Train: ಗೂಗಲ್‌ಗೂ ಸವಾಲು ಹಾಕುವ 'ಹ್ಯೂಮನ್ ಇಂಡಿಕೇಟರ್'! ಟ್ರೈನ್ ಮಾಹಿತಿ ಕೇಳಲು ಇವರ ಸುತ್ತ ಜನಸಾಗರ

Train: ಲೋಕಲ್‌ ಟ್ರೈನ್‌ ಇಲ್ಲದ ಬದುಕನ್ನು ಮುಂಬಯಿಯಲ್ಲಿ ಬದುಕುವವರು ಊಹಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಮುಂಬಯಿಯ ಟ್ರಾಫಿಕ್‌ನಿಂದಾಗಿ ಆಟೋ, ಟು ವೀಲರ್‌, ಕಾರು ತಗೊಂಡು ಹೋಗುತ್ತೇವೆ ಎಂದರೆ ಬಹಳ ಕಷ್ಟ. ಈ ಲೋಕಲ್‌ ಟ್ರೈನ್‌ನಲ್ಲಿ ಹತ್ತಿದರೆ ಸಮಯಕ್ಕೆ ಸರಿಯಾಗಿ ನಿಗದಿತ ಜಾಗಕ್ಕೆ ತಲುಪುವುದು ಕೂಡಾ ಸುಲಭ. ಖರ್ಚೂ ಕಮ್ಮಿ.

ಇದೇ ಕಾರಣಕ್ಕೆ ಈ ಲೋಕಲ್‌ ಟ್ರೈನ್‌ಗಳಲ್ಲಿ ಕಾಲು ಹಾಕುವುದಕ್ಕೂ ಜಾಗ ಇರುವುದಿಲ್ಲ. ಅದೂ ಬೆಳಿಗ್ಗೆ ಮತ್ತು ಸಂಜೆ ವೇಳೆಗಂತೂ ಜನ ಜನಜಂಗುಳಿಯನ್ನು ಕೇಳುವುದೇ ಬೇಡ. ಇಲ್ಲಿ ಯಾರು ಬಿದ್ರು, ಯಾರು ಎದ್ರು, ಯಾರು ಯಾವ ಕಡೆ ಹೊರಟ್ರೂ ಯಾರಿಗೂ ಯಾವ ಗೊಡವೆಯೇ ಇರೋದಿಲ್ಲ. ಯಾಕೆಂದರೆ ಬರುವ ರೈಲನ್ನು ಹತ್ತಬೇಕು ನಿಲ್ಲುವುದಕ್ಕೊಂದು ಸ್ಥಳ ಮಾಡಿಕೊಳ್ಳಬೇಕು ಅಷ್ಟೇ.

Train

ದಿನಾಲೂ ಲಕ್ಷಾಂತರ ಪ್ರಯಾಣಿಕರನ್ನು ಹೊತ್ತು ಸಾಗುತ್ತದೆ ಈ ಮಹಾನಗರದ ಲೋಕಲ್‌ ಟ್ರೈನ್‌ಗಳು. ಮೊದಲೇ ಹೇಳಿದ ಹಾಗೆ ಪೀಕ್ ಅವರ್‌ನಲ್ಲಿಯಂತೂ ಇಲ್ಲಿ ಜನರನ್ನು ಸಂಭಾಳಿಸುವುದು ಬಲು ಕಷ್ಟ. ಅದರಲ್ಲಿಯೂ ಕೆಲವರಿಗೆ ಎಲ್ಲಿ ಹತ್ತಬೇಕು, ಎಲ್ಲಿ ಇಳಿಯಬೇಕು, ಯಾವ ಸ್ಟೇಷನ್‌ನಲ್ಲಿ ರೈಲು ಬದಲಾಯಿಸಬೇಕು ಎನ್ನುವ ಮಾಹಿತಿಯೂ ಇರುವುದಿಲ್ಲ. ಯಾರ ಬಳಿಯಾದರೂ ಕೇಳೋಣ ಎಂದರೆ ಒಬ್ಬರಿಗೆ ಸಹಾಯ ಮಾಡುವಷ್ಟು ಪುರುಸೊತ್ತು ಅಲ್ಲಿ ಯಾರಿಗೂ ಇರುವುದಿಲ್ಲ.

ಅಂಥವರಿಗಾಗಿ ಸರಿಯಾದ ದಾರಿ ತೋರಿಸಲು ಇಲ್ಲೊಬ್ಬ ದಿನಾ ಬಂದು ನಿಂತಿರುತ್ತಾರೆ. ಯಾವ ಟ್ರೈನ್‌ ಹಿಡಿಯಲು ಯಾವ ಕಡೆ ಹೋಗಬೇಕು? ಯಾವ ಟ್ರೈನ್‌ ಎಷ್ಟು ಹೊತ್ತಿಗೆ ಬರುತ್ತದೆ? ಯಾವ ಟ್ರೈನ್‌ ಯಾವ ಪ್ಲಾಟ್‌ಫಾರಂಗೆ ಬರುತ್ತದೆ ಹೀಗೆ ಎಲ್ಲಾ ಮಾಹಿತಿಯನ್ನು ಇವರು ಪ್ರಯಾಣಿಕರಿಗೆ ನೀಡುತ್ತಾರೆ. ವಾರದ ಏಳೂ ದಿನ ನಿಸ್ವಾರ್ಥವಾಗಿ ಈ ಕೆಲಸ ಮಾಡುತ್ತಾರೆ. ದಾದರ್ ವೆಸ್ಟರ್ನ್ ಲೈನ್ ಸೇತುವೆಯ ಮೇಲೆ ಇವರು ನಿಂತಿರುತ್ತಾರೆ. ಸತತ ಎರಡು ಗಂಟೆಗಳ ಕಾಲ ಹೀಗೆ ನಿಂತುಕೊಂಡೇ ಎಲ್ಲರಿಗೂ ಅಗತ್ಯವಿರುವ ಮಾರ್ಗದರ್ಶನ ನೀಡುತ್ತಾ ಬರುತ್ತಿದ್ದಾರೆ.

ಅಂದ ಹಾಗೆ ಇವರ ಹೆಸರು ನಾಯಕ ನರೇಂದ್ರ ಪಾಟೀಲ್. ಇವರು ಒಂದು ರೀತಿಯಲ್ಲಿ ರೈಲು ಪ್ರಯಾಣಿಕರಿಗೆ ಸ್ವಯಂಸೇವಕ ಇದ್ದ ಹಾಗೆ. @_trainsofindia_ ಮಾಡಿದ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಇವರ ವಿಡಿಯೋವನ್ನು ನೋಡಬಹುದು. ಯಾರೇ ತಮ್ಮ ಬಳಿ ಬಂದು ಸಲಹೆ ಕೇಳಿದರೂ ನಗುನಗುತ್ತಲೇ ಉತ್ತರಿಸುತ್ತಾರೆ. ದಾರಿ ಗೊತ್ತಿಲ್ಲದೆ ಆತಂಕಗೊಂಡವರನ್ನು ಸಮಾಧಾನ ಮಾಡಿ ಅವರು ಎಲ್ಲಿಗೆ ಹೋಗಬೇಕೋ ಆ ದಾರಿಯನ್ನು ತೋರಿಸುತ್ತಾರೆ.

ನರೇಂದ್ರ ಪಾಟೀಲ್ ಅವರನ್ನು ಇಲ್ಲಿನ ಜನ ಹ್ಯೂಮನ್ ಇಂಡಿಕೇಟರ್ ಎಂದೇ ಕರೀತಾರೆ. ದಿನದ ಎರಡು ಗಂಟೆ ಈ ಕೆಲಸಕ್ಕೆ ಮೀಸಲಾಗಿರುತ್ತಾರೆ. ಬೆಳಿಗ್ಗೆ 9:30 ರಿಂದ 11:30 ರವರೆಗೆ ಅದೇ ಸ್ಥಳದಲ್ಲಿ ನಿಂತು, ತಮ್ಮ ಪಾಡಿಗೆ ಕೆಲಸ ಮಾಡುತ್ತಾ ಇರುತ್ತಾರೆ. ದಿನನಿತ್ಯ ಪ್ರಯಾಣಿಸುವವರಿಗೆ ಪಾಟೀಲ್ ಚಿರ ಪರಿಚಿತ. ಎಲ್ಲರೂ ಇವರತ್ತ ಒಮ್ಮೆ ಕೈಬೀಸಿ ಇವರಿಗೊಂದು ಸ್ಮೈಲ್‌ ಕೊಟ್ಟೇ ಮುಂದೆ ಹೋಗುತ್ತಾರೆ. ಬೆಳಗಿನ ಜನದಟ್ಟಣೆ ಕಡಿಮೆಯಾದ ನಂತರ, ಪಾಟೀಲ್ ಕೂಡಾ ತಮ್ಮ ಕೆಲಸಕ್ಕೆ ಹೋಗುತ್ತಾರೆ.

ವೈರಲ್ ಪೋಸ್ಟ್ ಅನ್ನು ಇಲ್ಲಿ ಪರಿಶೀಲಿಸಿ

ಇದೀಗ ಪಾಟೀಲ್‌ ಅವರ ವಿಡಿಯೋ ವೈರಲ್ ಆಗುತ್ತಿದೆ. ಇವರ ಈ ನಿಸ್ವಾರ್ಥ ಸೇವೆಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಪಾಟೀಲ್ ಅವರನ್ನು ಶ್ಲಾಘಿಸಿದ್ದಾರೆ. ಅವರಂತಹ ಜನರು ಮುಂಬೈನ ನಿಸ್ವಾರ್ಥ ಮತ್ತು ದೃಢನಿಶ್ಚಯದ ಮನೋಭಾವವನ್ನು ಪ್ರತಿನಿಧಿಸುತ್ತಾರೆ ಎಂದು ಎತ್ತಿ ತೋರಿಸಿದರು.

ಜಗತ್ತು ಹೊತ್ತಿ ಉರಿಯಬಹುದು. ಆದರೆ ನಮ್ಮಲ್ಲಿನ ಭರವಸೆಯನ್ನು ಪುನಃಸ್ಥಾಪಿಸಲು ಒಬ್ಬ ಮನುಷ್ಯನೇ ಬೇಕು. ಅವರ ಯೋಗಕ್ಷೇಮ ಮತ್ತು ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರೂ ತನಗೂ ಈ ವ್ಯಕ್ತಿ ಸಹಾಯ ಮಾಡಿದ್ದಾರೆ. ಇವರು ತುಂಬಾ ಕರುಣಾಮಯಿ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+