ಉಜ್ಜಯಿನಿ ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಅಪಶಕುನ, ಬಿಜೆಪಿಗೆ ಕಾಡಲಿದೆಯೇ ದುಃಸ್ವಪ್ನ?
ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದಾದ ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯದ ಕಾರಿಡಾರ್ ನಲ್ಲಿ ಎರಡು ದಿನದ ಹಿಂದೆ ನಡೆದ ಬಿರುಗಾಳಿಯ ಅವಗಢವನ್ನು ನಾನಾರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಸಹಜವಾಗಿ, ಮಧ್ಯಪ್ರದೇಶದ ಕಾಂಗ್ರೆಸ್ ಘಟಕ ಇದಕ್ಕೆ ರಾಜಕೀಯ ಬಣ್ಣವನ್ನು ತರುತ್ತಿದೆ, ಕಾರಣ ವರ್ಷಾಂತ್ಯದೊಳಗೆ ನಡೆಯಬೇಕಾಗಿರುವ ವಿಧಾನಸಭಾ ಚುನಾವಣೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯದಲ್ಲಿ ಭಾನುವಾರ (ಮೇ 28) ಬೀಸಿದ ಬಿರುಗಾಳಿಗೆ ಸಪ್ತಋಷಿಗಳ ಪ್ರತಿಮೆಗಳಿಗೆ ಹಾನಿಯಾಗಿತ್ತು. ಪ್ರತಿಮೆಗಳಲ್ಲಿ ಕೆಲವು ನೆಲಕ್ಕೆ ಉರುಳಿದ್ದರಿಂದ ಕೈಗಳು ಮತ್ತು ತಲೆಗಳು ಮುರಿದಿವೆ. ಕಳೆದ ಅಕ್ಟೋಬರ್ 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ ಮಹಾಕಾಲ್ ಲೋಕ ದೇವಾಲಯದ ಕಾರಿಡಾರ್‌ನಲ್ಲಿ ಸಪ್ತಋಷಿಗಳ ಪ್ರತಿಮೆಯನ್ನು ಇಡಲಾಗಿತ್ತು.

ಮೊದಲ ಹಂತದಲ್ಲಿ 351 ಕೋಟಿ ವೆಚ್ಚದಲ್ಲಿ ನಡೆದಿದ್ದ ಕಾಮಗಾರಿ ಇದಾಗಿದ್ದು, ವಿರೋಧ ಪಕ್ಷ ಕಾಂಗ್ರೆಸ್, ಇದು ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರ ಎಂದು ಆರೋಪಿಸಿದೆ. ಮಧ್ಯ ಪ್ರದೇಶದಲ್ಲಿ ರಾಜಕೀಯ ಕೆಸೆರೆರೆಚಾಟಕ್ಕೆ ಕಾರಣವಾಗಿರುವ ಈ ವಿದ್ಯಮಾನಕ್ಕೆ ಮಧ್ಯ ಪ್ರದೇಶದ ಕಾಂಗ್ರೆಸ್ ಘಟಕ ಈಗ ಅದಕ್ಕೆ ಧಾರ್ಮಿಕ ಟಚ್ ಅನ್ನು ನೀಡುತ್ತಿದೆ.
ಮಧ್ಯ ಪ್ರದೇಶದ ಕಾಂಗ್ರೆಸ್ ಐಟಿ ಸೆಲ್
ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಮಧ್ಯ ಪ್ರದೇಶದ ಕಾಂಗ್ರೆಸ್ ಐಟಿ ಸೆಲ್, 'ಉಜ್ಜಯಿನಿ ಮಹಾಕಾಳೇಶ್ವರನ ಜೊತೆಗೂ ವಾರ್, ಇದುವೇ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ್' ಎನ್ನುವ ಶೀರ್ಷಿಕೆಯನ್ನು ನೀಡಿ, ಕಾರಿಡಾರ್ ಉದ್ಘಾಟನೆಯ ವೇಳೆ ಪ್ರಧಾನಿ ಮೋದಿ ಮಾಡಿದ ಭಾಷಣ, ಭಗ್ನಗೊಂಡಿರುವ ಋಷಿಗಳ ಪ್ರತಿಮೆಯ ವಿಡಿಯೋ ಹಾಕಿ ಬಿಜೆಪಿಯನ್ನು ಟೀಕಿಸಿದೆ. ಈ ಟ್ವೀಟಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಇದು ಬಿಜೆಪಿಗೆ ದುಃಸ್ವಪ್ನವಾಗಿ ಕಾಡಲಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಮಹಾಕಾಳ ಕಾರಿಡರ್ ನಿರ್ಮಾಣದಲ್ಲೂ ಭ್ರಷ್ಟಾಚಾರ
ಮಹಾಕಾಳ ಕಾರಿಡರ್ ನಿರ್ಮಾಣದಲ್ಲೂ ಭ್ರಷ್ಟಾಚಾರ ನಡೆಸಿದ್ದಕ್ಕೆ ಪ್ರಕೃತಿ ತೋರಿಸಿದ ಪಾಠವಿದು, ಇದು ಶಿವರಾಜ್ ಸಿಂಗ್ ಸರ್ಕಾರದ ಅಂತ್ಯ ಸದ್ಯದಲ್ಲೇ ಇದೆ ಎನ್ನುವುದರ ಪ್ರತೀಕ ಎಂದು ಕಾಂಗ್ರೆಸ್ ಇನ್ನೊಂದು ಟ್ವೀಟ್ ಮಾಡಿದೆ. ಭಗವಂತನಿಗೇ ಭ್ರಷ್ಟಾಚಾರ, ಮಹಾಕಾಳನನ್ನೇ ಬಿಡದ ಶಿವರಾಜ್ ಸಿಂಗ್ ಎಂದು ಸ್ಥಳೀಯ ಪತ್ರಿಕೆಗಳು ಶಿವರಾಜ್ ಸಿಂಗ್ ಸರ್ಕಾರದ ವಿರುದ್ದ ತಿರುಗಿಬಿದ್ದಿವೆ.

ವರ್ಕ್ ಆರ್ಡರ್ ಇಶ್ಯೂ ಆಗಿದ್ದದ್ದು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮಹಾಕಾಳ ಕಾರಿಡಾರಿನ ಎಲ್ಲಾ ಶ್ರೇಯಸ್ಸು ನಮಗೆ ಸಿಗಬೇಕು ಎಂದು ಹೇಳುತ್ತಿದ್ದ ಬಿಜೆಪಿ, ಈಗ, ಈ ಯೋಜನೆಯ ವರ್ಕ್ ಆರ್ಡರ್ ಇಶ್ಯೂ ಆಗಿದ್ದದ್ದು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಎಂದು ಶಿವರಾಜ್ ಸಿಂಗ್ ಸರ್ಕಾರದ ಮಂತ್ರಿಯೊಬ್ಬರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಸತ್ಯವನ್ನು ಈಗಲಾದರೂ ಒಪ್ಪಿಕೊಂಡಿದ್ದೀರಲ್ವಾ, ನಾವು ನಿಯತ್ತು ಮತ್ತು ಭಕ್ತಿಯಿಂದ ಈ ಯೋಜನೆಯನ್ನು ಆರಂಭಿಸಿದ್ದು, ಹಣ ಲೂಟಿ ಮಾಡಲು ಅಲ್ಲ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
महाकाल पर भी किया वार,
— MP Congress (@INCMP) May 29, 2023
यही तो है शिवराज सरकार। pic.twitter.com/YriFxsuCL4
ಕರ್ನಾಟಕದಲ್ಲಿ ಬಜರಂಗಿ
ಕರ್ನಾಟಕದಲ್ಲಿ ಬಜರಂಗಿಯನ್ನು ಚುನಾವಣೆಯ ವೇಳೆ ಬಿಜೆಪಿ ಎಳೆದು ತಂದರು, ಆ ಬಜರಂಗಿ ಸರಿಯಾದ ಪಾಠ ಕಲಿಸಿದ, ಈಗ ಮಧ್ಯ ಪ್ರದೇಶದ ಸರದಿ. ಮಹಾಕಾಳನನ್ನೂ ಬಿಡದ ಬಿಜೆಪಿಯನ್ನು ದೇವರು ಮೆಚ್ಚಲಾರ, ಆ ಪಕ್ಷದ ಅವನತಿ ಆರಂಭವಾಗಿದೆ ಎಂದು ಕಾಂಗ್ರೆಸ್ಸಿನ ಟ್ವೀಟಿಗೆ ಒಬ್ಬರು ಈ ರೀತಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಕ್ಷಿಪ್ರಾನದಿಯ ದಡದ ಮೇಲಿರುವ ಮಹಾಕಾಳೇಶ್ವರ ದೇವಾಲಯ
ಕ್ಷಿಪ್ರಾನದಿಯ ದಡದ ಮೇಲಿರುವ ಮಹಾಕಾಳೇಶ್ವರ ದೇವಾಲಯ ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ಸ್ವಯಂಭು ಶಿವನ ಲಿಂಗ ಇಲ್ಲಿದ್ದು, ಮಧ್ಯ ಪ್ರದೇಶದಲ್ಲಿರುವ ಎರಡು ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಇನ್ನೊಂದು ದೇವಾಲವೆಂದರೆ ಮಾಂಧಾತಗಿರಿಯಲ್ಲಿರುವ ಓಂಕಾರೇಶ್ವರ ದೇವಾಲಯ. ಪುರಾಣ ಪ್ರಸಿದ್ದ ಮಹಾಕಾಳೇಶ್ವರ ದೇವಾಲಯದ ಸಪ್ತಋಷಿಗಳ ವಿಗ್ರಹ ಭಗ್ನವಾಗಿರುವುದು ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಆರೋಪ/ಪ್ರತ್ಯಾರೋಪಕ್ಕೆ ಸಿಕ್ಕ ಅಸ್ತ್ರವಾಗಿದೆ. ಇನ್ನೊಂದು, ಈ ಘಟನೆಯ ಸುತ್ತ ಶಕುನ/ಅಪಶಕುನದ ಚರ್ಚೆ ಜೋರಾಗಿದೆ.
-
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ












Click it and Unblock the Notifications