ಕಾಶ್ಮೀರ, ಉ.ಪ್ರ.ದಲ್ಲಿ ಪ್ರತ್ಯೇಕ ಅಪಘಾತ: 14 ಜನರ ದುರ್ಮರಣ
ರಾಯ್ಸಿ(ಜಮ್ಮು-ಕಾಶ್ಮೀರ), ಆಗಸ್ಟ್ 9: ಜಮ್ಮು ಕಾಶ್ಮೀರ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಒಟ್ಟು 14 ಜನ ಮೃತಪಟ್ಟಿದ್ದಾರೆ.
ಜಮ್ಮು ಕಾಶ್ಮೀರದ ರಾಯ್ಸಿ ಜಿಲ್ಲೆಯ ಶಿಶಿ ನಲ್ಲಾಹ್ ಎಂಬಲ್ಲಿ ಇಂದು(ಆಗಸ್ಟ್ 9) ಬೆಳಗ್ಗೆ ಲಾರಿಯೊದು ರಸ್ತೆಯಂಚಿನ ಕಂದಕಕ್ಕೆ ಉರುಳಿದ ಪರಿಣಾಮ 9 ಜನ ಮೃತರಾಗಿದ್ದಾರೆ. 7 ಜನ ಸ್ಥಳದಲ್ಲೇ ಮೃತಪಟ್ಟಿದ್ದರೆ ಇನ್ನಿಬ್ಬರು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ(ಆಗಸ್ಟ್ 8) ರಾತ್ರಿ ಉತ್ತರ ಪ್ರದೇಶದ ಶಂಕರಪುರ ಎಂಬಲ್ಲಿ ನಡೆದ ಅಪಘಾತದಲ್ಲಿ ಒಬ್ಬ ಮಹಿಳೆ, ಮಗು ಸೇರಿದಂತೆ ಐವರು ಮೃತಪಟ್ಟಿದ್ದಾರೆಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications