ಆಧುನೀಕರಣಕ್ಕೆ ಒಗ್ಗಿಕೊಳ್ಳುವತ್ತ RSS: ಈ ಬಾರಿ ಟ್ವಿಟ್ಟರ್ ಲೋಕಕ್ಕೆ

ನಾಗಪುರ, ಜುಲೈ 2: ಕಳೆದ ಎರಡ್ಮೂರು ವರ್ಷಗಳಿಂದ ಆಧುನೀಕರಣಕ್ಕೆ ಒಗ್ಗಿಕೊಳ್ಳುವತ್ತ ಸಾಗುತ್ತಿರುವ ರಾಷ್ಟ್ರೀಯ ಸ್ವಯಂಸೇವಕದ ಇನ್ನೊಂದು ಹೆಜ್ಜೆಯ ಭಾಗವಾಗಿ, ಸಂಘದ ಆರು ಪ್ರಮುಖರು ಮೈಕ್ರೋ ಬ್ಲಾಗ್ಗಿಂಗ್ ಟ್ವಿಟ್ಟರ್ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ.

1.32 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿರುವ ಸಂಘದ ಅಧಿಕೃತ (@RSSorg) ಹ್ಯಾಂಡಲ್ ಮೂಲಕ ಸಾಮಾಜಿಕ ತಾಣದಲ್ಲಿ ಸಂಘಟನೆ ತೊಡಗಿಸಿಕೊಂಡಿತ್ತು. ಈಗ, ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಸೇರಿದಂತೆ, ಆರು ಪ್ರಮುಖರು ಟ್ವಿಟ್ಟರ್ ಖಾತೆಯನ್ನು ತೆರೆದಿದ್ದಾರೆ.

2016ರಲ್ಲಿ ಸಂಘಟನೆಯ ಟ್ರೇಡ್ ಮಾರ್ಕ್ ಸಮವಸ್ತ್ರ ಖಾಕಿ ಚಡ್ಡಿಯಿಂದ ಪ್ಯಾಂಟಿಗೆ ಬದಲಾಯಿಸಲಾಗಿತ್ತು. 1925ರಿಂದ ಅಂದರೆ ಸುಮಾರು ಒಂಬತ್ತು ದಶಕಗಳ ನಂತರ RSS ಈ ಬದಲಾವಣೆಯನ್ನು ಜಾರಿಗೆ ತಂದಿತ್ತು.

Top RSS office bearers including Mohan Bhagwat made their debut to Twitter

ಸಾಮಾಜಿಕ ತಾಣದಿಂದ ವೈಯಕ್ತಿಕವಾಗಿ ದೂರ ಉಳಿದಿದ್ದ ಸಂಘಟನೆಯ ಪ್ರಮುಖರು, ಕೊನೆಗೂ ಟ್ವಿಟ್ಟರ್ ಖಾತೆ ತೆರೆದಿದ್ದಾರೆ. ಮೋಹನ್ ಭಾಗವತ್ ಖಾತೆ ತೆರೆದ ಒಂದೇ ದಿನದಲ್ಲಿ 31.7 ಸಾವಿರ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಆರು ಪ್ರಮುಖರು ಟ್ವಿಟ್ಟರ್ ಹ್ಯಾಂಡಲ್ ಈ ರೀತಿಯಿದೆ:

1. ಸರಸಂಘಚಾಲಕ - ಮೋಹನ್ ಭಾಗವತ್ - @DrMohanBhagwat

2. ಸರಕಾರ್ಯವಾಹ - ಭಯ್ಯಾಜಿ ಸುರೇಶ್ ಜೋಶಿ - @SureshBJoshi

3. ಪ್ರಚಾರ ಪ್ರಮುಖ - ಅರುಣ್ ಕುಮಾರ್ - @ArunKumRSS

4. ಜಂಟಿ ಪ್ರಧಾನ ಕಾರ್ಯದರ್ಶಿ - ದತ್ತಾತ್ರೇಯ ಹೊಸಬಾಳೆ - @DattaHosabale

5. ಸಹ-ಸಹಕಾರ್ಯವಾಹ - ವಿ ಭಾಗಯ್ಯ - @BhagaiahV

6. ಸಂಪರ್ಕ ಪ್ರಮುಖ - ಅರುಣ್ ಕುಮಾರ್ - @ArunKumRSS

ಫೇಕ್ ಖಾತೆಗಳಿಂದ ಹರಿದಾಡುತ್ತಿರುವ ಸುಳ್ಳುಸುದ್ದಿಗಳಿಗೆ ಕಡಿವಾಣ ಹಾಕಲು, ಟ್ವಿಟ್ಟರ್ ಖಾತೆಯನ್ನು ತೆರೆಯಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+