ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದ ಯುವಕರು ಅದೃಷ್ಟವಶಾತ್ ಪಾರಾದ್ರು
ಮಹಾರಾಷ್ಟ್ರ ಜೂನ್.12 : ಮೋಜು ಮಾಡಲು ಸಮುದ್ರ ತೀರಕ್ಕೆ ಹೋಗಿದ್ದ ಯುವಕರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಮಾಲ್ವಾನ್ ಬೀಚ್ ಬೀಚ್ ಬಳಿ ನಡೆದಿದೆ.
ಸಮುದ್ರದ ಅಲೆಗೆ ಸಿಕ್ಕಿದ ಮೂವರು ಯುವಕರು ಇನ್ನೇನು ಸಮುದ್ರ ಪಾಲಾಗಬೇಕು ಎನ್ನುವಷ್ಟರಲ್ಲಿ ಸ್ಥಳೀಯರು ಅವರನ್ನು ಪಾರು ಮಾಡಿದ್ದಾರೆ. ಕಳೆದ ಶನಿವಾರ ಈ ಘಟನೆ ನಡೆದಿದ್ದು, ಈ ಘಟನೆಯ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ಸ್ಥಳೀಯರ ಸೂಚನೆಯನ್ನೂ ಧಿಕ್ಕರಿಸಿ ಸಮುದ್ರದ ದಡದಲ್ಲಿನ ಬಂಡೆ ಮೇಲೆ ಕುಳಿತು ಯುವಕರು ಮೋಜಿನಲ್ಲಿ ತೊಡಗಿದ್ದರು. ಆಗ ಸಮುದ್ರದ ರಕ್ಕಸ ಅಲೆ ಯುವಕರ ಮೇಲೆ ಅಪ್ಪಳಿಸಿದೆ. ಅಲೆ ಅಪ್ಪಳಿಸಿದ ಹೊಡೆತಕ್ಕೆ ಯುವಕರು ಕೊಚ್ಚಿ ಹೋಗಿದ್ದರು.

ಅದೃಷ್ಟವಶಾತ್ ಇದನ್ನು ತಕ್ಷಣವೇ ಗಮನಿಸಿದ ಸ್ಥಳೀಯರು ಯುವಕರನ್ನು ರಕ್ಷಿಸಿದ್ದಾರೆ.












Click it and Unblock the Notifications