ಕಾಂಗ್ರೆಸ್ ನಿಂದ ಕಾಂಗ್ರೆಸ್ಸಿಗಾಗಿ ರಾಷ್ಟ್ರೀಯ ವಾಹಿನಿ!

ನವದೆಹಲಿ, ಆಗಸ್ಟ್ 12: ಸಾಮಾಜಿಕ ಜಾಲ ಕ್ರಾಂತಿಗೆ ಇನ್ನೂ ಒಗ್ಗಿಲ್ಲದ ಕಾಂಗ್ರೆಸ್ ಮತ್ತೊಮ್ಮೆ ತನ್ನ ಹಳೆ ತಂತ್ರಕ್ಕೆ ಶರಣಾಗಲು ಸಿದ್ಧವಾಗುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿರುವ ವ್ಯವಸ್ಥೆಯನ್ನು ಈಗ ರಾಷ್ಟ್ರಮಟ್ಟಕ್ಕೇರಿಸುವ ಯೋಚನೆ ಹಾಕಿಕೊಂಡಿದೆ. ಹೌದು, ಕಾಂಗ್ರೆಸ್ ತನ್ನದೇ ಆದ ಪ್ರತ್ಯೇಕ ರಾಷ್ಟ್ರೀಯ ವಾಹಿನಿ ಹೊಂದುವ ಇಚ್ಛೆ ವ್ಯಕ್ತಪಡಿಸಿದೆ.

ಅದರೆ, ಹೊಸದಾಗಿ ರಾಷ್ಟ್ರೀಯ ವಾಹಿನಿ ಆರಂಭಕ್ಕೆ ಅಡ್ಡಿ ಆತಂಕ ಎದುರಾಗುವ ಸಾಧ್ಯತೆ ಇರುವುದರಿಂದ ಈಗ ಚಾಲ್ತಿಯಲ್ಲಿರುವ ಪ್ರಾದೇಶಿಕ ವಾಹಿನಿಯೊಂದನ್ನು ಕಾಂಗ್ರೆಸ್ ಮುಖವಾಣಿಯಾಗಿ ರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಲು ಕಾಂಗ್ರೆಸ್ ಸಜ್ಜಾಗಿದೆ ಎಂಬುದರ ಬಗ್ಗೆ ಹಿರಿಯ ಕಾಂಗ್ರೆಸ್ಸಿಗ, ಮಾಜಿ ಕೇಂದ್ರ ಸಚಿವ ಎಕೆ ಅಂಟನಿ ಸುಳಿವು ನೀಡಿದ್ದಾರೆ.

To reach out to masses, Congress looking at opening national TV

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಪರವಾಗಿ ಅಲ್ಲಿನ ಜೈಹಿಂದ್ ಟಿವಿ ಕಾರ್ಯ ನಿರ್ವಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಜೈಹಿಂದ್ ಟಿವಿಯ ಹೊಸ ಕಚೇರಿ ಆರಂಭಗೊಂಡ ಬೆನ್ನಲ್ಲೇ ಈ ಬಗ್ಗೆ ಅಂಟನಿ ಮಾಧ್ಯಮಗಳಿಗೆ ತಿಳಿಸಿದರು.

ಅತ್ಯಾಧುನಿಕ ಮಾಧ್ಯಮ ಬಳಕೆಯಲ್ಲಿ ಕಾಂಗ್ರೆಸ್ ಹಿಂದೆ ಉಳಿದಿರುವುದನ್ನು ಒಪ್ಪಿಕೊಂಡ ಅಂಟನಿ, ಈಗ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಅಣತಿಯಂತೆ ರಾಷ್ಟ್ರೀಯ ಸುದ್ದಿ ವಾಹಿನಿಯನ್ನು ಕಾಂಗ್ರೆಸ್ ಪರ ಪ್ರಚಾರಕ್ಕೆ ಬಳಸಲು ನಿರ್ಧರಿಸಲಾಗಿದೆ. ಈ ಸುದ್ದಿಯನ್ನು ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ


ಕಾಂಗ್ರೆಸ್ ಸರ್ಕಾರ ಕೈಗೊಂಡ ಯೋಜನೆಗಳು, ಆಶಯಗಳು ಹಾಗೂ ಯೋಜನೆಗಳ ಬಗ್ಗೆ ಈ ವಾಹಿನಿ ಮೂಲಕ ಎಲ್ಲಾ ಜನರಿಗೆ ಸುದ್ದಿ ಮುಟ್ಟಲಿದೆ ಎಂದು ಅಂಟನಿ ಹೇಳಿದ್ದಾರೆ.

2007ರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ಆರಂಭಗೊಂಡ ಜೈ ಹಿಂದ್ ಟಿವಿ ಕಳೆದ ಎಂಟು ವರ್ಷಗಳಿಂದ ಕೇರಳ ಕಾಂಗ್ರೆಸ್ ಪರ ಪ್ರಚಾರ ನೀಡುತ್ತಿದೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+