ಟೈಮ್ಸ್ ನೌ ಸಮೀಕ್ಷೆ : ಮಧ್ಯಪ್ರದೇಶದಲ್ಲಿ ಶಿವರಾಜ ಮತ್ತೆ ಮಹಾರಾಜ
ಭೋಪಾಲ್, ಅಕ್ಟೋಬರ್ 08: ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಗಢದಲ್ಲಿ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಟೈಮ್ಸ್ ನೌ ಸಂಸ್ಥೆಯು ಹಿಂದಿ ಭಾಷಿಕ ರಾಜ್ಯಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ.
ಲೋಕಸಭೆ ಚುನಾವಣೆ 2018ಗೆ ಈ ಮೂರು ರಾಜ್ಯಗಳ ಚುನಾವಣೆಯನ್ನು ಸೆಮಿಫೈನಲ್ ಎಂದೇ ಕರೆಯಲಾಗುತ್ತಿದೆ. ಮುಖ್ಯವಾಗಿ ಬಿಜೆಪಿ ನೇತೃತ್ವದ ಎನ್ಡಿಎಗೆ ಇದು ದಿಕ್ಸೂಚಿಯಾಗಲಿದೆ. ಟೈಮ್ಸ್ ನೌ ಈ ಸಮೀಕ್ಷೆಯ ಮೂಲಕ, ಒಟ್ಟಾರೆ, 65 ಲೋಕಸಭಾ ಕ್ಷೇತ್ರ ಹಾಗೂ 520 ವಿಧಾನಸಭಾ ಕ್ಷೇತ್ರಗಳ ಪ್ರೊಜೆಕ್ಷನ್ ನೀಡಲಿದೆ.
ಸತತ ಮೂರನೇ ಬಾರಿಗೆ ಮಧ್ಯ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಇನ್ನೊಂದು ಅವಕಾಶ ಸಿಗಲಿದೆ. 2018ರ ಅಂತ್ಯಕ್ಕೆ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆಗೆ ಇನ್ನು 6 ತಿಂಗಳು ಬಾಕಿ ಇದೆ.
ದೇಶದ ನಾಲ್ಕು ಮೂಲೆಗಳಿಂದ ಸಂಗ್ರಹಿಸಿದ ಸಮೀಕ್ಷೆಗಳ ಸರಾಸರಿಯಂತೆ ಎನ್ಡಿಎ ಅಥವಾ ಯುಪಿಎ ಪೈಕಿ ಯಾವ ಮೈತ್ರಿಕೂಟಕ್ಕೆ ಸರಳ ಬಹುಮತ ಲಭಿಸಲಿದೆ.

ವಿಧಾನಸಭೆ ಚುನಾವಣೆ 230 ಸ್ಥಾನ
ಕದನ ಕೊಠಡಿಯ ರಣತಂತ್ರದ ಬಗ್ಗೆ ಸಮೀಕ್ಷೆ
ಮಧ್ಯಪ್ರದೇಶದಲ್ಲಿ 230 ಸ್ಥಾನದ ಫಲಿತಾಂಶ
* ಬಿಜೆಪಿ 142 ಸ್ಥಾನ ಪಡೆಯಲಿದೆ(2013ಕ್ಕಿಂತ 23 ಸ್ಥಾನ ಕಡಿಮೆ)
* ಕಾಂಗ್ರೆಸ್ಸಿಗೆ 77 ಸ್ಥಾನ ಲಭಿಸಿದೆ. (2013ಕ್ಕಿಂತ 20ಸ್ಥಾನ ಅಧಿಕ)
* ಇತರೆ ಪಕ್ಷಗಳಿಗೆ 11 ಸ್ಥಾನಗಳು(2013ದಲ್ಲಿ 8 ಸ್ಥಾನ ಲಭಿಸಿತ್ತು)

ಶೇಕಡಾವಾರು ಮತ ಗಳಿಕೆ
* ಬಿಜೆಪಿಗೆ 2018ರಲ್ಲಿ ಶೇ44ರಷ್ಟು ಮತಗಳಿಕೆ,(2013ರಲ್ಲಿ ಶೇ44.87ರಷ್ಟು ಬಂದಿತ್ತು)
* ಕಾಂಗ್ರೆಸ್ಸಿಗೆ ಶೇ 35ರಷ್ಟು ಮತ ಗಳಿಕೆ(2013ರಲ್ಲಿ ಶೇ 36.37ರಷ್ಟು ಬಂದಿತ್ತು)
* ಇತರೆ ಪಕ್ಷಗಳಿಗೆ 2018ರಲ್ಲಿ ಶೇ 21ರಷ್ಟು ಮತಗಳಿಕೆಯಾಗುವ ಸಾಧ್ಯತೆಯಿದೆ. 2013ರಲ್ಲಿ ಶೇ 18.76ರಷ್ಟು ಸಿಕ್ಕಿತ್ತು.
ಆಗಸ್ಟ್ 16 ರಿಂದ ಸೆಪ್ಟೆಂಬರ್ 30,2018 ರ ಅವಧಿಯಲ್ಲಿ 14,569ಕ್ಕೂ ಅಧಿಕ ಮಂದಿ ನೀಡಿದ ಅಭಿಪ್ರಾಯವನ್ನು ಸಂಗ್ರಹಿಸಿ ನೀಡಿದ ಸಮೀಕ್ಷೆ ಇದಾಗಿದೆ.

ಯಾರಾಗಬಹುದು ಮುಂದಿನ ಮುಖ್ಯಮಂತ್ರಿ
ಸತತ ಮೂರನೇ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿಯಲು ಮುಂದಾಗಿರುವ ಬಿಜೆಪಿಗೆ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಜನಪ್ರಿಯತೆ ಆಧಾರವಾಗಿದೆ. ಆದರೆ, 15 ವರ್ಷಗಳ ಕಾಲ ಆಡಳಿತ ವಿರೋಧಿ ಅಲೆ ಇದೆ ಎಂದು ಕಾಂಗ್ರೆಸ್ ನಂಬಿದೆ.
* ಶೇ 61: ಶಿವರಾಜ್ ಸಿಂಗ್ ಚೌಹಾಣ್ (ಬಿಜೆಪಿ)
* ಶೇ 17 : ಜ್ಯೋತಿರಾದಿತ್ಯಾ ಸಿಂಧ್ಯಾ(ಕಾಂಗ್ರೆಸ್)
* ಶೇ 5 : ದಿಗ್ವಿಜಯ್ ಸಿಂಗ್ (ಕಾಂಗ್ರೆಸ್)
* ಶೇ 6 : ಕಮಲ್ ನಾಥ್ (ಕಾಂಗ್ರೆಸ್)
* ಇತರೆ : ಶೇ 11

ಸಮೀಕ್ಷೆಗಳ ಸಮೀಕ್ಷೆ
ಬಿಜೆಪಿ
ಕದನ ಕೊಠಡಿ ರಣತಂತ್ರ : 142
ಎಬಿಪಿ ಸಿ ವೋಟರ್ : 108
ಸಮೀಕ್ಷೆಗಳ ಸಮೀಕ್ಷೆ : 125
ಕಾಂಗ್ರೆಸ್
ಕದನ ಕೊಠಡಿ ರಣತಂತ್ರ :77
ಎಬಿಪಿ ಸಿ ವೋಟರ್ : 122
ಸಮೀಕ್ಷೆಗಳ ಸಮೀಕ್ಷೆ : 100
ಇತರೆ
ಕದನ ಕೊಠಡಿ ರಣತಂತ್ರ : 11
ಎಬಿಪಿ ಸಿ ವೋಟರ್ : 0
ಸಮೀಕ್ಷೆಗಳ ಸಮೀಕ್ಷೆ : 5












Click it and Unblock the Notifications