾಡಿದರೆ 4 ರೂ. ಹಾಗೂ ಸಾಮಾನ್ಯ ರೈಲಿನಲ್ಲಿ 1 ರೂ. ಹೆಚ್ಚುವರಿ ಹಣ ನೀಡಬೇಕಾಗಿದೆ.

train

ರೈಲ್ವೆ ಆಧುನೀಕರಣ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಈ ಪ್ರಯಾಣದರ ಹೆಚ್ಚಳ ಅನಿವಾರ್ಯ ಎಂದು ರೈಲ್ವೆ ಸಚಿವಾಲಯ ಸಮರ್ಥನೆ ನೀಡಿದೆ.

ಆದರೆ ಅಗತ್ಯ ವಸ್ತುಗಳ ದರ ಏರಿಕೆ, ಆರ್ಥಿಕ ಮುಗ್ಗಟ್ಟು ಹಾಗೂ ಇತರೆ ಸವಾಲುಗಳ ಬೆನ್ನಲ್ಲೇ ಇದರ ಹೆಚ್ಚಳವು ಪ್ರಯಾಣಿಕರಿಗೆ ಹೊರೆಯಾಗಲಿದೆ. ಪ್ರತಿಪಕ್ಷಗಳು ಇದನ್ನು ಕೇಂದ್ರ ಸರ್ಕಾರದ ವಿರುದ್ಧ ಟೀಕೆಗೆ ಒಂದು ಅಸ್ತ್ರವನ್ನಾಗಿಸಿಕೊಳ್ಳುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+