Get Updates
Get notified of breaking news, exclusive insights, and must-see stories!

Tirumala: ತಿರುಮಲದಲ್ಲಿ ಚಿನ್ನದ ಹಲ್ಲಿ.. ಏನಿದರ ವಿಶೇಷತೆ?

ತಿರುಪತಿ ಶೇಷಾಚಲಂ ಅನೇಕ ಜೈವಿಕ ವೈವಿಧ್ಯಗಳಿಗೆ ನೆಲೆಯಾಗಿದೆ. ಕಲಿಯುಗದ ಜೀವಂತ ದೇವರು ಶ್ರೀವೆಂಕಟೇಶ್ವರ ದೇವಾಲಯದ ಸುತ್ತಲೂ ಸುಂದರವಾದ ಶೇಷಾಚಲಂ ಅರಣ್ಯ ಪ್ರದೇಶವಿದೆ. ಈ ಪ್ರದೇಶದಲ್ಲಿ ಹಲವು ಅಪರೂಪದ ಪಕ್ಷಿಗಳು, ಸಸ್ಯಗಳು, ಪ್ರಾಣಿಗಳು ವಿಹರಿಸುತ್ತವೆ. ಇತ್ತೀಚೆಗೆ ತಿರುಪತಿ ಶೇಷಾಚಲಂ ಅರಣ್ಯದಲ್ಲಿ ಅಪರೂಪದ ಜಾತಿಯ ಚಿನ್ನದ ಹಲ್ಲಿ ಕಾಣಿಸಿಕೊಂಡಿದೆ.

ವನ್ಯಜೀವಿ ಛಾಯಾಗ್ರಾಹಕರು ಈ ಅಪರೂಪದ ಹಲ್ಲಿ ಫೋಟೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅರಣ್ಯ ಇಲಾಖೆಯ ಪ್ರಕಾರ ಈ ಚಿನ್ನದ ಹಲ್ಲಿ ಹೆಚ್ಚಾಗಿ ಕತ್ತಲ ಸ್ಥಳಗಳು ಮತ್ತು ಬಂಡೆಗಳಲ್ಲಿ ವಾಸಿಸುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ಹಲ್ಲಿ ಚಿನ್ನದ ಬಣ್ಣದಲ್ಲಿ ಹೊಳೆಯುತ್ತದೆ.

Tirumala Golden lizard found in Tirupati what s special

ಹೌದು.. ಚಿನ್ನದ ಬಣ್ಣದ ಹಲ್ಲಿಗಳು ಹಿಂದಿನಿಂದಲೂ ಇವೆ. ಆದರೆ ಇತ್ತೀಚೆಗೆ ಅವುಗಳು ಮಾಯವಾಗಿದ್ದವು. ಈ ಹಿಂದೆ ಈ ಚಿನ್ನದ ಹಲ್ಲಿಗಳು ಕಲ್ಯಾಣಿ ಅಣೆಕಟ್ಟು ಪ್ರದೇಶದಲ್ಲಿ ಕಾಣಿಸಿಕೊಂಡಿದ್ದವು. ಆದರೀಗ ಇದು ತಿರುಪತಿಯ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದೆ.

ತಿರುಮಲ ಶ್ರೀವಾರಿಯ ಇಳಿಜಾರಿನಲ್ಲಿರುವ ಶೇಷಾಚಲಂ ಅರಣ್ಯ ಅನೇಕ ಜೀವಿಗಳನ್ನು ಹೊಂದಿದೆ. ಇಲ್ಲಿ ಅನೇಕ ಅಪರೂಪದ ಪ್ರಾಣಿ ಪಕ್ಷಿಗಳು ಕಾಣಸಿಗುತ್ತವೆ. ಈಗ ಈ ಹಲ್ಲಿ ಅರಣ್ಯದಲ್ಲಿ ಕಾಣಿಸಿಕೊಂಡಿದ್ದು ಅಚ್ಚರಿ ಮೂಡಿಸಿದೆ. ತಿರುಮಲ ಶ್ರೀವಾರಿ ದೇವಸ್ಥಾನದಿಂದ 6 ಕಿಮೀ ದೂರದಲ್ಲಿರುವ ಶಿಲಾ ತೋರಣಂ ಬಳಿಯ ಚಕ್ರ ತೀರ್ಥದಲ್ಲಿ ಈ ಚಿನ್ನದ ಹಲ್ಲಿ ನೆಲೆಸಿದೆ ಎಂದು ಹೇಳಲಾಗಿದೆ.

Tirumala Golden lizard found in Tirupati what s special

ಹೀಗಾಗಿ ತಿರುಪತಿ ವೆಂಕಟೇಶ್ವರ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಂ.ರಾಜಶೇಖರ್ ಕೂಡ ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಈ ಚಿನ್ನದ ಹಲ್ಲಿಯನ್ನು ಗೋಲ್ಡನ್ ಲಿಝರ್ಡ್ ಎಂದು ಕರೆಯಲಾಗುತ್ತದೆ. ಈ ಹಲ್ಲಿಯ ವೈಜ್ಞಾನಿಕ ಹೆಸರು Colodacty Lodes Aureus.

ಈ ಹಲ್ಲಿ ಹೆಚ್ಚಾಗಿ ರಾತ್ರಿಯಲ್ಲಿ ಹೆಚ್ಚಾಗಿ ಓಡಾಡುತ್ತದೆ. ಸಾಮಾನ್ಯವಾಗಿ ಈ ಹಲ್ಲಿ ಚಿನ್ನದ ಬಣ್ಣ, ಕಡು ಹಳದಿ ಮತ್ತು ತಿಳಿ ಹಳದಿ ಬಣ್ಣದಲ್ಲಿರುತ್ತದೆ. ಈ ಹಲ್ಲಿಗಳು 150 ಎಂಎಂ ನಿಂದ 180 ಎಂಎಂ ಉದ್ದವಿರುತ್ತವೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ಹಲ್ಲಿಗಳು ಸೂರ್ಯನ ಬೆಳಕು ಅಥವಾ ಶಾಖವಿಲ್ಲದ ಸ್ಥಳಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ.

ಸಣ್ಣ ಸಂದಿಗಳು ಹೊಂದಿರುವ ಕಲ್ಲುಗಳು ಅವುಗಳ ವಾಸಸ್ಥಾನಗಳೆಂದು ಹೇಳಲಾಗುತ್ತದೆ. ಈ ಹಲ್ಲಿಗಳು ಸಾಮಾನ್ಯವಾಗಿ ಕತ್ತಲೆಯ ನಂತರ ಕಲ್ಲಿನ ಶಾಖವುಳ್ಳ ಪ್ರದೇಶದ ಸ್ಥಳಗಳನ್ನು ಇಷ್ಟಪಡುತ್ತವೆ ಎಂದು ಹೇಳಲಾಗುತ್ತದೆ.

ಅಪರೂಪದ ಕಪ್ಪೆ

ಇತ್ತೀಚೆಗೆ ಶೇಷಾಚಲಂ ಅರಣ್ಯದಲ್ಲಿ ಅಪರೂಪದ ಕಪ್ಪೆ ಕೂಡ ಕಾಣಿಸಿಕೊಂಡಿತ್ತು. ಶ್ರೀಲಂಕಾದಲ್ಲಿ ಕಂಡುಬರುವ ಅಪರೂಪದ ಜಾತಿಯ ಶ್ರೀಲಂಕಾದ ಸೂಡೊ ಫಿಲೆಟಸ್ ರೆಜಿಯಸ್ ಕಪ್ಪೆ ಪತ್ತೆಯಾಗಿತ್ತು. ಈ ಕಪ್ಪೆಯನ್ನು ಕಂದು ಇಯರ್ಡ್ ಬುಷ್ ಕಪ್ಪೆ ಎಂದು ಕರೆಯಲಾಗುತ್ತದೆ.

ಶ್ರೀಲಂಕಾ ದ್ವೀಪದ ನೀರಿನ ಪ್ರದೇಶಗಳಲ್ಲಿ ಈ ಕಪ್ಪೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಎರಡು ತಿಂಗಳ ಹಿಂದೆ ಶೇಷಾಚಲಂ ಅರಣ್ಯದ ತಲಕೋನಾ ಜಲಪಾತ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೆ ಈ ಚಿನ್ನದ ಹಲ್ಲಿ ಶೇಷಾಚಲಂ ಅರಣ್ಯದಲ್ಲಿ ಕಾಣಿಸಿಕೊಂಡಿದೆ.

ಶೇಷಾಚಲಂ ಅರಣ್ಯ ಪ್ರದೇಶವು ತಿರುಪತಿ, ತಿರುಮಲ ಮತ್ತು ಚಿತ್ತೂರು ಜಿಲ್ಲೆಯ ಕಡಪಾ ಜಿಲ್ಲೆ (ಭಾಗ) ಯಲ್ಲಿ ಹರಡಿದೆ. ಇತ್ತೀಚೆಗೆ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಅಪರೂಪದ ಪ್ರಾಣಿ ಪಕ್ಷಗಳು ಕಾಣಿಸುವುದು ಹೆಚ್ಚಾಗಿ ಕಂಡು ಬರುತ್ತಿದ್ದು ಅಚ್ಚರಿ ಮೂಡಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+