Tirupati laddu: ತಿರುಪತಿ ಲಡ್ಡು ವಿತರಣೆಯಲ್ಲಿ ಹೊಸ ಬದಲಾವಣೆ: ಕೌಂಟರ್‌ಗಳಲ್ಲೇ QR ಕೋಡ್ ಮೂಲಕ UPI ಪಾವತಿ
Tirupati laddu: ತಿರುಪತಿಯ ಭಕ್ತಾದಿಗಳಿಗೆ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್‌ನಿಂದ ಭರ್ಜರಿ ಗುಡ್‌ನ್ಯೂಸ್ ನೀಡಲಾಗಿದೆ. ಪ್ರಸಿದ್ಧ ತಿರುಮಲ ಲಡ್ಡು ಪ್ರಸಾದ ವಿತರಣೆಯಲ್ಲಿ ವಿನೂನ ಹೊಸ ವಿಧಾನವನ್ನು ಅಳವಡಿಸಿಕೊಳ್ಳುವುದಕ್ಕೆ ಟ್ರಸ್ಟ್ ಮುಂದಾಗಿದೆ. ಇದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ವಿಶ್ವ ಪ್ರಸಿದ್ಧ ತಿರುಪತಿಯ ದೇವಸ್ಥಾನದಲ್ಲಿ ನೀಡುವ ಲಡ್ಡುಗೆ ಭಾರೀ ಬೇಡಿಕೆ ಇದೆ. ಇದೀಗ ಲಡ್ಡು ವಿತರಣೆ ಪ್ರಕ್ರಿಯೆಯನ್ನು ಇನ್ನಷ್ಟು ತ್ವರಿತ ಹಾಗೂ ಹೆಚ್ಚು ಅನುಕೂಲಕರವಾಗಿಸುವ ಉದ್ದೇಶದಿಂದ ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಲಡ್ಡು ಕೌಂಟರ್‌ಗಳಲ್ಲಿ ನೇರ ಯುಪಿಐ ಆಧಾರಿತ ಪಾವತಿಗಳನ್ನು ಪರಿಚಯಿಸುವುದಕ್ಕೆ ಮುಂದಾಗಿದೆ.

ಇದರಿಂದ ಭಕ್ತಾದಿಗಳು ಸರತಿ ಸಾಲಿನಲ್ಲಿ ಹೆಚ್ಚು ಸಮಯ ನಿಲ್ಲುವುದು ತಪ್ಪಲಿದೆ. ಭಕ್ತರು ದರ್ಶನ ಮುಗಿಸಿಕೊಂಡು ಲಡ್ಡು ಖರೀದಿ ಮಾಡುವುದಕ್ಕೆ ಬರುತ್ತಾರೆ. ಆದರೆ ಲಡ್ಡು ವಿತರಣೆ ಕೌಂಟರ್‌ಗಳಲ್ಲೂ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಯುಪಿಐ ಪಾವತಿಗಳನ್ನು ಅಳವಡಿಸಿಕೊಳ್ಳುವುದಕ್ಕೆ ಟಿಟಿಡಿ ಮುಂದಾಗಿದೆ. ಇದರಿಂದ ಭಕ್ತರು ಸರತಿ ಸಾಲಿನಲ್ಲಿ ಹೆಚ್ಚು ಸಮಯ ಕಾಯುವುದು ಗಮನಾರ್ಹವಾಗಿ ಕಡಿಮೆ ಆಗಲಿದೆ ಎನ್ನುವುದು ಇದರ ಮುಖ್ಯ ಉದ್ದೇಶವಾಗಿದೆ.
ಪ್ರಸ್ತುತ ತಿರುಪತಿಯಲ್ಲಿ ಭಕ್ತಾದಿಗಳು ತಿರುಪತಿ ತಿಮ್ಮಪ್ಪನ ದರ್ಶನ ಪೂರ್ಣಗೊಳಿಸಿದ ಮೇಲೆ ಲಡ್ಡು ಪ್ರಸಾದವನ್ನು ಸ್ವೀಕರಿಸುತ್ತಿದ್ದಾರೆ. ಸಾವಿರಾರು ಭಕ್ತರು ಲಡ್ಡು ಪ್ರಸಾದವನ್ನು ಪಡೆಯಲು ಪ್ರತ್ಯೇಕ ಕೌಂಟರ್‌ಗಳಲ್ಲಿ ದೀರ್ಘ ಸಾಲುಗಳಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಈಗ ಇದೆ. ಭಾರೀ ಜನದಟ್ಟಣೆಯನ್ನು ನಿರ್ವಹಿಸಲು, ಟಿಟಿಡಿ ಈ ಹಿಂದೆ ಕಿಯೋಸ್ಕ್ ಯಂತ್ರಗಳನ್ನು ಪರಿಚಯಿಸಿತ್ತು. ಈ ಕಿಯೋಸ್ಕ್‌ಗಳಲ್ಲಿ ಭಕ್ತರು ಯುಪಿಐ ಮೂಲಕ ಡಿಜಿಟಲ್ ಪಾವತಿಗಳನ್ನು ಮಾಡಬಹುದು ಮತ್ತು ಸ್ಲಿಪ್‌ಗಳನ್ನು ಪಡೆಯಬಹುದು, ನಂತರ ಅವುಗಳನ್ನು ಕೌಂಟರ್‌ಗಳಲ್ಲಿ ಲಡ್ಡುಗಳಿಗೆ ಬದಲಾಯಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಲಡ್ಡು ಪ್ರಸಾದ ವಿತರಣೆ ಹಾಗೂ ಜನದಟ್ಟಣೆಯನ್ನು ಕಡಿಮೆ ಮಾಡುವ ವಿಚಾರದಲ್ಲಿ ಕಿಯೋಸ್ಕ್‌ಗಳಿಂದ ಸ್ವಲ್ಪ ಮಟ್ಟಿಗೆ ಸಹಾಯವಾಗಿದ್ದರೂ ಸಹ ಹೊಸ ಸವಾಲುಗಳಿಗೂ ಎದುರಾಗಿವೆ. ಯಂತ್ರಗಳ ಸುತ್ತಲೂ ಜನಸಂದಣಿ ಹೆಚ್ಚಾಗಿ ಸೇರುತ್ತದೆ ಮತ್ತು ಅಲ್ಲದೇ ಕೆಲವೊಮ್ಮೆ ತಾಂತ್ರಿಕ ದೋಷಗಳು ವಿಳಂಬಕ್ಕೆ ಕಾರಣವಾಗುತ್ತಿದೆ. ಭಕ್ತರು ಎರಡು ಪ್ರತ್ಯೇಕ ಸರತಿ ಸಾಲುಗಳಲ್ಲಿ ನಿಲ್ಲಬೇಕಾಗುತ್ತಿದೆ. ಮೊದಲು ಪಾವತಿಗಾಗಿ ಕಿಯೋಸ್ಕ್‌ನಲ್ಲಿ ಮತ್ತು ನಂತರ ಮತ್ತೆ ಲಡ್ಡು ಕೌಂಟರ್‌ನಲ್ಲಿ ಇದು ಮೊದಲಿದ್ದ ವ್ಯವಸ್ಥೆಗಿಂತಲೂ ಸವಾಲಾಗಿ ಪರಿಣಮಿಸಿದೆ. ಹೀಗಾಗಿ, ಯುಪಿಐ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದಕ್ಕೆ ಟಿಟಿಡಿ ಮುಂದಾಗಿದೆ.
ಈ ಸಮಸ್ಯೆಗಳನ್ನು ಪರಿಹರಿಸಲು ಟಿಟಿಡಿ ಈಗ ಹೆಚ್ಚು ಸುವ್ಯವಸ್ಥಿತ ವಿಧಾನ ಅಳವಡಿಸಿಕೊಳ್ಳುವುದಕ್ಕೆ ಮುಂದಾಗುತ್ತಿದೆ. ಹೊಸ ಪ್ರಸ್ತಾವನೆಯಡಿಯಲ್ಲಿ ಪ್ರತಿ ಲಡ್ಡು ಕೌಂಟರ್‌ನಲ್ಲಿ ನೇರವಾಗಿ QR ಕೋಡ್ ಬೋರ್ಡ್‌ಗಳನ್ನು ಇರಿಸಲಾಗುತ್ತದೆ. ಭಕ್ತರು ಕೌಂಟರ್ ಅನ್ನು ಸಂಪರ್ಕಿಸಬಹುದು, ಪ್ರದರ್ಶಿಸಲಾದ QR ಕೋಡ್ ಅನ್ನು ತಮ್ಮ ಮೊಬೈಲ್ ಫೋನ್‌ಗಳೊಂದಿಗೆ ಸ್ಕ್ಯಾನ್ ಮಾಡಬಹುದು. ಮುಂದುವರಿದು UPI ಅಪ್ಲಿಕೇಶನ್‌ಗಳ ಮೂಲಕ ತಕ್ಷಣವೇ ಪಾವತಿಯನ್ನು ಪೂರ್ಣಗೊಳಿಸಬಹುದು. ಹಣ ಪಾವತಿ ದೃಢಪಟ್ಟ ನಂತರ, ಲಡ್ಡುಗಳನ್ನು ತಕ್ಷಣವೇ ಭಕ್ತರಿಗೆ ನೀಡಲಾಗುತ್ತದೆ ಎಂದು ಟಿಟಿಡಿಯ ಅಧಿಕಾರಿಗಳು ತಿಳಿಸಿದ್ದಾರೆ.
Tirupati laddu: ಲಡ್ಡು ವಿತರಣೆಗೆ ಡಿಜಿಟಲ್ ಪಾವತಿ
ಇನ್ನು ತಿರುಪತಿಯಲ್ಲಿ ಲಡ್ಡು ಪ್ರಸಾದ ವಿತರಣೆಗೆ ಯುಪಿಐ ಪಾವತಿ ಅಳವಡಿಸಿಕೊಳ್ಳುವುದಕ್ಕೆ ಟಿಟಿಡಿ ಮುಂದಾಗಿದ್ದು, ಇದಕ್ಕೆ ಹಲವು ಬ್ಯಾಂಕ್‌ಗಳು ಸಹಕಾರ ಕೊಡುವುದಕ್ಕೆ ಮುಂದಾಗಿವೆ. ಇದಕ್ಕೆ ಅಗತ್ಯವಿರುವ ಡಿಜಿಟಲ್ ಪಾವತಿ ಮೂಲಸೌಕರ್ಯವನ್ನು ಒದಗಿಸಲು ಪ್ರಮುಖ ಬ್ಯಾಂಕ್ ಈಗಾಗಲೇ TTD ಯೊಂದಿಗೆ ಮಾತುಕತೆಗೆ ಮುಂದಾಗಿವೆ ಎಂದು ಹೇಳಲಾಗಿದೆ. ಟಿಟಿಡಿ ಮೊದಲು ಕೆಲವು ಆಯ್ದ ಕೌಂಟರ್‌ಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ವ್ಯವಸ್ಥೆಯನ್ನು ಜಾರಿಗೆ ತರಲು ಯೋಜಿಸುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications