ದೆಹಲಿಯಲ್ಲಿ ಆರಂಭವಾದ ಸ್ಮಾರ್ಟ್ ಟೋಲ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?

National Highway Toll: ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರವನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ತಂತ್ರಜ್ಞಾನ ಆಧಾರಿತ ಟೋಲ್ ವ್ಯವಸ್ಥೆಯನ್ನು ವಿಸ್ತರಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ದೆಹಲಿಯ ಅರ್ಬನ್ ಎಕ್ಸ್ಟೆನ್ಷನ್ ರೋಡ್-2 (UER-II) ಮಾರ್ಗದಲ್ಲಿನ ಮುಂಡ್ಕಾ-ಬಕ್ಕರ್‌ವಾಲಾ ಟೋಲ್ ಪ್ಲಾಜಾದಲ್ಲಿ ಮಲ್ಟಿ ಲೇನ್ ಫ್ರೀ ಫ್ಲೋ (MLFF) ಟೋಲ್ ವ್ಯವಸ್ಥೆಯನ್ನು ಉದ್ಘಾಟಿಸಿದ್ದಾರೆ.

ಈ ಹೊಸ ವ್ಯವಸ್ಥೆಯ ಮೂಲಕ ವಾಹನಗಳು ಟೋಲ್ ಪ್ಲಾಜಾದಲ್ಲಿ ನಿಲ್ಲದೇ ನೇರವಾಗಿ ಸಂಚರಿಸಬಹುದಾಗಿದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ಸಮಯ ಮತ್ತು ಇಂಧನ ಉಳಿತಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Toll Plazas Go Barrier Free

ಇದಕ್ಕೂ ಮೊದಲು ಗುಜರಾತ್‌ನ ಸುರತ್-ಭರೂಚ್ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ದೇಶದ ಮೊದಲ ಮಲ್ಟಿ ಲೇನ್ ಫ್ರೀ ಫ್ಲೋ ಟೋಲ್ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ಇದೀಗ ದೆಹಲಿಯಲ್ಲೂ ಈ ವ್ಯವಸ್ಥೆ ಜಾರಿಯಾಗಿರುವುದು ದೇಶದ ಹೆದ್ದಾರಿ ಮೂಲಸೌಕರ್ಯದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

ಇನ್ನು ಟೋಲ್ ಬಳಿ ನಿಲ್ಲುವಂತಿಲ್ಲ: ನಿತಿನ್ ಗಡ್ಕರಿ ನೀಡಿದ ಭರ್ಜರಿ ಸಿಹಿ ಸುದ್ದಿ
ಇನ್ನು ಟೋಲ್ ಬಳಿ ನಿಲ್ಲುವಂತಿಲ್ಲ: ನಿತಿನ್ ಗಡ್ಕರಿ ನೀಡಿದ ಭರ್ಜರಿ ಸಿಹಿ ಸುದ್ದಿ

ದೆಹಲಿ ಪ್ರಯಾಣಿಕರಿಗೆ ಇದರಿಂದಾಗುವ ಪ್ರಯೋಜನಗಳು

UER-II ಮಾರ್ಗದಲ್ಲಿ ಜಾರಿಗೊಂಡಿರುವ ಹೊಸ ಮಲ್ಟಿ ಲೇನ್ ಫ್ರೀ ಫ್ಲೋ ಟೋಲ್ ವ್ಯವಸ್ಥೆಯಿಂದ ದೈನಂದಿನ ಪ್ರಯಾಣಿಕರಿಗೆ ಹಲವು ಅನುಕೂಲಗಳು ಲಭ್ಯವಾಗಲಿವೆ.

ಪ್ರಮುಖ ಪ್ರಯೋಜನಗಳು ಹೀಗಿವೆ

* ಟೋಲ್ ಪ್ಲಾಜಾಗಳಲ್ಲಿ ಕಾಯುವ ಅವಶ್ಯಕತೆ ಇಲ್ಲ

* ಸಂಚಾರ ಮತ್ತಷ್ಟು ವೇಗವಾಗಿ ಮತ್ತು ಸುಗಮವಾಗಿ ಸಾಗಲಿದೆ

* ಇಂಧನ ಬಳಕೆ ಕಡಿಮೆಯಾಗಿ ವಾಯು ಮಾಲಿನ್ಯ ಕಡಿಮೆಯಾಗಲಿದೆ

* ದೆಹಲಿಯ ಪ್ರಮುಖ ರಸ್ತೆ ಮಾರ್ಗಗಳಲ್ಲಿ ಜಾರಿಗೊಂಡಿರುವ ಹೊಸ ಮಲ್ಟಿ ಲೇನ್ ಫ್ರೀ ಫ್ಲೋ ಟೋಲ್ ಚಾಲನಾ ಅನುಭವ ಸಿಗಲಿದೆ.

Toll Plazas Go Barrier Free

ಮಲ್ಟಿ ಲೇನ್ ಫ್ರೀ ಫ್ಲೋ ಟೋಲ್ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ವ್ಯವಸ್ಥೆಯಲ್ಲಿ ಟೋಲ್ ಗೇಟ್‌ಗಳ ಬದಲು ತಂತ್ರಜ್ಞಾನ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಬಳಸಲಾಗುತ್ತದೆ. ವಾಹನಗಳ ನಂಬರ್ ಪ್ಲೇಟ್ ಗುರುತಿಸುವ Automatic Number Plate Recognition (ANPR) ತಂತ್ರಜ್ಞಾನ ಹಾಗೂ ಫಾಸ್ಟ್ಯಾಗ್ ಮೂಲಕ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತದೆ.

ವಾಹನ ಸವಾರರ ಗಮನಕ್ಕೆ: ಫಾಸ್ಟ್ಯಾಗ್ ವಾರ್ಷಿಕ ಪಾಸ್ ಎಲ್ಲ ಖಾಸಗಿ ವಾಹನಕ್ಕೂ ಅನ್ವಯ; NHAI ಸ್ಪಷ್ಟನೆ
ವಾಹನ ಸವಾರರ ಗಮನಕ್ಕೆ: ಫಾಸ್ಟ್ಯಾಗ್ ವಾರ್ಷಿಕ ಪಾಸ್ ಎಲ್ಲ ಖಾಸಗಿ ವಾಹನಕ್ಕೂ ಅನ್ವಯ; NHAI ಸ್ಪಷ್ಟನೆ

ಫಾಸ್ಟ್ಯಾಗ್ ನಲ್ಲಿ ಬ್ಯಾಲೆನ್ಸ್ ಇರಬೇಕು

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವಾಹನ ಸವಾರರಿಗೆ ತಮ್ಮ ಫಾಸ್ಟ್ಯಾಗ್ ಖಾತೆಯಲ್ಲಿ ಸಾಕಷ್ಟು ಮೊತ್ತ ಇರಿಸಿಕೊಳ್ಳುವಂತೆ ಸೂಚಿಸಿದೆ. FASTag ಅಮಾನ್ಯವಾಗಿದ್ದರೆ ಅಥವಾ ಬ್ಯಾಲೆನ್ಸ್ ಕಡಿಮೆ ಇದ್ದರೆ ವಾಹನ ಮಾಲೀಕರಿಗೆ ಇ-ನೋಟಿಸ್ ಕಳುಹಿಸಲಾಗುತ್ತದೆ. ಈ ಶುಲ್ಕವನ್ನು 72 ಗಂಟೆಗಳೊಳಗೆ ಪಾವತಿಸಬೇಕಾಗುತ್ತದೆ.

ದೇಶಾದ್ಯಂತ ಈ ವ್ಯವಸ್ಥೆ ತರಲು ಸಿದ್ಧತೆ ನಡೆಸಿದೆ

ಈ ಹೊಸ ಟೋಲ್ ವ್ಯವಸ್ಥೆಯಿಂದ ಟೋಲ್ ನಿರ್ವಹಣೆಯಲ್ಲಿ ಪಾರದರ್ಶಕತೆ ಹೆಚ್ಚುವುದರ ಜೊತೆಗೆ ಭೌತಿಕ ಟೋಲ್ ಪ್ಲಾಜಾಗಳ ನಿರ್ವಹಣಾ ವೆಚ್ಚವೂ ಕಡಿಮೆಯಾಗಲಿದೆ. ಮುಂದಿನ ದಿನಗಳಲ್ಲಿ ದೇಶದ ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಇದೇ ಮಾದರಿಯ ತಡೆರಹಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಯೋಜಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+