Get Updates
Get notified of breaking news, exclusive insights, and must-see stories!

ಕೋವಿಡ್ 19 ನಡುವೆ 3 ದಿನಗಳ ಕೈಲಾಸ ಯಾತ್ರೆಗೆ ಚಾಲನೆ

ಶ್ರೀನಗರ, ಸೆಪ್ಟೆಂಬರ್ 05: ಕೈಲಾಸ ಯಾತ್ರೆ ಸಾಮಾನ್ಯವಾಗಿ ಜೂನ್‌ನಿಂದ ಆರಂಭವಾಗುತ್ತದೆ. 21 ದಿನಗಳ ಯಾತ್ರೆ ಇದಾಗಿರುತ್ತದೆ. ದೆಹಲಿಯಿಂದ ಆರಂಭಗೊಳ್ಳುತ್ತದೆ. ಗಾಲಾವರೆಗೆ ವಾಹನಗಳಲ್ಲಿ ಸಂಚರಿಸಬಹುದಾಗಿದೆ. ಲಿಪುಲೇಕ್‌ವರೆಗೆ ಕಾಲ್ನಡಿಗೆಯಲ್ಲೇ ತೆರಳಬೇಕಿದೆ. ಆದರೆ, ಚೀನಾ ಜೊತೆ ಗಡಿ ವಿವಾದ, ಕೊವಿಡ್ 19 ಕಾರಣದಿಂದ ಕಳೆದೆರಡು ವರ್ಷಗಳಿಂದ ಯಾತ್ರೆಯ ಸ್ವರೂಪ, ಮಾರ್ಗಸೂಚಿ ಸಂಪೂರ್ಣ ಬದಲಾಗಿದೆ. ಭಕ್ತಾದಿಗಳ ಒತ್ತಡಕ್ಕೆ ಮಣಿದು ಶನಿವಾರದಿಂದ ಮೂರು ದಿನಗಳ ಕೈಲಾಸ ಯಾತ್ರೆಗೆ ಅನುಮತಿ ನೀಡಲಾಗಿದೆ.

"ಆರ್ಟಿಕಲ್ 370 ರದ್ದು ಪಡಿಸಿದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕಿಸಿದ್ದು, ಲಡಾಕ್ ಮೇಲೆ ಕೇಂದ್ರ ಸರ್ಕಾರ ನೇರ ಅಧಿಕಾರ ಹೊಂದಿದ್ದರ ಬಗ್ಗೆ ಚೀನಾ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ, ಕೈಲಾಸ ಮಾನಸ ಸರೋವರ ಯಾತ್ರಿಗಳಿಗೆ ವೀಸಾ ದೊರೆಯುವುದು ಕಷ್ಟ" ಎಂಬ ಸುದ್ದಿ ಬಂದಿತ್ತು. ಆದರೆ, ಚೀನಾ ಇದಕ್ಕೆ ವಿರುದ್ಧವಾಗಿ ನಡೆದುಕೊಂಡು ಹಿಂದೂಗಳ ಯಾತ್ರೆಗೆ ನೆರವಾಗಿ ಅಚ್ಚರಿ ಮೂಡಿಸಿತ್ತು. ಆದರೆ, ಈ ವೇಳೆಗೆ ಕೋವಿಡ್ 19 ಸಾಂಕ್ರಾಮಿಕ ಬಂದಿದ್ದರಿಂದ ಹಿಮಾಲಯದ ತಪ್ಪಲಿನ ಎಲ್ಲಾ ಯಾತ್ರಾ ಸ್ಥಳಗಳಿಗೆ ನಿರ್ಬಂಧ ಹೇರಲಾಗಿತ್ತು.

ಮಾನಸಸರೋವರ ಅಥವಾ ಮಾನಸರೋವರ ಟಿಬೆಟ್‌ನ ಲ್ಹಾಸಾ ದಿಂದ ಸುಮಾರು 2000 ಕಿ.ಮೀ. ದೂರದಲ್ಲಿ ಹಿಮಾಲಯದ ತಪ್ಪಲಿನಲ್ಲಿರುವ ಒಂದು ಸಿಹಿನೀರ ಸರೋವರ. ಮಾನಸಸರೋವರದ ಪಶ್ಚಿಮಕ್ಕೆ ರಾಕ್ಷಸತಾಲ್ ಎಂಬ ಇನ್ನೊಂದು ಸರಸ್ಸು ಮತ್ತು ಉತ್ತರಕ್ಕೆ ಕೈಲಾಸಪರ್ವತಗಳಿವೆ.

Three-day Kailash Yatra starts with limited number of devotees in J-Ks Bhaderwah

ಮಾನಸಸರೋವರವು ಸಮುದ್ರಮಟ್ಟದಿಂದ 4556 ಮೀ. ಎತ್ತರ(14,700 ಅಧಿ)ದಲ್ಲಿದೆ. ಇದು ಪ್ರಪಂಚದಲ್ಲಿ ಅತಿ ಎತ್ತರದಲ್ಲಿರುವ ಸಿಹಿನೀರಿನ ಸರಸ್ಸು. ಮಾನಸಸರೋವರದ ಆಕಾರ ಸರಿಸುಮಾರು ವರ್ತುಲ. ಚಳಿಗಾಲದಲ್ಲಿ ಮಾನಸಸರೋವರವು ಸಂಪೂರ್ಣವಾಗಿ ಹೆಪ್ಪುಗಟ್ಟುತ್ತದೆ. ಸಿಂಧೂ ನದಿ, ಸಟ್ಲೆಜ್ ನದಿ, ಕರ್ನಾಲಿ ನದಿ ಮತ್ತು ಯಾರ್ಲುಂಗ್ ತ್ಸಾಂಗ್ಪೋ ನದಿ (ಬ್ರಹ್ಮಪುತ್ರ ನದಿ)ಗಳೆಲ್ಲವೂ ಮಾನಸಸರೋವರದ ಆಸುಪಾಸಿನಲ್ಲಿ ಉಗಮಿಸುತ್ತವೆ. ಮಾನಸಸರೋವರ ಮತ್ತು ಕೈಲಾಸಪರ್ವತಗಳು ಧಾರ್ಮಿಕ ಮಹತ್ವ ಹೊಂದಿವೆ. ಭಾರತ, ಟಿಬೆಟ್ ಮತ್ತು ನೆರೆಹೊರೆಯ ದೇಶಗಳಿಂದ ಸಹಸ್ರಾರು ಜನರು ಈ ಎರಡೂ ಸ್ಥಳಗಳಿಗೆ ತೀರ್ಥಯಾತ್ರೆ ಕೈಗೊಳ್ಳುವರು.

ಮಾನಸಸರೋವರದಲ್ಲಿ ಸ್ನಾನ ಮತ್ತು ಸರಸ್ಸಿನ ಜಲವನ್ನು ಪಾನಮಾಡುವುದರಿಂದ ಎಲ್ಲಾ ಪಾಪಗಳಿಂದ ವಿಮೋಚನೆ ದೊರೆಯುವುದೆಂದು ಶ್ರದ್ಧಾಳುಗಳ ನಂಬಿಕೆ. ಭಾರತ ಸರಕಾರದ ನಿರ್ದೇಶನದಲ್ಲಿ ಪ್ರತಿವರ್ಷವೂ ಇಲ್ಲಿಗೆ ತೀರ್ಥಯಾತ್ರೆ ಆಯೋಜಿಸಲಾಗುತ್ತದೆ.

Three-day Kailash Yatra starts with limited number of devotees in J-Ks Bhaderwah

2021ರ ಚುಟುಕು ಯಾತ್ರೆ
2100 ಕ್ಕೂ ಹಳೆಯದಾದ ವಾಸುಕಿ ನಾಗ ದೇಗುಲದಿಂದ ಛಾರಿ ಮುಬಾರಕ್ ಧರ್ಮದಂಡ(holy mace)ವನ್ನು ಗಾಥಾದಿಂದ ತೆಗೆದುಕೊಂಡು ಯಾತ್ರೆಗೆ ಚಾಲನೆ ನೀಡಲಾಗಿದ್ದು, ಭಾದರ್ವಾಹ್ ನಲ್ಲಿರುವ ಧೇರಾದ ವಾಸುಕಿ ನಾಗ ದೇಗುಲದಿಂದ ಮತ್ತೊಂದು ಧರ್ಮ ದಂಡ ಸಂಗ್ರಹಿಸಲಾಗಿದೆ. ಶಾಸಕರಾದ ನರೇಶ್ ಕುಮಾರ್ ಗುಪ್ತಾ, ಹಿರಿಯ ಮುಖಂಡ ಮಸ್ತ್ ನಾಥ್ ಯೋಗಿ ಅವರು ವಾಸುಕಿ ಧೇರಾದಲ್ಲಿ ಸಾಂಪ್ರದಾಯಿಕ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಭಾರಿ ಬಿಗಿ ಬಂದೋಬಸ್ತ್ ನಡುವೆ ಧರ್ಮದಂಡವನ್ನು ಹೊತ್ತ ಪುಟ್ಟ ತಂಡವೊಂದು ಯಾತ್ರೆ ಆರಂಭಿಸಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಹೇಳಿದರು.

ಸ್ಥಳೀಯರ ನಂಬಿಕೆಯಂತೆ, ಪರಮಶಿನ ಮೂಲ ವಾಸಸ್ಥಾನವೇ ಕೈಲಾಶ್ ಕುಂಡ್. ನಂತರ ಹಿಮಾಚಲ ಪ್ರದೇಶದ ಭಾರ್ಮೌರ್ ನ ಮನ್ಮಹೇಶ್ ಎಂಬಲ್ಲಿಗೆ ತೆರಳುವ ಮುನ್ನ ಕೈಲಾಶ್ ಕುಂಡ್ ಜವಾಬ್ದಾರಿಯನ್ನು ವಾಸುಕಿ ನಾಗ್ ಗೆ ವಹಿಸಿದನು. ಶ್ರಾವಣ ಮಾಸದ ಹುಣ್ಣಿಮೆಯಿಂದ 14 ದಿನಗಳಲ್ಲಿ ಯಾತ್ರೆ ಆರಂಭವಾಗಲಿದ್ದು, 21 ಕಿಮೀಗಳ ಕೈಲಾಶ ಪರ್ವತ ಪರಿಕ್ರಮದ ನಂತರ ಪವಿತ್ರ ಸರೋವರವನ್ನು ಕಾಣಬಹುದಾಗಿದೆ. ಹಿಮಾಚ್ಛಾದಿತ ಪ್ರದೇಶದ ಅತ್ಯಂತ ತಣ್ಣಗಿರುವ ಹಿಮ ನೀರಿನಲ್ಲಿ ಮುಳುಗೆದ್ದರೆ ಸಕಲ ಪಾಪಗಳಿಂದ ಮುಕ್ತರಾಗಿ ಶಿವನ ಕೃಪೆಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+