Video Viral: ಮಾವುತನ ಮೇಲೆ ಹತ್ತಿ ನಿಂತು ಕೊಂದ ಆನೆ, ಭಯಾನಕ ಘಟನೆ ಸೆರೆ
ಕೇರಳ, ಜೂನ್ 23: ಗಜರಾಜ, ಗಾಂಭೀರ್ಯ ನಡಿಗೆಗೆ ಹೆಸರಾದ ಆನೆಗಳು (Elephants) ತನ್ನ ದೇಹ, ದೊಡ್ಡ ಸೊಂಡಿಲು ಮತ್ತು ಕಿವಿಗಳು ಹಾಗೂ ಘೀಳಿಡುವ ಶೈಲಿಯಿಂದಲೇ ಇತರ ಪ್ರಾಣಿಗಳಿಗಿಂತಲೂ ವಿಶೇಷವಾಗಿ ಕಾಣಿಸುತ್ತವೆ. ಅತ್ಯಂತ ಸೂಕ್ಷ್ಮ, ಸೌಮ್ಯ ಸ್ವಭಾವದ ಪ್ರಾಣಿ ಅಂತಲೂ ಕೆರೆಯುವ ಈ ಆನೆಗಳಿಗೆ ಸಿಟ್ಟು ಬಂದರೆ ಎದುರಿಗಿನ ಮನುಷ್ಯರಾಗಲಿ, ಅಂಗಡಿ, ಮುಂಗಟ್ಟು, ವಾಹನಗಳು ಯಾವುದು ಉಳಿಯಲ್ಲ. ಇದಕ್ಕೆ ತಾಜಾ ನಿದರ್ಶನವೆಂಬಂತೆ ಕೇರಳದಲ್ಲಿ ಇಂತದ್ದೆ ಮನಕಲಕುವ ಘಟನೆಯೊಂದು ಭಾನುವಾರ ನಡೆದಿದೆ.
ಕಟ್ಟಾಕಿದ್ದ ಆನೆಗೆ ಮುಂದೆ ಮಾವುತ ಎಂದಿನಂತೆ ಅದರತ್ತ ತೆರಳಿದ್ದಾನೆ. ಆದರೆ ಆತನನ್ನು ನೂಕಿದ ಕ್ಷಣಮಾತ್ರದಲ್ಲಿ ಆತನ ಮೇಲೆ ಹತ್ತಿ ನಿಂತು ಜೀವ ತೆಗೆದ ಭಯಾನಕ ವಿಡಿಯೋ ಸೆರೆಯಾಗಿದೆ. ಇದನ್ನು ನೋಡಿದರೆ ಎಂಥವರಿಗೂ ಎದೆ ಝಲ್ ಅನ್ನಿಸುವಂತಿದೆ. ಏನಾಯಿತೆಂದು ಅಕ್ಕಪಕ್ಕದವರು ನೋಡುವಷ್ಟರಲ್ಲೇ ಮಾವುತನ ಪ್ರಾಣ ಪಕ್ಷಿ ಹಾರಿ ಹೋಗಿದೆ.

ವಿಡಿಯೋದಲ್ಲಿ ಸೆರೆಯಾಗಿರುವ ಪ್ರಕಾರ, ಆನೆ ನೋಡಿದರೆ ಈಗಾಗಲೇ ತರಬೇತಿ ಪಡೆದಿರುವ, ಮಾವುತರೊಂದಿಗೆ ಒಡನಾಡಿಯಾಗಿದ್ದ ಆನೆಯಂತೆ ಕಾಣಿಸುತ್ತದೆ. ಕೇರಳದ ಅಡಿಮಲಿ ಸಮೀಪದ ಕಲ್ಲರ್ ಬಳಿಯ ಖಾಸಗಿ ಫಾರ್ಮ್‌ನಲ್ಲಿ ನಡೆದ ಘಟನೆ ಇದಾಗಿದೆ. ನೀಲೇಶ್ವರಂ ನಿವಾಸಿ ಮಾವುತ ಬಾಲಕೃಷ್ಣ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಮಾವುತನ ಮೇಲೆ ಹತ್ತಿ ನಿಂತ ಆನೆ
ಎಂದಿನಂತೆ ಮೃತ ಮಾವುತ ಕೈಯಲ್ಲಿದ್ದ ಸಲಕರಣೆಯಿಂದ ಆನೆಯನ್ನು ಸರಿಯಾಗಿ ನಿಲ್ಲುವಂತೆ ತಿವಿದು ಹೇಳುತ್ತಾನೆ. ಆಗ ಅಡ್ಡಲಾಗಿ ನಿಂತಿದ್ದ ಆನೆ ಆತನ ಮಾತಿಗೆ ಸಮ್ಮತಿಸಿದವರಂತೆ ಒಂದು ಬದಿಗೆ ಸರಿಯಾಗಿ ನಿಲ್ಲುತ್ತದೆ. ಈ ವೇಳೆ ಮಾವುತ ಆನೆಯ ಸೊಂಡಿಲ ಪಕ್ಕದಲ್ಲೇ ನಿಂತು ಸೂಚನೆ ಕೊಡುತ್ತಿರುತ್ತಾನೆ.
ನೋಡ ನೋಡುತ್ತಿದ್ದಂತೆ ಆ ಕಟ್ಟಾಕಿದ್ದ ಆನೆಗೆ ಏನನ್ನಿಸಿತೋ ಗೊತ್ತಿಲ್ಲ, ಆ ಮಾವುತನನ್ನು ನೂಕಿ ಕೆಳಗೆ ಕೆಡವಿ ಹಾಕಿ ಬಿಡುತ್ತದೆ. ಸಾಲದೆಂಬಂತೆ ಕೆಳಗೆ ಬಿದ್ದ ಆತನ ಎಡ ತೊಡೆಯ ಮೇಲೆ ಒಂದು ಕಾಲಿಟ್ಟು ನಿಂತು ಬಿಡುತ್ತದೆ. ಇನ್ನೇನು ಆನೆಯ ಕೆಳಗೆ ಸಿಲುಕಿದ್ದ ಮಾವುತ ಸಹಾಯಕ್ಕೆ ಕರೆಯಬೇಕು ಎಂದುಕೊಳ್ಳುವಷ್ಟರಲ್ಲಿ ಆತನ ಬೆನ್ನಿನ ಮೇಲೆ ಮತ್ತೊಂದು ಕಾಲಿಟ್ಟು ಬಿಡುತ್ತದೆ.

ಒಮ್ಮೆ ಕೆಳಗಿಳಿಯುವ ಆನೆ ಮಾವುತನ ಸೊಂಟದ ಮೇಲೆ ಒಂದು, ಭುಜದ ಕೆಳಭಾಗಕ್ಕೆ ಮತ್ತೊಂದು ಕಾಲು ಇಟ್ಟು ನಿಲ್ಲುತ್ತಿದ್ದಂತೆ ಆತನ ಮೃತಪಡುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇಷ್ಟಕ್ಕೆ ಸುಮ್ಮನಿರದ ಆನೆ, ಸೊಂಡಿಲಿನಿಂದ ಆತನನ್ನು ಎತ್ತಿಕೊಂಡು ಬಿಸಾಡುತ್ತದೆ.
ಕೇರಳದ ಅಡಿಮಲಿ ಸಮೀಪದ ಕಲ್ಲರ್ ಬಳಿಯ ಖಾಸಗಿ ಫಾರ್ಮ್‌ನಲ್ಲಿ ನಡೆದ ಘಟನೆ. ನೀಲೇಶ್ವರಂ ನಿವಾಸಿ ಮಾವುತ ಬಾಲಕೃಷ್ಣ ಮೃತ ದುರ್ದೈವಿ. pic.twitter.com/4BWBLv8VLa
— ಸನಾತನ (@sanatan_kannada) June 23, 2024
ಬೊಂಬೆಯಂತೆ ಸೊಂಡಿಲಿನಿಂತ ಮೃತನನ್ನು ಬಿಸಾಕಿದ ಆನೆ
ಅಷ್ಟೊತ್ತಿಗಾಗಲೇ ಆತನ ಜೀವ ಹಾರಿ ಹೋಗಿದೆ. ಆನೆ ಸೊಂಡಿಲಿನಲ್ಲಿದ್ದಾಗ ಮೃತ ಕೈ ಕಾಲುಗಳೂ ಬೊಂಬೆಯ ಕೈಕಾಲುಗಳಂತೆ ನಿರ್ಜಿವ ವಸ್ತುಗಳಂತೆ ವಾಲಾಡುವುದನ್ನು ಕಾಣಬಹುದು. ಎತ್ತಿ ನೆಲಕ್ಕೆ ಬೀಸುತ್ತಿದ್ದಂತೆ ಮತ್ತೊಬ್ಬ ಮಾವು ಆನೆಯ ಬಳಿ ಬರುವ ದೃಶ್ಯಗಳು ಸೆರೆಯಾಗಿದೆ. ಈ ಕುರಿತು ವಿಡಿಯೋವನ್ನು ಸನಾತನ ಟ್ವಿಟ್ಟರ್ (ಎಕ್ಸ್) ಹ್ಯಾಂಡಲ್‌ನಿಂದ ಪೋಸ್ಟ್ ಮಾಡಲಾಗಿದೆ. ಸದ್ಯ ಪ್ರಕರಣ ದಾಖಲಾಗಿದೆ.
ಹೀಗೆ ಕಾಡು ಪ್ರಾಣಿಗಳಲ್ಲಿ ಸೂಕ್ಷ್ಮ, ಬುದ್ಧಿವಂತ ಪ್ರಾಣಿ ಎಂದು ಕರೆಸಿಕೊಳ್ಳುವ ಆನೆಯು ರೊಚ್ಚಿಗೆದ್ದರೆ ಏನೆಲ್ಲ ಆಗುತ್ತದೆ. ಕ್ಷಣಮಾತ್ರದಲ್ಲಿ ಎಂತವರನ್ನು ನಡುಗಿಸಿ, ಜೀವ ತೆಗೆಯುವ ಶಕ್ತಿ ಆನೆಗಿದೆ ಎಂಬ ಸತ್ಯ ಈ ವಿಡಿಯೋದಿಂದ ಮತ್ತೊಮ್ಮೆ ಮನವರಿಕೆ ಆಗುತ್ತದೆ.












Click it and Unblock the Notifications