ಚಿತ್ರಸುದ್ದಿ : ಸುಗ್ಗಿ ಹಬ್ಬದ ತಯಾರಿ ಆಗ್ಲೇ ಶುರು
ಬೆಂಗಳೂರು, ಜ.7: ಸುಗ್ಗಿ ಹಬ್ಬ ಪೊಂಗಲ್ ನಿಮಿತ್ತ ತಮಿಳುನಾಡಿನ ರೇಷನ್ ಕಾರ್ಡ್ ದಾರರಿಗೆ ಉಚಿತ ಅಕ್ಕಿ, ಸಕ್ಕರೆ ಮತ್ತು 100 ರೂ. ಪ್ಯಾಕೇಜ್ ಅನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಘೋಷಿಸಿದ ಬೆನ್ನಲ್ಲೇ, ಸರ್ಕಾರಿ ನೌಕರರು ಮತ್ತು ನಿವೃತ್ತರಿಗೂ ಪೊಂಗಲ್ ಬೋನಸ್ ನೀಡುವುದಾಗಿ ಹೇಳಿದ್ದಾರೆ.
ಈ ನಡುವೆ ಚೆನ್ನೈ, ಕೊಯಮತ್ತೂರು ಮುಂತಾದೆಡೆ ಒಂದು ವಾರಕ್ಕೆ ಮೊದಲೇ ಹಬ್ಬದ ತಯಾರಿ ಜೋರಾಗಿ ನಡೆದಿದೆ. ಶಾಲಾ ಕಾಲೇಜು, ಕಚೇರಿಗಳಲ್ಲಿ ಮುಂದಿನ ವಾರ ರಜೆ ಇರುವುದರಿಂದ ಈ ವಾರವೇ ಹಬ್ಬದ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ.
ಇದರಿಂದ ಸರ್ಕಾರದ ಬೊಕ್ಕಸಕ್ಕೆ 308.28 ಕೋಟಿ ರೂ. ವೆಚ್ಚವಾಗಲಿದೆ.
ಹಬ್ಬದ ಸಂದರ್ಭದಲ್ಲಿ ತಮಿಳುನಾಡಿನ ಗ್ರೂಪ್ ಸಿ ಮತ್ತು ಡಿ ಅಧಿಕಾರಿಗಳು ಮತ್ತು ಶಿಕ್ಷಕರಿಗೆ 3000 ರು. ಬೋನಸ್ ಪಡೆಯಲಿದ್ದಾರೆ. ಗ್ರೂಪ್ ಎ ಮತ್ತು ಬಿ ಅಡಿಯಲ್ಲಿ ಬರುವ ನೌಕರರು, ಐಸಿಡಿಎಸ್ ಉದ್ಯೋಗಿಗಳು, ಗ್ರಾಮ ಸಹಾಯಕರಿಗೆ 1000 ರು. ಉಳಿದಂತೆ, ನಿವೃತ್ತ ನೌಕರರು ಮತ್ತು ಮಾಜಿ ಗ್ರಾಮಾಧಿಕಾರಿಗಳಿಗೆ 500 ರು. ನೀಡಲಾಗುತ್ತಿದೆ.
ಮಿಕ್ಕಂತೆ ಇಂದಿನ ಚಿತ್ರಗಳಲ್ಲಿ ಸುದ್ದಿಯಲ್ಲಿ ಮುಂಬೈನಲ್ಲಿ ಬಾಲಿವುಡ್ ಕ್ಯಾಲೆಂಡರ್ ರಿಲೀಸ್, ಸಲ್ಮಾನ್ ರಿಂದ ಹೊಸ ಆಡಿ ಕಾರು ಅನಾವರಣ, ತಿರುಪತಿಯಲ್ಲಿ ಇಸ್ರೋ ಅಧ್ಯಕ್ಷ, ಕಾಶ್ಮೀರಿ ಕನ್ಯೆಯರ ಪಾಡು, ಮುಂಬೈನಲ್ಲಿ ವಿಕ್ರಮಾದಿತ್ಯ ಮುಂತಾದ ಚಿತ್ರಗಳಿವೆ...

ಸುಗ್ಗಿ ಹಬ್ಬಕ್ಕೆ ತಮಿಳರಿಂದ ಸಕತ್ ತಯಾರಿ
ಕೊಯಮತ್ತೂರಿನ ಕಾಲೇಜಿನಲ್ಲಿ ವಿದ್ಯಾರ್ಥಿ ವೃಂದ ಪೊಂಗಲ್ ಹಬ್ಬಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ.

ತಿಮ್ಮಪ್ಪನಿಗೆ ನಮೋ ಎಂದ ಇಸ್ರೋ ಅಧ್ಯಕ್ಷ
ಸ್ವದೇಶಿ ನಿರ್ಮಿತ ಇಂಜಿನ್ ಉಳ್ಳ ಜಿಎಸ್ ಎಲ್ ವಿ-ಡಿ 5 ಯಶಸ್ವಿ ಉಡಾವಣೆ ಬೆನ್ನಲ್ಲೇ ಇಸ್ರೋ ಅಧ್ಯಕ್ಷ ಕೆ ರಾಧಾಕೃಷ್ಣನ್ ಅವರು ಸೋಮವಾರ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. [ಇಸ್ರೋ ಮಹತ್ಸಾಧನೆ ಬಗ್ಗೆ]

ರಷ್ಯಾದಿಂದ ಅರಬ್ಬಿ ಕಡಲಿಗೆ ಬಂದ ವಿಕ್ರಮಾದಿತ್ಯ
ಭಾರತೀಯ ಜಲಸೇನೆಗೆ ಸೇರಿದ ಯುದ್ಧವಿಮಾನ ಹೊತ್ತೊಯ್ಯ ಬಲ್ಲ ಸಾಮರ್ಥ್ಯವುಳ್ಳ ಬೃಹತ್ ನೌಕೆ ಐಎನ್ ಎಸ್ ವಿಕ್ರಮಾದಿತ್ಯ ಮುಂಬೈನ ಅರಬ್ಬಿ ಕಡಲಿನಲ್ಲಿ ಬಂದಿಳಿದೆ. ರಷ್ಯಾ ನಿರ್ಮಿತ ಈ ಯುದ್ಧ ನೌಕೆಗೆ 1ನೇ ಶತಮಾನದ ಉಜ್ಜಯಿನಿಯ ಚಕ್ರವರ್ತಿ ವಿಕ್ರಮಾದಿತ್ಯನ ಹೆಸರಿಡಲಾಗಿದೆ.

ಆಡಿ ಆರ್ ಎಸ್ 7 ಅನಾವರಣಗೊಳಿಸಿದ ಸಲ್ಮಾನ್ ಖಾನ್
ಮುಂಬೈ: ಬಾಲಿವುಡ್ ನ ಜನಪ್ರಿಯ ನಾಯಕ ನಟ ಸಲ್ಮಾನ್ ಖಾನ್ ಅವರು ಆಡಿ ಆರ್ ಎಸ್ 7 ಕ್ರೀಡಾ ಕಾರನ್ನು ಅನಾವರಣಗೊಳಿಸಿದರು.

ಕಾಶ್ಮೀರಿ ಜಲ ಕನ್ಯೆಯರ ಪರದಾಟ
ಅನಂತ್ ನಾಗ್: ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಬಹುತೇಕ ಭಾಗದಲ್ಲಿ ಜೀರೋ ಡಿಗ್ರಿ ತಾಪಮಾನ ಇನ್ನೂ ಮುಂದುವರೆದಿದೆ. ಕಾಶ್ಮೀರದ ಯುವತಿಯರು ಕೊರೆಯುವ ಚಳಿಯಲ್ಲೂ ನೀರು ಹೊತ್ತು ಸಾಗುವುದು ಅನಿವಾರ್ಯವಾಗಿದೆ.

ನನ್ನ ಫೋಟೋ ಹೇಗೆ ಬಂದಿದೆ
ಮುಂಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರು ದಬ್ಬೂ ರತ್ನನಾನಿ ವಾರ್ಷಿಕ ಬಾಲಿವುಡ್ ಕ್ಯಾಲೆಂಡರ್ ಅನಾವರಣಗೊಳಿಸಿದ ಸಂದರ್ಭದಲ್ಲಿ ಕಂಡು ಬಂದಿದ್ದು ಹೀಗೆ

ಕೋಲ್ಕತ್ತಾದಲ್ಲೂ ಸಾರಿಗೆ ಮುಷ್ಕರ
ಹೌರಾ: ಖಾಸಗಿ ಸಾರಿಗೆ ವಾಹನ ಹಾಗೂ ಮಿನಿ ಬಸ್ ಗಳ ಮುಷ್ಕರದಿಂದ ಸಾರ್ವಜನಿಕರು ಪರದಾಡಬೇಕಾಯಿತು.

ಕ್ರೈಸ್ಟ್ ಕಾಲೇಜಿನಲ್ಲಿ ಧರ್ಮಗುರು ದಲೈ ಲಾಮಾ
ಬೆಂಗಳೂರು : ಟಿಬೆಟ್ಟಿನ ಧರ್ಮಗುರು ದಲೈಲಾಮಾ ಅವರು ನಗರದ ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳ ಜತೆ ಸೋಮವಾರ ಸಂವಾದ ನಡೆಸಿದ ನಂತರ ಗ್ರೂಪ್ ಫೋಟೋದಲ್ಲಿ. PTI Photo by Shailendra Bhojak

ಚಳಿಗಾಲ ಕ್ವೀನ್ ಗಾಗಿ ಸೌಂದರ್ಯ ಸ್ಪರ್ಧೆ
ಮನಾಲಿಯಲ್ಲಿ ಸೋಮವಾರ ನಡೆದ ಚಳಿಗಾಲದ ಸೌಂದರ್ಯ ರಾಣಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯುವತಿಯರು ಬೆಕ್ಕಿನ ನಡಿಗೆ ಇಡಲು ಸಿದ್ಧರಾಗಿ ನಿಂತು ತಮ್ಮ ಸರದಿಗಾಗಿ ಕಾದಿದ್ದಾರೆ.(ಪಿಟಿಐ ಚಿತ್ರ).

ಅಗರ್ತಲದಲ್ಲಿ ಮೀನಿಗಾಗಿ ಹುಡುಕಾಟ
ಅಗರ್ತಲ : ನಗರದ ಹೊರವಲಯದಲ್ಲಿರುವ ಹೊಅರಾ ನದಿಯಲ್ಲಿ ಮೀನಿಗಾಗಿ ಬಲೆ ಬೀಸಿರುವ ಬೆಸ್ತ.

ಗುರ್ ಗಾಂವ್ ನಲ್ಲಿ ಚಳಿ ಕಾಯಿಸುವುದೇ ಕೆಲಸ
ದೆಹಲಿ, ಗುರ್ ಗಾಂವ್ ನಲ್ಲಿ ಕೊರೆಯುವ ಚಳಿಯಿಂದ ತತ್ತರಿಸುತ್ತಿರುವ ಜನತೆ ಬೆಂಕಿ ಕಾಯಿಸುತ್ತಿದ್ದಾರೆ.












Click it and Unblock the Notifications