ಉತ್ತರ ಪ್ರದೇಶದಲ್ಲಿ ಭೀಕರ ಚಂಡಮಾರುತ: 10 ಜನ ಬಲಿ
ಲಕ್ನೋ, ಜೂನ್ 14: ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡ ಭೀಕರ ಚಂಡಮಾರುತಕ್ಕೆ 10 ಜನ ಬಲಿಯಾಗಿದ್ದಾರೆ. ಬುಧವಾರ ಚಂಡಮಾರುತದ ಸಮೇತ ಸುರಿದ ಮಳೆಯಿಂದಾಗಿ ಗೊಂಡಾ ಪ್ರದೇಶದಲ್ಲಿ ಮೂವರು, ಫಾಜಿಯಾಬಾದ್ ನಲ್ಲಿ ಓರ್ವ ವ್ಯಕ್ತಿ ಮತ್ತು ಸಿತಾಪುರದಲ್ಲಿ 6 ಜನ ಮೃತರಾಗಿದ್ದು, 20 ಜನ ಗಾಯಗೊಂಡಿದ್ದಾರೆ.
ಲಕ್ನೋದಲ್ಲಿರುವ ಹವಾಮಾನ ಇಲಾಖೆ ಮೊದಲೇ ಚಂಡಮಾರುತದ ಮುನ್ಸೂಚನೆ ನೀಡಿತ್ತಾದರೂ ಹಲವೆಡೆ ಅನಾಹುತವನ್ನು ತಪ್ಪಿಸುವುದಕ್ಕೆ ಸಾಧ್ಯವಾಗದೆ, ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ.
ಜೂನ್ 2 ರಂದು ಉತ್ತರ ಪ್ರದೇಶದ ವಿವಿಧೆಡೆ ಸಂಭವಿಸಿದ ಚಂಡಮಾರುತದಿಂದಾಗಿ 15 ಜನ ಮೃತರಾಗಿದ್ದರು. ಇಲ್ಲಿನ ಮೋರಾಬಾದ್, ಮುಜಾಫರ್ ನಗರ್, ಮೀರತ್, ಅಮ್ರೋಹಾ ಮತ್ತು ಸಂಭಾಲ್ ಜಿಲ್ಲೆಗಳಲ್ಲಿ ಚಂಡಮಾರುತ ಸಂಭವಿಸಿತ್ತು.

ಜೂನ್ 8 ರಂದು ಉತ್ತರ ಪ್ರದೇಶದಲ್ಲಿ ಸುರಿದ ಭಾರೀ ಗುಡುಗು, ಮಿಂಚು ಸಹಿತ ಜೋರು ಮಳೆಗೆ 11 ಜನ ಬಲಿಯಾಗಿದ್ದರು.












Click it and Unblock the Notifications