Get Updates
Get notified of breaking news, exclusive insights, and must-see stories!

Tirupati-Tirumala: ತಿರುಮಲದಲ್ಲಿ ವಿಜಯ್ ಮಲ್ಯಗೆ ನೀಡಿದ್ದ ಭೂಮಿಯನ್ನು ವಾಪಾಸ್‌ ಪಡೆದ ಟಿಟಿಡಿ

ತಿರುಪತಿ, ಆಗಸ್ಟ್ 30: ತಿರುಮಲದ ಧರ್ಮಗಿರಿಯಲ್ಲಿ ಅತಿಥಿಗೃಹ ನಿರ್ಮಾಣಕ್ಕಾಗಿ ಉದ್ಯಮಿ ವಿಜಯ್ ಮಲ್ಯ ಅವರಿಗೆ ನೀಡಿದ್ದ ಜಮೀನನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ವಾಪಾಸ್‌ ಪಡೆದಿದೆ.

ಕುಟೀರ ದೇಣಿಗೆ ಯೋಜನೆಯಡಿ ಹೊಸ ದಾನಿಗಳಿಗೆ ಈ ನಿವೇಶನ ಹಂಚಿಕೆ ಮಾಡಲು ಮಂಡಳಿ ನಿರ್ಧರಿಸಿದೆ. ಸುಮಾರು 32 ವರ್ಷಗಳ ಹಿಂದೆ ಅಂದರೆ ನವೆಂಬರ್ 1991 ರಲ್ಲಿ ನಿರ್ಣಯವನ್ನು ಅಂಗೀಕರಿಸಿದ ನಂತರ ಈ ಭೂಮಿಯನ್ನು ಮಲ್ಯಗೆ ನೀಡಲಾಗಿತ್ತು. ನಿರ್ಣಯವನ್ನು ಅಂಗೀಕರಿಸಿದ ಎರಡು ವರ್ಷಗಳ ಬಳಿಕ, ಮಲ್ಯ ಅವರು ಡಿಸೆಂಬರ್ 1993 ರಲ್ಲಿ ಟಿಟಿಡಿಯೊಂದಿಗೆ ಪ್ರಾಥಮಿಕ ಒಪ್ಪಂದಕ್ಕೆ ಸಹಿ ಹಾಕಿದರು.

Tirupati-Tirumala: TTD gets back land given to Vijay Mallya in Tirumala

ಆದರೆ, ವಿಜಯ್‌ ಮಲ್ಯ ಅಥವಾ ಟ್ರಸ್ಟ್ ಈ ಒಪ್ಪಂದಕ್ಕೆ ಸಹಿ ಹಾಕದ ಕಾರಣ ಅಂತಿಮ ಒಪ್ಪಂದವನ್ನು ತಲುಪಲಾಗಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಲ್ಯ ಅವರಿಗೆ ಯಾವುದೇ ವಿಶೇಷ ದಾನಿಗಳ ಸವಲತ್ತುಗಳನ್ನು ವಿಸ್ತರಿಸಲಾಗಿಲ್ಲ ಎಂದು ವರದಿಗಳು ತಿಳಿಸಿವೆ.

ಅಕ್ಟೋಬರ್ 2017 ರಲ್ಲಿ ಭಾರತದಿಂದ ಪರಾರಿಯಾದ ಉದ್ಯಮಿಯೊಂದಿಗೆ ಟ್ರಸ್ಟ್ ಯಾವುದೇ ಮಾತುಕತೆಯನ್ನು ನಡೆಸಿಲ್ಲ. ಈ ಕಾರಣ, ಟಿಟಿಡಿ ಭೂಮಿಯನ್ನು ವಾಪಸ್‌ ಪಡೆಯುವ ನಿರ್ಣಯ ಕೈಗೊಂಡಿದೆ.

ಮಲ್ಯಗೆ ನೀಡಲಾಗಿದ್ದ ಭೂಮಿಯಲ್ಲಿ ಅತಿಥಿಗೃಹವನ್ನು ನಿರ್ಮಿಸಲಾಗಿದೆ. ಇದನ್ನು ಡಿಸೆಂಬರ್ 1997 ರಲ್ಲಿ ಉದ್ಘಾಟಿಸಲಾಗಿದೆ. ಆ ನಂತರ ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದೆ. ಅದನ್ನು ' ವೆಂಕಟ ವಿಜಯಂ ' ಎಂದು ಹೆಸರಿಸಲಾಗಿದೆ.

Tirupati-Tirumala: TTD gets back land given to Vijay Mallya in Tirumala

ಅತಿಥಿ ಗೃಹದ ನವೀಕರಣ ಮತ್ತು ಪುನರ್ನಿರ್ಮಾಣವನ್ನು ಅಧ್ಯಯನ ಮಾಡಲು ಟಿಟಿಡಿ ಇತ್ತೀಚೆಗೆ ಸಮಿತಿಯನ್ನು ರಚಿಸಿತ್ತು. ಟಿಟಿಡಿಯ ಇಂಜಿನಿಯರಿಂಗ್ ವಿಭಾಗದ ಪರಿಶೀಲನೆಯಲ್ಲಿ ಅತಿಥಿ ಗೃಹ ನಿರ್ಜನವಾಗಿದ್ದು ನಿರ್ವಹಣೆ ಕೊರತೆಯಿಂದ ಹಾಳಾಗಿರುವುದು ಕಂಡುಬಂದಿದೆ ಎಂದು ಸಮಿತಿ ಟ್ರಸ್ಟ್‌ಗೆ ತಿಳಿಸಿದೆ.

ಅತಿಥಿಗೃಹದ ಸ್ಲ್ಯಾಬ್‌ನಲ್ಲಿ ಸೋರಿಕೆಯಾಗಿದ್ದು, ಫಾಲ್ಸ್ ಸೀಲಿಂಗ್‌ಗಳು ಹಾನಿಗೊಳಗಾಗಿವೆ. ಮರದ ಪ್ಯಾನೆಲಿಂಗ್, ಮರದ ಸೀಲಿಂಗ್, ಸ್ಯಾನಿಟರಿ ಫಿಟ್ಟಿಂಗ್‌ಗಳು, ನೀರಿನ ಮಾರ್ಗಗಳು ಸಹ ಕಳಪೆ ಸ್ಥಿತಿಯಲ್ಲಿವೆ ಎಂದು ಎಂಜಿನಿಯರಿಂಗ್ ಇಲಾಖೆ ವರದಿ ತಿಳಿಸಿದೆ.

ಮಾರ್ಚ್ 2023 ರಲ್ಲಿ, ಮಲ್ಯ ಅವರ ಬೆಂಗಳೂರಿನ ನಿವಾಸಕ್ಕೆ ಟಿಟಿಡಿ ಶೋಕಾಸ್ ನೋಟಿಸ್ ಕಳುಹಿಸಿತ್ತು. ಆದರೆ, ಮಲ್ಯ ಅವರು ಬೆಂಗಳೂರಿನ ನಿವಾಸದಲ್ಲಿ ವಾಸಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ನೋಟಿಸ್‌ ಅನ್ನು ಟಿಟಿಡಿಗೆ ಹಿಂತಿರುಗಿಸಲಾಯಿತು. ಶೋಕಾಸ್ ನೋಟಿಸ್‌ನಲ್ಲಿ ಮಂಜೂರಾಗಿದ್ದ ಜಮೀನನ್ನು ಏಕೆ ವಾಪಾಸ್‌ ಪಡೆಯಬಾರದು ಎಂದು ಟ್ರಸ್ಟ್ ಕೇಳಿದೆ. ನಿರ್ವಹಣೆ ಕೊರತೆಯ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದೆ.

Tirupati-Tirumala: TTD gets back land given to Vijay Mallya in Tirumala

ಈ ವರ್ಷದ ಜೂನ್‌ನಲ್ಲಿ ಮಲ್ಯ ಅವರೊಂದಿಗೆ ಸಂಪರ್ಕವನ್ನು ಸಾಧಿಸಲು ಯಾವುದೇ ಮಾರ್ಗವಿಲ್ಲದ ಕಾರಣ, ಟ್ರಸ್ಟ್ ಅತಿಥಿಗೃಹದ ಭೂಮಿಯನ್ನು ರದ್ದುಗೊಳಿಸುವ ನಿರ್ಣಯವನ್ನು ಅಂಗೀಕರಿಸಿತು. ಅತಿಥಿ ಗೃಹವನ್ನು ನವೀಕರಿಸಲು ಮತ್ತು ಪುನರ್ನಿರ್ಮಿಸಲು ಟಿಟಿಡಿ 5 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ದೇಣಿಗೆಯನ್ನು ಬಯಸುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+