15ಕೋಟಿ ರು ವೆಚ್ಚದಲ್ಲಿ ಪುರಚ್ಚಿ ತಲೈವಿ ಜಯಲಲಿತಾ ಸ್ಮಾರಕ

Written By: Ramesh
Subscribe to Oneindia Kannada

ಚೆನ್ನೈ, ಡಿಸೆಂಬರ್. 11 : ಪುರಚ್ಚಿ ತಲೈವಿ ತಮಿಳುಗರ ಪಾಲಿನ ಅಮ್ಮ ಜೆ. ಜಯಲಲಿತಾ ಅವರ ಸ್ಮಾರಕವನ್ನು 15 ಕೋಟಿ ರು ವೆಚ್ಚದಲ್ಲಿ ನಿರ್ಮಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಮರೀನಾ ಬೀಚ್‌ನಲ್ಲಿರುವ ಎಂ.ಜಿ. ರಾಮ ಚಂದ್ರನ್‌ ಸ್ಮಾರಕದ ಪಕ್ಕದಲ್ಲಿ ಜಯಾ ಅವರ ಸ್ಮಾರಕ ನಿರ್ಮಣವಾಗಲಿದೆ.

ಮುಖ್ಯಮಂತ್ರಿ ಪನ್ನೀರ ಸೆಲ್ವಂ ಅಧ್ಯಕ್ಷತೆ ಯಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮರೀನಾ ಬೀಚ್‌ ನಲ್ಲಿರುವ ಎಂ.ಜಿ. ರಾಮ ಚಂದ್ರನ್‌ ಸ್ಮಾರಕದ ಹೆಸರನ್ನು 'ಎಂಜಿಆರ್ ಮತ್ತು ಪುರಚ್ಚಿ ತಲೈವಿ ಸೆಲ್ವಿ ಜಯಲಲಿತಾ ಸ್ಮಾರಕ' ಎಂದು ಬದಲಾಯಿಸಬೇಕು. ಸ್ಮಾರಕ ಕ್ಕಾಗಿ 15 ಕೋಟಿ ರೂ. ವ್ಯಯಿಸಬೇಕೆಂದು ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡಿದೆ. ['ಚಿನ್ನ'ದ ಗೊಂಬೆ ಜಯಲಲಿತಾ ಬಳಿಯಿದ್ದ ಬಂಗಾರವೆಷ್ಟು?]

Govt. allocates Rs. 15 crore for Jayalalithaa memorial

ಜಯಲಲಿತಾ ಅವರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನ ಪುರಸ್ಕಾರ ನೀಡಬೇಕು ಹಾಗೂ ಸಂಸತ್‌ ಭವನದಲ್ಲಿ ಜಯಲಲಿತಾ ಅವರ ಮೂರ್ತಿ ಸ್ಥಾಪಿಸಬೇಕು ಎಂದು ತಮಿಳುನಾಡು ಸಂಪುಟ ಸಭೆ ನಿರ್ಣಯ ಅಂಗೀಕರಿಸಿದೆ.

ಎಐಎಡಿಎಂಕೆ ಚೆನ್ನೈ ಮುಖ್ಯ ಕಚೇರಿಯಲ್ಲಿ ಜಯಲಲಿತಾ ಅವರ ಚಿನ್ನದ ಮೂರ್ತಿ ಸ್ಥಾಪಿಸಬೇಕೆಂದು ಎಐಎಡಿಎಂಕೆ ಪಕ್ಷ ಆಲೋಚಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The TN State government has allotted Rs. 15 crore for the construction of a memorial for former Chief Minister Jayalalithaa near the MGR memorial on the Marina.
Please Wait while comments are loading...