ಚಿತ್ರ ಸುದ್ದಿ: ಕಡಿಮೆ ಬೆಲೆಯಲ್ಲಿ ಸ್ತನ ಕ್ಯಾನ್ಸರ್ ಔಷಧಿ
ಬೆಂಗಳೂರು, ಜ.19: ಬಯೋಕಾನ್ ಸಂಸ್ಥೆಯು ಸ್ತನ ಕ್ಯಾನ್ಸರ್ ನಿವಾರಣೆಗಾಗಿ 'ಕ್ಯಾನ್ ಮ್ಯಾಬ್' ಎಂಬ ಔಷಧಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು, 150 ಮಿಲಿ ಗ್ರಾಂ ಹಾಗೂ 450 ಮಿಲಿ ಗ್ರಾಂ ಪ್ರಮಾಣದಲ್ಲಿ ಸ್ತನ ಕ್ಯಾನ್ಸರ್ ಗೆ ಪರಿಣಾಮಕಾರಿಯಾಗಬಲ್ಲ ಈ ಔಷಧಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.
ಈ ಕುರಿತು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಪ್ರಸ್ತುತ 150 ಮಿಲಿ ಗ್ರಾಂ ಹಾಗೂ 450 ಮಿಲಿ ಗ್ರಾಂ ಪ್ರಮಾಣದಲ್ಲಿ ಸ್ತನ ಕ್ಯಾನ್ಸರ್‌ಗೆ ಪರಿಣಾಮಕಾರಿಯಾಗಬಲ್ಲ ಈ ಔಷಧಿಯನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ತನಕ್ಯಾನ್ಸರ್ ಔಷಧಗಳ ದರಕ್ಕಿಂತ ಶೇಕಡ 25 ರಷ್ಟು ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಎಂದು ಹೇಳಿದರು.
ಫೆಬ್ರವರಿ ತಿಂಗಳಲ್ಲಿ ಈ ಔಷಧಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು 150 ಮಿಲಿ ಗ್ರಾಂ ಔಷಧಿಗೆ 19,500 ರೂ. ಹಾಗೂ 450 ಮಿಲಿ ಗ್ರಾಂಗೆ 57 ಸಾವಿರ ರೂ. ಬೆಲೆ ನಿಗದಿ ಮಾಡಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ 440 ಮಿಲಿ ಗ್ರಾಂ ಔಷಧಿಗೆ 75 ಸಾವಿರಕ್ಕೂ ಹೆಚ್ಚು ಹಣ ಪಡೆಯಲಾಗುತ್ತಿದೆ. ಹೀಗಾಗಿ, ಬಯೋಕಾನ್ ನ ಈ ಔಷಧಿ ನೂತನ ಮೈಲುಗಲ್ಲಾಗಲಿದೆ ಎಂದು ಕಿರಣ್ ಮುಜಾಂದರ್ ಷಾ ಹೇಳಿದ್ದಾರೆ.

ಬಯೋಕಾನ್ : ಕಡಿಮೆ ಬೆಲೆಯಲ್ಲಿ ಸ್ತನ ಕ್ಯಾನ್ಸರ್ ಔಷಧಿ
ಭಾರತದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಸಮಸ್ಯೆ ಎದುರಿಸುತ್ತಿರುವ 1.45 ಲಕ್ಷ ಸ್ತನ ಕ್ಯಾನ್ಸರ್ ರೋಗಿಗಳಿಗೆ ನೆರವಾಗಲಿದೆ. ಈಗಾಗಲೇ ಯೂರೋಪ್ ಹಾಗೂ ಅಮೆರಕ ದೇಶಗಳಿಗೆ ಔಷಧ ಪೂರೈಕೆ ಮಾಡಲು ಅನುಮತಿಗೆ ಮನವಿ ಸಲ್ಲಿಸಲಾಗಿದೆ ಎಂದು ಕಿರಣ್ ಹೇಳಿದರು.

ಛಾದರ್ ಹೊತ್ತ ಬಿಹಾರ ಸಿಎಂ ನಿತೀಶ್
ಪಾಟ್ನ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಛಾದರ್ ಹೊತ್ತು ಹೈಕೋರ್ಟ್ ಮಜಾರ್ ಬಳಿ ಉರುಸ್ ನಲ್ಲಿ ಪಾಲ್ಗೊಂಡಿದ್ದರು. ಪಿಟಿಐ

ಸುನಂದಾ ಪುಷ್ಕರ್ ಪುತ್ರ ಶಿವ ಮೆನನ್
ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಪುತ್ರ ಶಿವ ಮೆನನ್ ಅವರ ಲೋಧಿ ರಸ್ತೆ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ಸಂದರ್ಭದಲ್ಲಿ PTI Photo by Shahbaz Khan

ಶಿಮ್ಲಾದಲ್ಲಿ ಹಿಮವೋ ಹಿಮ
ಶಿಮ್ಲಾ: ಐತಿಹಾಸಿಕ ರಿಡ್ಜ್ ರಸ್ತೆಯಲ್ಲಿ ಹಿಮ ಮಳೆಯ ನಡುವೆ ಕಂಡ ದೃಶ್ಯ

ಅಲಹಾಬಾದಿನಲ್ಲಿ ಮಾಘ ಗಂಗಾ ಮೇಳ
ಅಲಹಾಬಾದಿನಲ್ಲಿ ಮಾಘ ಸಂಗಮ ಗಂಗಾ ಮೇಳದಲ್ಲಿ ಪವಿತ್ರಸ್ನಾನಕ್ಕಾಗಿ ಬಂದಿರುವ ಸಾಧು

ಬೊಹ್ರಾ ಸಮುದಾಯದ ಜನಸಂದಣಿ
ಮುಂಬೈನಲ್ಲಿ ನಡೆದ ಬೊಹ್ರಾ ಸಮುದಾಯದ ಧಾರ್ಮಿಕ ಗುರು ಸೈಯದ್ ಮಹಮ್ಮದ್ ಬುಹನ್ನುದ್ದೀನ್ ಅಂತಿಮ ಯಾತ್ರೆಗೆ ಸೇರಿರುವ ಭಕ್ತಾದಿಗಳ ಸಮೂಹ












Click it and Unblock the Notifications