ಶೌಚಾಲಯ ಮೊದಲು; ಮಂದಿರ ನಂತರ:ಮೋದಿ ಮಂತ್ರ

ನವದೆಹಲಿಯಲ್ಲಿ ಒಂದೇ ವಾರದಲ್ಲಿ 2ನೆಯ ಬಾರಿಗೆ ಜನ ಸಮಾವೇಶವನ್ನುದ್ದೇಶಿಸಿ ಮಾತನಾಡಿರುವ ಮೋದಿ, ನಿನ್ನೆ ಗಾಂಧಿ ಜಯಂತಿ ದಿನ ರಾಜಧಾನಿಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ಟಾಯ್ಲೆಟ್ ಫಸ್ಟ್, ಟೆಂಪಲ್ ನೆಕ್ಸ್ಟ್ ಎಂದಿದ್ದಾರೆ.
ಹಿಂದುತ್ವದ ನಾಯಕನಾಗಿ ನಾನು ಪರಿಚಿತನಾಗಿದ್ದೇನೆ. ನನ್ನ ವ್ಯಕ್ತಿತ್ವ ಹೀಗೆ ಮಾತನಾಡಲು ಒಪ್ಪುತ್ತಿಲ್ಲ. ಆದರೂ ಅಳುಕದೆ ಹೇಳುತ್ತಿರುವೆ- ನನ್ನ ನಿಜವಾದ ಾಲೋಚನೆಯೆಂದರೆ ಪಹಲೆ ಶೌಚಾಲಯ, ಫಿರ್ ದೇವಾಲಯ' ಎಂದು ನರೆಂದ್ರ ಮೋದಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಗಾಂಧಿ ವಿಚಾರಧಾರೆಯನ್ನು ಸ್ಮರಿಸಿದ ಮೋದಿ ಶೌಚಾಲಯಗಳು ಇಲ್ಲದೆ ಹಳ್ಳಿಗಾಡಿನಲ್ಲಿ ಮಹಿಳೆಯರು ದೂರದ ಪ್ರದೇಶಗಳಿಗೆ ನಡೆದು ಹೋಗುವ ದುರವಸ್ಥೆಯಿದೆ. ಇದು ನಿಜಕ್ಕೂ ದೌರ್ಭಾಗ್ಯವೇ ಸರಿ ಎಂದು ಅವರು ವಿಷಾದಿಸಿದರು.











Click it and Unblock the Notifications