ಸದ್ಯದಲ್ಲೇ ರೈಲ್ವೇ ಪ್ರಯಾಣಿಕರಿಗೆ ಟಿಕೆಟ್ ಬೆಲೆ ಏರಿಕೆ ಬಿಸಿ?
ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸಲು ಕಳೆದ ವರ್ಷ ನವೆಂಬರ್ 23ರಂದು ರೈಲ್ವೆ ಇಲಾಖೆಯು ಟಿಕೆಟ್ ಬುಕಿಂಗ್ ಗಳ ಮೇಲೆ ವಿಧಿಸಲಾಗುತ್ತಿದ್ದ ಸೇವಾ ಶುಲ್ಕವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿತ್ತು. ಇದು ಡಿಸೆಂಬರ್ 9ರಂದು ಜಾರಿಯಾಗಿತ್ತು.
ನವದೆಹಲಿ, ಮೇ 10: ರೈಲ್ವೇ ಸೇವೆಗಳಿಗೆ ಸಂಬಂಧಿಸಿದ ನಷ್ಟಗಳನ್ನು ಸರಿದೂಗಿಸಲು ಮುಂದಾಗಿರುವ ರೈಲ್ವೇ ಇಲಾಖೆ, ಕೆಲ ದಿನಗಳ ಹಿಂದೆ ತಾನು ರದ್ದುಗೊಳಿಸಿದ್ದ ಟಿಕೆಟ್ ಬುಕಿಂಗ್ ಗಳ ಮೇಲಿನ ಸೇವಾ ಶುಲ್ಕವನ್ನು ಮತ್ತೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ.
ಸೇವಾ ಶುಲ್ಕ ಮತ್ತೆ ಜಾರಿಗೊಂಡಲ್ಲಿ ಸಹಜವಾಗಿ ಟಿಕೆಟ್ ದರದಲ್ಲೂ ಏರಿಕೆಯಾಗಲಿದ್ದು, ಇದರ ಪರಿಣಾಮವನ್ನು ಗ್ರಾಹಕರು ಎದುರಿಸಬೇಕಾಗುತ್ತದೆ.

ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸಲು ಕಳೆದ ವರ್ಷ ನವೆಂಬರ್ 23ರಂದು ರೈಲ್ವೆ ಇಲಾಖೆಯು ಟಿಕೆಟ್ ಬುಕಿಂಗ್ ಗಳ ಮೇಲೆ ವಿಧಿಸಲಾಗುತ್ತಿದ್ದ ಸೇವಾ ಶುಲ್ಕವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿತ್ತು. ಇದು ಡಿಸೆಂಬರ್ 9ರಂದು ಜಾರಿಯಾಗಿತ್ತು.
ಆದರೆ, ರೈಲ್ವೇಯಲ್ಲಿ ಊಟ, ಉಪಹಾರ ಸರಬರಾಜು ಮಾಡುವ ತನ್ನ ಯೋಜನೆಯಿಂದಾಗಿ ಇಲಾಖೆಗೆ ಸುಮಾರು 500 ಕೋಟಿ ರು. ನಷ್ಟವುಂಟಾಗಿದ್ದು, ಇದನ್ನು ಸರಿದೂಗಿಸಲು ಸೇವಾ ಶುಲ್ಕವನ್ನು ಮತ್ತೆ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

Click it and Unblock the Notifications