ಚಿತ್ರಸುದ್ದಿ: ತಂಬಾಕು ವಿರುದ್ಧ ದ್ರಾವಿಡ್ ಬ್ಯಾಟಿಂಗ್

ಬೆಂಗಳೂರು, ಮೇ.23: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಇತ್ತೀಚಿನ ರೌಂಡ್ ಆಪ್ ಅನ್ನು ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಇಲ್ಲಿ ಅಕ್ಷರಕ್ಕಿಂತ ಆಕರ್ಷಕ ಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಚುಟುಕು ಮಾಹಿತಿಯೊಂದಿಗೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

ವಿಶ್ವ ತಂಬಾಕು ರಹಿತ ದಿನಾಚರಣೆಗಾಗಿ ಕೇಂದ್ರ ಆರೋಗ್ಯ ಸಚಿವಾಲಯ ಸಿದ್ಧತೆ ನಡೆಸುತ್ತಿದೆ, ಕೇಂದ್ರ ಸಚಿವ ಡಾ. ಹರ್ಷವರ್ಧನ್ ಅವರು ತಂಬಾಕು ವಿರುದ್ಧ ಅಭಿಯಾನಕ್ಕೆ ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರು ರಾಯಭಾರಿಯಾಗಿರುತ್ತಾರೆ ಎಂದು ಘೋಷಿಸಿದ್ದಾರೆ. ಈ ಬಗ್ಗೆ ಮುದ್ರಿತ ಜಾಹೀರಾತು ಫಲಕವನ್ನು ಹರ್ಷವರ್ಧನ್ ಅವರು ಗುರುವಾರ ಅನಾವರಣಗೊಳಿಸಿದರು. ಮೇ 31 ರಂದು ವಿಶ್ವ ತಂಬಾಕು ವಿರೋಧಿ ದಿನ ಎಲ್ಲೆಡೆ ಆಚರಿಸಲಾಗುತ್ತದೆ.

ಸೂರತ್ ನಲ್ಲಿ ಆರ್ಕಿಡ್ ವಿಪುಲ್ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ದೃಶ್ಯ, ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ರಷ್ಯಾದ ಮರಿಯಾ ಶರಪೋವಾ, ಸಾಹಿತಿ ಮಾಯಾ ಏಂಜಲೋ ನೆನಪು, ಯುಎಸ್ ಮಿಲಿಟರಿ ಅಕಾಡೆಮಿಯಲ್ಲಿ ಬರಾಕ್ ಒಬಾಮಾ, ವೈಷ್ಣೋದೇವಿ ಪ್ರವಾಸ ಹೊರಟ ಮುಖ್ಯಮಂತ್ರಿ, ಎವರೆಸ್ಟ್ ವಾರ್ಷಿಕೋತ್ಸವದಲ್ಲಿ ಸೂತಕ ಛಾಯೆ, ಕೋಲ್ಕತ್ತಾದ ಜೀಬ್ರಾಗಳು ಮುಂತಾದ ಚಿತ್ರಗಳು ಇಂದಿನ ಪ್ಯಾಕೇಜಿನಲ್ಲಿದೆ

ವಿಶ್ವ ತಂಬಾಕು ವಿರೋಧಿ ದಿನ ಸಿದ್ಧತೆ

ವಿಶ್ವ ತಂಬಾಕು ವಿರೋಧಿ ದಿನ ಸಿದ್ಧತೆ

ಕೇಂದ್ರ ಸಚಿವ ಡಾ. ಹರ್ಷವರ್ಧನ್ ಅವರು ತಂಬಾಕು ವಿರುದ್ಧ ಅಭಿಯಾನಕ್ಕೆ ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರು ರಾಯಭಾರಿಯಾಗಿರುತ್ತಾರೆ ಎಂದು ಘೋಷಿಸಿದ್ದಾರೆ.

ಪುಣೆಯಲ್ಲಿ ಬಿಎಂಡಬ್ಲ್ಯೂಜತೆ ಸಚಿನ್

ಪುಣೆಯಲ್ಲಿ ಬಿಎಂಡಬ್ಲ್ಯೂಜತೆ ಸಚಿನ್

ಪುಣೆ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಬಿಎಂಡಬ್ಲ್ಯೂ ಎಕ್ಸ್ 5 ಅನಾವರಣಗೊಳಿಸಿದರು.

ಸೂರತ್ ನಲ್ಲಿ ಭಾರಿ ಬೆಂಕಿ ಆಕಸ್ಮಿಕ

ಸೂರತ್ ನಲ್ಲಿ ಭಾರಿ ಬೆಂಕಿ ಆಕಸ್ಮಿಕ

ಸೂರತ್ ನ ಸಹಾರ ದರ್ವಾಜಾ ಪ್ರದೇಶದ ವಾಣಿಜ್ಯ ಕಟ್ಟಡವೊಂದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 10 ಅಗ್ನಿ ಶಾಮಕದಳಗಳು 100ಕ್ಕೂ ಅಧಿಕ ಮಳಿಗೆಗೆ ತಗುಲಿರುವ ಬೆಂಕಿ ನಂದಿಸುತ್ತಿದ್ದಾರೆ.

ಫ್ರೆಂಚ್ ಓಪನ್ ನಲ್ಲಿ ಮರಿಯಾ ಭಂಗಿ

ಫ್ರೆಂಚ್ ಓಪನ್ ನಲ್ಲಿ ಮರಿಯಾ ಭಂಗಿ

ಪ್ಯಾರೀಸ್ : ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ರಷ್ಯಾದ ಮರಿಯಾ ಶರಪೋವಾ ಅವರು ಬಲ್ಗೇರಿಯಾದ ಪಿರೊಂಕೋವಾ ವಿರುದ್ಧ ಸರ್ವ್ ಮಾಡುತ್ತಿರುವ ಚಿತ್ರ

ಜಾರ್ಖಂಡ್ ಸಿಎಂ ವೈಷ್ಣೋದೇವಿ ಪ್ರವಾಸ

ಜಾರ್ಖಂಡ್ ಸಿಎಂ ವೈಷ್ಣೋದೇವಿ ಪ್ರವಾಸ

ಕತ್ರಾ: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರು ಪೊನಿ(ಕುದುರೆ) ಹತ್ತಿ ಮಾತಾ ವೈಷ್ಣೋದೇವಿ ದೇಗುಲಕ್ಕೆ ತೆರಳುತ್ತಿರುವ ಚಿತ್ರ PTI Photo

ಸಾಹಿತಿ ಮಾಯಾ ಏಂಜಲೋ ಸ್ಮರಣೆ

ಸಾಹಿತಿ ಮಾಯಾ ಏಂಜಲೋ ಸ್ಮರಣೆ

ಆಫ್ರಿಕಾದ ಸೂಕ್ಷ್ಮ ಸಂವೇದನೆಯ ಲೇಖಕಿ ಮಾಯಾ ಏಂಜಲೋ ಬುಧವಾರ Winston-Salem, N.C ನಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಶ್ವದೆಲ್ಲೆಡೆ ಆಕೆಯ ಹೋರಾಟದ ಬದುಕು ಹಾಗೂ ಬರಹವನ್ನು ಸ್ಮರಿಸಲಾಗಿದೆ.

ಕೋಲ್ಕತ್ತಾ 'ಝೂ'ನಲ್ಲಿ ಕಂಡ ಜೀಬ್ರಾಗಳು

ಕೋಲ್ಕತ್ತಾ 'ಝೂ'ನಲ್ಲಿ ಕಂಡ ಜೀಬ್ರಾಗಳು

ಕೋಲ್ಕತ್ತಾ ಪ್ರಾಣಿ ಸಂಗ್ರಹಾಲಯದಲ್ಲಿ ಕಂಡ ಜೀಬ್ರಾಗಳು. PTI Photo

ಮೌಂಟ್ ಎವರೆಸ್ಟ್ ವಾರ್ಷಿಕೋತ್ಸವ

ಮೌಂಟ್ ಎವರೆಸ್ಟ್ ವಾರ್ಷಿಕೋತ್ಸವ

ಮೌಂಟ್ ಎವರೆಸ್ಟ್ ವಾರ್ಷಿಕೋತ್ಸವ ಮೇ.29ರಂದು ಆಚರಿಸಲಾಗಿದೆ. 1953ರಲ್ಲಿ ಹಿಲರಿ ಹಾಗೂ ತೇನಸಿಂಗ್ ಅವರು 8,850-ಮೀಟರ್ (29,035-ಅಡಿ) ಎತ್ತರದ ಶಿಖರವನ್ನು ಹತ್ತಿದ ನೆನಪಿನಲ್ಲಿ ವಾರ್ಷಿಕೋತ್ಸವ ಆಚರಿಸಲಾಗುತ್ತದೆ. ಈ ದಿನವನ್ನು ಇತ್ತೀಚೆಗೆ ಏ.18ರಂದು ಸಾವನ್ನಪ್ಪಿದ್ದ ಪರ್ವತಾರೋಹಿಣಿಯ ಸ್ಮರಣೆಯಲ್ಲಿ ಕಳೆಯಲಾಗಿದೆ

ಯುಎಸ್ ಮಿಲಿಟರಿ ಅಕಾಡೆಮಿಯಲ್ಲಿ ಬರಾಕ್

ಯುಎಸ್ ಮಿಲಿಟರಿ ಅಕಾಡೆಮಿಯಲ್ಲಿ ಬರಾಕ್

ಯುಎಸ್ ಮಿಲಿಟರಿ ಅಕಾಡೆಮಿಯಲ್ಲಿ ಬರಾಕ್ ಒಬಾಮಾ ಅವರು ಹೊಸ ಪದವಿಧರರ ವಂದನೆ ಸ್ವೀಕರಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+