• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಲಭೂಷಣ್ ಜಾಧವ್ ಪ್ರಕರಣ: ಯಾವಾಗ ಏನೇನಾಯ್ತು? Timeline

|

ಬೆಂಗಳೂರು, ಜುಲೈ 17: ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಕುಲಭೂಷಣ್ ಜಾಧವ್ ಅವರು ಭಾರತದ 'ರಾ' ಏಜೆಂಟ್ ಆಗಿದ್ದು, ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸಲು ಮತ್ತು ಭಯೋತ್ಪಾದನಾ ಕೃತ್ಯ ಎಸಗಲು ಬಂದಿದ್ದರು ಎಂದು ಪಾಕ್ ಆರೋಪಿಸಿತ್ತು.

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಐಸಿಜೆಯ ತೀರ್ಪು ಪಾಲನೆ ಆಗಬಹುದೇ?

ಈ ಆರೋಪವನ್ನು ಭಾರತ ಅಲ್ಲಗಳೆದಿತ್ತು. ಅವರು ನೌಕಾಪಡೆಯಿಂದ ನಿವೃತ್ತರಾದ ಬಳಿಕ ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಕಾರ್ಯನಿಮಿತ್ತ ಇರಾನ್‌ಗೆ ತೆರಳಿದ್ದಾಗ ಅವರನ್ನು ಅಲ್ಲಿಂದ ಅಪಹರಿಸಲಾಗಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರನ್ನು ತಪ್ಪಿತಸ್ಥ ಎಂದು ಸಾಬೀತುಮಾಡಲು ಪಾಕ್ ಪ್ರಯತ್ನಿಸುತ್ತಿದೆ ಎಂದು ವಾದಿಸಿತ್ತು.

ಜಾಧವ್ ಅವರು ಸ್ವಯಂಪ್ರೇರಣೆಯಿಂದ ಪಾಕಿಸ್ತಾನಕ್ಕೆ ಬಂದಿರಲಿಲ್ಲ. ಅವರು ಇರಾನ್‌ನ ಸರವನ್ ಪ್ರದೇಶಕ್ಕೆ ಬಾಡಿಗೆ ಕಾರ್‌ನಲ್ಲಿ ಬಂದಿದ್ದರು. ಆಗ ಅವರನ್ನು ಹಿಡಿದು ಐಎಸ್‌ಐಗೆ ಒಪ್ಪಿಸಲಾಗಿತ್ತು ಎಂಬುದಾಗಿ ಬಲೂಚಿಸ್ತಾನ ಪ್ರತ್ಯೇಕತಾ ಸಂಘಟನೆಯ ಕಾರ್ಯಕರ್ತ ಮೆಹರಮ್ ಸರ್ಜೋವ್ ಹೇಳಿದ್ದರು.

ಜಾಧವ್ ಅವರ ಬಂಧನದ ಮೂರು ವರ್ಷಗಳಲ್ಲಿ ಏನೆಲ್ಲ ಬೆಳವಣಿಗೆಗಳು ನಡೆದವು ಎಂಬುದರ ಮಾಹಿತಿ ಇಲ್ಲಿದೆ.

2016ರ ಮಾರ್ಚ್ 3: ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿದ್ದಾಗಿ ಹೇಳಿದ ಪಾಕಿಸ್ತಾನದ ಅಧಿಕಾರಿಗಳು.

ಜಾಧವ್ ಗಲ್ಲುಶಿಕ್ಷೆ: ಐಸಿಜೆಯಲ್ಲಿ ಪಾಕ್ ವಿರುದ್ಧ ಭಾರತದ ತೀಕ್ಷ್ಣ ವಾದ

2016ರ ಮಾರ್ಚ್ 25: ಕುಲಭೂಷಣ್ ಬಂಧನದ ಬಗ್ಗೆ ಭಾರತಕ್ಕೆ ಮಾಹಿತಿ ನೀಡಿದ ಪಾಕ್. ಜಾಧವ್ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದಾಗಿ ಪ್ರತಿಪಾದನೆ. ಜಾಧವ್ ಅವರ ರಾಜತಾಂತ್ರಿಕ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದ ಭಾರತ.

2018ರ ಏಪ್ರಿಲ್ 8: ಖ್ವೆಟ್ಟಾದ ಭಯೋತ್ಪಾದನಾ ವಿರೋಧಿ ಇಲಾಖೆಯಲ್ಲಿ ಜಾಧವ್ ವಿರುದ್ಧ ಎಫ್‌ಐಆರ್ ದಾಖಲಿಸಿದ ಪಾಕಿಸ್ತಾನ.

2017ರ ಏಪ್ರಿಲ್ 10: ಜಾಧವ್ ಅವರ ವಿರುದ್ಧ ಬೇಹುಗಾರಿಕೆ, ದುಷ್ಕೃತ್ಯ ಮತ್ತು ಭಯೋತ್ಪಾದನೆ ಆರೋಪದಲ್ಲಿ ಗಲ್ಲು ಶಿಕ್ಷೆ ವಿಧಿಸಿದ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ.

2017ರ ಏಪ್ರಿಲ್ 15: ಜಾಧವ್ ಗಲ್ಲುಶಿಕ್ಷೆ ವಿರುದ್ಧ ನ್ಯಾಯಾಲಯದಲ್ಲಿ ಮನವಿ ಸಲ್ಲಿಸದಂತೆ ವಕೀಲರಿಗೆ ಎಚ್ಚರಿಕೆ ನೀಡಿದ ಪಾಕಿಸ್ತಾನದ ಬಾರ್ ಕೌನ್ಸಿಲ್.

2017ರ ಮೇ 8: ಪಾಕಿಸ್ತಾನವು 1963ರ ವಿಯೆನ್ನಾ ಒಪ್ಪಂದ ಮತ್ತು ಅಂತಾರಾಷ್ಟ್ರೀಯ ನಾಗರಿಕ ಒಪ್ಪಂದ ಹಾಗೂ ರಾಜಕೀಯ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಭಾರತದಿಂದ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ.

2017ರ ಮೇ 15: ತಾತ್ಕಾಲಿಕ ತುರ್ತು ಕ್ರಮಕ್ಕೆ ಆಗ್ರಹಿಸಿ ಭಾರತದ ಮನವಿಯನ್ನು ಆಲಿಸಿದ ಐಸಿಜೆ.

2017ರ ಮೇ 18: ಈ ಪ್ರಕರಣದ ತೀರ್ಪು ನೀಡುವವರೆಗೂ ಜಾಧವ್ ಅವರನ್ನು ಗಲ್ಲುಶಿಕ್ಷೆಗೆ ಗುರಿಪಡಿಸಬಾರದು ಎಂದು ಪಾಕಿಸ್ತಾನಕ್ಕೆ ಸೂಚಿಸಿದ ನ್ಯಾಯಾಲಯ.

2017ರ ಜೂನ್ 22: ನಿಷೇಧಿತ ಬಲೂಚಿಸ್ತಾನ ಮುಕ್ತಿ ಸೇನೆ ಮತ್ತು ಬಲೂಚ್ ರಿಪಬ್ಲಿಕನ್ ಆರ್ಮಿ ಜತೆ ಸೇರಿಕೊಂಡು ಬಲೂಚಿಸ್ತಾನದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದಾಗಿ ಜಾಧವ್ ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೆ ಬಿಡುಗಡೆ ಮಾಡಿದ ಪಾಕಿಸ್ತಾನ.

2017ರ ಸೆಪ್ಟೆಂಬರ್ 13: ಪಾಕಿಸ್ತಾನದ ತೀರ್ಪಿನ ವಿರುದ್ಧ ಭಾರತದಿಂದ ಲಿಖಿತ ಅರ್ಜಿ ಸಲ್ಲಿಕೆ (ಮೊದಲ ಸುತ್ತು).

2017ರ ಡಿಸೆಂಬರ್ 13: ಪಾಕಿಸ್ತಾನದಿಂದ ಪ್ರತಿ ಲಿಖಿತ ಅರ್ಜಿ ಸಲ್ಲಿಕೆ (ಮೊದಲ ಸುತ್ತು).

2018ರ ಏಪ್ರಿಲ್ 17: ಭಾರತದಿಂದ ನ್ಯಾಯಾಲಯಕ್ಕೆ ಎರಡನೆಯ ಸುತ್ತಿನ ಲಿಖಿತ ಮನವಿ ಸಲ್ಲಿಕೆ.

2018ರ ಜುಲೈ 17: ಪಾಕಿಸ್ತಾನದಿಂದ ನ್ಯಾಯಾಲಯಕ್ಕೆ ಎರಡನೆಯ ಸುತ್ತಿನ ಪ್ರತಿ ಲಿಖಿತ ಮನವಿ ಸಲ್ಲಿಕೆ.

2017ರ ಡಿಸೆಂಬರ್ 25: ಜಾಧವ್ ಅವರನ್ನು ಭೇಟಿ ಮಾಡಲು ಅವರ ತಾಯಿ ಮತ್ತು ಪತ್ನಿಗೆ ಅವಕಾಶ ನೀಡಿದ ಪಾಕಿಸ್ತಾನ.

2019ರ ಫೆಬ್ರವರಿ 18 ರಿಂದ 21: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಸತತ ನಾಲ್ಕು ದಿನ ಎರಡೂ ದೇಶಗಳ ವಕೀಲರಿಂದ ವಾದ ಮತ್ತು ಪ್ರತಿವಾದ ಮಂಡನೆ.

2019ರ ಜುಲೈ 4: ಜಾಧವ್ ಪ್ರಕರಣದ ತೀರ್ಪನ್ನು ಜುಲೈ 17ರಂದು ಪ್ರಕಟಿಸುವುದಾಗಿ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ ಐಸಿಜೆ.

2019ರ ಜುಲೈ 17: ಕುಲಭೂಷಣ್ ಜಾಧವ್ ಪ್ರಕರಣದ ತೀರ್ಪು ಪ್ರಕಟ. ಜಾಧವ್‌ಗೆ ವಿಧಿಸಿರುವ ಗಲ್ಲುಶಿಕ್ಷೆ ತೀರ್ಪನ್ನು ಅಮಾನತು ಮಾಡಿದ ಅಂತಾರಾಷ್ಟ್ರೀಯ ನ್ಯಾಯಾಲಯ. ಜಾಧವ್ ಅವರನ್ನು ಭೇಟಿ ಮಾಡಲು ಭಾರತದ ರಾಜತಾಂತ್ರಿಕರಿಗೆ ಅವಕಾಶ ನೀಡಲು ಆದೇಶ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Read in English: Kulbhushan Jadhav case
English summary
International Court of Justice to pronounce its judgement on Kulbhushan Jadhav's case. Here is the timeline of this case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more