ಚಿತ್ರಗಳಲ್ಲಿ: ಮಿರ್ಜಾಪುರದಲ್ಲಿ ಟೀಚರ್ ಆದ ವಿದ್ಯಾ

ಬೆಂಗಳೂರು, ಸೆ.23 : ಬಾಲಿವುಡ್ ನಟಿ ವಿದ್ಯಾ ಬಾಲನವರು ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯ ಥಾನಾಪುರ ಗ್ರಾಮದ ಶಾಲೆ ಭೇಟಿ ನೀಡಿದ್ದರು. ಸರ್ಕಾರಿ ಶಾಲೆ ಮಕ್ಕಳ ಪಾಲಿಗೆ ವಿದ್ಯಾ ಮೇಡಂ ಆಗಿ ಪಾಠ ಮಾಡಿದ್ದಾರೆ. ಸಾಕ್ಷರತಾ ಜಾಗೃತಿ ಅಭಿಯಾನಕ್ಕೆ ವಿದ್ಯಾ ರಾಯಭಾರಿಯಾಗಿದ್ದಾರೆ.

ಜಾಫ್ನಾದಲ್ಲಿ ಶ್ರೀಲಂಕಾದ ಉತ್ತರ ಪ್ರಾಂತ್ಯದ ಸರ್ಕಾರದ ಮುಖ್ಯಸ್ಥ ಸ್ಥಾನಕ್ಕೆ ಸುಪ್ರೀಂಕೋರ್ಟ್ ನ ನಿವೃತ್ತ ಜಸ್ಟೀಸ್ ಸಿವಿ ವಿಘ್ನೇಶ್ವರನ್ ಅವರು ಆಯ್ಕೆಯಾದ ಖುಷಿಯಲ್ಲಿ ವಿಕ್ಟರಿ ಚಿಹ್ನೆ ತೋರುತ್ತಿದ್ದಾರೆ. ಶ್ರೀಲಂಕಾದ ತಮಿಳು ಬಂಡಾಯಗಾರರು ಲಂಕಾದ ಉತ್ತರ ಪ್ರಾಂತ್ಯದ ಮೇಲೆ ಪ್ರಭುತ್ವ ಸ್ಥಾಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಮುಂಬೈನಲ್ಲಿ ಗಣೇಶ ವಿಸರ್ಜನೆ ನಂತರ ಸ್ವಚ್ಛತಾ ಕಾರ್ಯ ಮುಂದುವರೆದಿದೆ. ಸಿಂಗಪುರದಲ್ಲಿ ಮರೀನಾ ಬೇ ಸಿಟಿ ಸರ್ಕ್ಯೂಟ್ ನಲ್ಲಿ ಎಫ್ 1 ಕಾರುಗಳ ಕಲರವ, ಇಸ್ಲಾಮಾಬಾದಿನಲ್ಲಿ ಪಾಕಿಸ್ತಾನಿ ಕ್ರೈಸ್ತರು ಚರ್ಚ್ ಮೇಲೆ ದಾಳಿಯನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ವಿರಾಟ್ ಕೊಹ್ಲಿ ಈಗ ಬಿಎಸ್ ಎಫ್ ರಾಯಭಾರಿಯಾಗಿ 'ಹ್ಯಾಟ್' ಧರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಹೊಸ ಹೇರ್ ಸ್ಟೈಲ್ ಮುಂತಾದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ

ಮಿರ್ಜಾಪುರದಲ್ಲಿ ವಿದ್ಯಾ

ಮಿರ್ಜಾಪುರದಲ್ಲಿ ವಿದ್ಯಾ

ಮಿರ್ಜಾಪುರ : ಸರ್ಕಾರಿ ಶಾಲೆ ಮಕ್ಕಳ ಪಾಲಿಗೆ ವಿದ್ಯಾ ಮೇಡಂ ಆಗಿ ಪಾಠ ಮಾಡಿದ್ದಾರೆ. ಸಾಕ್ಷರತಾ ಜಾಗೃತಿ ಅಭಿಯಾನಕ್ಕೆ ವಿದ್ಯಾ ರಾಯಭಾರಿಯಾಗಿದ್ದಾರೆ.

ಜಾಫ್ನಾದಲ್ಲಿ

ಜಾಫ್ನಾದಲ್ಲಿ

ಶ್ರೀಲಂಕಾದ ಉತ್ತರ ಪ್ರಾಂತ್ಯದ ಸರ್ಕಾರದ ಮುಖ್ಯಸ್ಥ ಸ್ಥಾನಕ್ಕೆ ಸುಪ್ರೀಂಕೋರ್ಟ್ ನ ನಿವೃತ್ತ ಜಸ್ಟೀಸ್ ಸಿವಿ ವಿಘ್ನೇಶ್ವರನ್ ಅವರು ಆಯ್ಕೆಯಾದ ಖುಷಿಯಲ್ಲಿ ವಿಕ್ಟರಿ ಚಿಹ್ನೆ ತೋರುತ್ತಿದ್ದಾರೆ.

ಸಿಂಗಪುರದಲ್ಲಿ

ಸಿಂಗಪುರದಲ್ಲಿ

ಸಿಂಗಪುರದ ಮರೀನಾ ಬೇ ಸಿಟಿ ಸರ್ಕ್ಯೂಟ್ ನಲ್ಲಿ ನಡೆದ ಫಾರ್ಮ್ಯೂಲಾ ಒನ್ ಗ್ರ್ಯಾಂಡ್ ಪ್ರಿಕ್ಸ್ ನ ಒಂದು ದೃಶ್ಯ

ಇಸ್ಲಾಮಾಬಾದಿನಲ್ಲಿ

ಇಸ್ಲಾಮಾಬಾದಿನಲ್ಲಿ

ಇಸ್ಲಾಮಾಬಾದಿನಲ್ಲಿ ಪಾಕಿಸ್ತಾನಿ ಕ್ರೈಸ್ತರು ಚರ್ಚ್ ಮೇಲೆ ದಾಳಿಯನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಭಾನುವಾರ ಚರ್ಚ್ ವೊಂದರ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿ ಸುಮಾರು 80ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ ದುರ್ಘಟನೆ ನಡೆದಿತ್ತು.

ಮುಂಬೈನಲ್ಲಿ

ಮುಂಬೈನಲ್ಲಿ

ಮುಂಬೈನಲ್ಲಿ ಗಣೇಶ ವಿಸರ್ಜನೆ ನಂತರ ಗಿರ್ ಗಾಮ್ ಚೌಪಟಿಯಲ್ಲಿ ಸ್ವಚ್ಛತಾ ಕಾರ್ಯ ಮುಂದುವರೆದಿದೆ.

ಬಿಎಸ್ ಎಫ್ ರಾಯಭಾರಿ

ಬಿಎಸ್ ಎಫ್ ರಾಯಭಾರಿ

ವಿರಾಟ್ ಕೊಹ್ಲಿ ಈಗ ಬಿಎಸ್ ಎಫ್ ರಾಯಭಾರಿಯಾಗಿ 'ಹ್ಯಾಟ್' ಧರಿಸಿದ್ದಾರೆ. PTI Photo by Vijay Verma

ಪ್ಯಾರೀಸ್ ನಿಂದ

ಪ್ಯಾರೀಸ್ ನಿಂದ

ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಪ್ಯಾರೀಸ್ ನಲ್ಲಿ ನಡೆದ ವಿಶ್ವಕಪ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಸ್ಟೈಲ್ ಕಿಂಗ್ ಧೋನಿ

ಸ್ಟೈಲ್ ಕಿಂಗ್ ಧೋನಿ

ಚಾಂಪಿಯನ್ಸ್ ಲೀಗ್ 20ಯಲ್ಲಿ ದಕ್ಷಿಣ ಆಫ್ರಿಕದ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿದ್ದು ಹೀಗೆ.. ವಿವರ ನಿರೀಕ್ಷಿಸಿ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+