ಟೂಲ್‌ಕಿಟ್ ಸಭೆಯ ವಿವರ ಬೇಕು: 'ಜೂಮ್'ಗೆ ದೆಹಲಿ ಪೊಲೀಸರ ಪತ್ರ

ನವದೆಹಲಿ, ಫೆಬ್ರವರಿ 16: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಬಹಿರಂಗವಾದ ಟೂಲ್‌ಕಿಟ್ ಕುರಿತ ಪ್ರಕರಣದಲ್ಲಿ ಬಂಧಿತರಾಗಿರುವ ಬೆಂಗಳೂರಿನ ದಿಶಾ ರವಿ ಮತ್ತು ಇತರರ ನಡುವೆ ನಡೆದ ಸಭೆಯ ಕುರಿತಾದ ವಿವರಗಳನ್ನು ನೀಡುವಂತೆ ಜೂಮ್ ಆಪ್‌ಗೆ ದೆಹಲಿ ಪೊಲೀಸರು ಪತ್ರ ಬರೆದಿದ್ದಾರೆ. ಆರೋಪಿಗಳು ಜೂಮ್ ಆಪ್ ವಿಡಿಯೋ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಯಾರೆಲ್ಲ ಭಾಗವಹಿಸಿದ್ದರು ಎಂಬುದನ್ನು ತಿಳಿದುಕೊಳ್ಳಲು ಅದು ಬಯಸಿದೆ.

ಟೂಲ್‌ಕಿಟ್ ಕುರಿತಂತೆ ಕಳೆದ ವಾರವೇ ದೆಹಲಿ ಪೊಲೀಸರು ಗೂಗಲ್‌ನಿಂದ ಮಾಹಿತಿ ಕೇಳಿತ್ತು. ಆದರೆ ಇದುವರೆಗೂ ಅದಕ್ಕೆ ಪ್ರತಿಕ್ರಿಯೆ ಬಂದಿಲ್ಲ. ಟೂಲ್‌ಕಿಟ್ ಕುರಿತಂತೆ ದಿಶಾ ರವಿ, ನಿಕಿತಾ ಜೇಕಬ್, ಶಂತನು ಸೇರಿದಂತೆ ಸುಮಾರು 70 ಮಂದಿ ಜೂಮ್ ವಿಡಿಯೋ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಖಲಿಸ್ತಾನ ಪರವಾದ ಸಂಘಟನೆ ಪೊಯೆಟಿಕ್ ಜಸ್ಟೀಸ್ ಫೌಂಡೇಷನ್ ಜನವರಿ 11-15ರ ನಡುವೆ ಆಯೋಜಿಸಿದ್ದ ಜೂಮ್ ಸಭೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರೆ ಮತ್ತಷ್ಟು ವಿವರಗಳು ಲಭ್ಯವಾಗಬಹುದು ಎಂದು ಪೊಲೀಸರು ನಿರೀಕ್ಷಿಸಿದ್ದಾರೆ.

 Toolkit Case: Delhi Police Writes To Zoom On Disha Ravis Video Meeting With Others

ಗ್ರೆಟಾ ಥನ್‌ಬರ್ಗ್ ಅವರು ಕಣ್ತಪ್ಪಿನಿಂದ ಟೂಲ್‌ಕಿಟ್ ಹಂಚಿಕೊಂಡ ಕೆಲವೇ ಸಮಯದಲ್ಲಿ ಆಕೆಗೆ ಸಂದೇಶ ಕಳುಹಿಸಿದ್ದ ದಿಶಾ ರವಿ, ದಾಖಲೆಯನ್ನು ಪೋಸ್ಟ್ ಮಾಡದಂತೆ ಸೂಚಿಸಿದ್ದರು ಎನ್ನಲಾಗಿದೆ. ದಿಶಾ ಮತ್ತು ಗ್ರೆಟಾ ನಡುವೆ ನಡೆದ ವಾಟ್ಸಾಪ್ ಚಾಟ್‌ನಲ್ಲಿ ಈ ಮಾಹಿತಿ ಬಹಿರಂಗವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

'ಸ್ವಲ್ಪ ಸಮಯ ಏನನ್ನೂ ಹೇಳಬೇಡ. ಈ ವಿಚಾರ ಈಗ ವಿವಾದವಾಗಿರುವುದರಿಂದ ನಾವು ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಕ್ರಮ ಎದುರಿಸಬೇಕಾಗಬಹುದು' ಎಂದು ದಿಶಾ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+