ಭಾರತ ವಿರೋಧಿ ಮಾಲ್ಡೀವ್ಸ್‌ಗೆ ತಕ್ಕ ಪಾಠ: ನಾಯಿ ಬಾಲ ಡೊಂಕು, ಮಾಲ್ಡೀವ್ಸ್ ಬುದ್ಧಿ ಮಂಕು!
ಭಾರತ ಶಾಂತ ಮೂರ್ತಿಯಂತೆ ತನ್ನ ಅಕ್ಕಪಕ್ಕದ ದೇಶಗಳ ಜೊತೆ ಉತ್ತಮವಾಗಿ ಸಂಬಂಧ ಹೊಂದಲು ಪ್ರಯತ್ನ ಮಾಡುತ್ತದೆ. ಆದ್ರೆ ಭಾರತದ ಶತ್ರು ದೇಶಗಳು ಅಕ್ಕಪಕ್ಕದ ದೇಶಗಳಿಗೆ ಕಿವಿ ಊದಿ ವಾತಾವರಣ ಹಾಳು ಮಾಡುತ್ತಿವೆ. ಇದೇ ರೀತಿ ಮಾಲ್ಡೀವ್ಸ್ ಕೂಡ ಭಾರತ ವಿರೋಧಿ ಹಣೆಪಟ್ಟಿ ಕಟ್ಟಿಕೊಂಡಿದೆ. ಹೀಗಿದ್ದಾಗ ಸಂಬಂಧ ಸರಿಯಾಗುತ್ತಿದೆ ಎಂಬ ಮಾತು ಕೇಳಿಬರುವ ಸಮಯದಲ್ಲೇ, ಮಾಲ್ಡೀವ್ಸ್ ಮತ್ತೆ ತನ್ನದು ನಾಯಿ ಬಾಲದಂತೆ ಇರುವ ಬುದ್ಧಿ ಅನ್ನೋದನ್ನ ತೋರಿಸಿದೆ. ಇದೀಗ ನಾಯಿ ಬಾಲದ ಬುದ್ಧಿಯ ಮಾಲ್ಡೀವ್ಸ್‌ಗೆ ಭಾರತ ತಕ್ಕ ಉತ್ತರ ನೀಡಿದೆ.
ಹೌದು, ಭಾರತ ಇತರ ದೇಶಗಳ ಮೇಲೆ ಬೆದರಿಕೆಯ ಹಾಕುತ್ತಿದೆ ಎಂದು ಮಾಲ್ಡೀವ್ಸ್ ಪರವಾಗಿ ಹಾಗೂ ಭಾರತದ ವಿರುದ್ಧ ಕೇಳಿಬಂದ ಆರೋಪಕ್ಕೆ ಭಾರತ ಸರಿಯಾಗಿ ತಿರುಗೇಟು ನೀಡಿದೆ. ಅದರಲ್ಲೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ಮಾಲ್ಡೀವ್ಸ್ ದೇಶದ ಅರೆಬೆಂದ ರಾಜಕೀಯ ನಾಯಕರಿಗೆ & ಆರೋಪ ಮಾಡುವವರಿಗೆ ಮುಟ್ಟಿ ಮುಟ್ಟಿ ನೋಡಿಕೊಳ್ಳುವ ರೀತಿ ಉತ್ತರ ನೀಡಿದ್ದಾರೆ. ಈ ಮೂಲಕ ಮೊದಲೇ ಧಗಧಗಿಸಿದ್ದ ಭಾರತ & ಮಾಲ್ಡೀವ್ಸ್ ಸಂಬಂಧಕ್ಕೆ ಮತ್ತಷ್ಟು ಕಿಚ್ಚು ಬಿದ್ದಂತಾಗಿದೆ. ಹಾಗಾದರೆ ಮಾಲ್ಡೀವ್ಸ್ ಪರವಾಗಿ ಮಾತನಾಡಿದವರಿಗೆ ಈಗ ಭಾರತ ಕೊಟ್ಟ ತಿರುಗೇಟು ಏನು?

ಸಾವಿರಾರು ಕೋಟಿ ಕೊಟ್ಟಿದೆ ಭಾರತ
ಅಷ್ಟಕ್ಕೂ ಭಾರತ ಇತರ ದೇಶಗಳ ಮೇಲೆ ಬೆದರಿಕೆ ಹಾಕುತ್ತಿದೆ ಎಂಬ ಶತ್ರು ದೇಶಗಳ ಆರೋಪಕ್ಕೆ ಭಾರತ ಸರಿಯಾಗಿ ತಿರುಗೇಟು ನೀಡಿದೆ. ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಖಡಕ್ ತಿರುಗೇಟು ನೀಡಿದ್ದಾರೆ. ಬೆದರಿಸುವ ದೇಶವಾಗಿದ್ದರೆ ನೆರೆ ದೇಶಗಳಿಗೆ ಕಷ್ಟ ಬಂದಾಗ, ಸುಮಾರು 40 ಸಾವಿರ ಕೋಟಿ ರೂಪಾಯಿ ನೆರವು ಕೊಡುತ್ತಿರಲಿಲ್ಲ ಎಂದಿದ್ದಾರೆ ವಿದೇಶಾಂಗ ಸಚಿವರು. ಈ ಮೂಲಕ ಭಾರತ ವಿರೋಧಿ ಮಾಲ್ಡೀವ್ಸ್ ರಾಜಕೀಯ ನಾಯಕರಿಗೆ ಸರಿಯಾಗಿ ಬುರುಡೆಗೆ ಬಿಸಿನೀರು ಕಾಯಿಸಿದೆ ಭಾರತ. ಸೋಷಿಯಲ್ ಮೀಡಿಯಾದಲ್ಲಿ ಇಂತಹ ಭಾರಿ ಗಂಭೀರ ಆರೋಪ ಕೇಳಿಬಂದಿತ್ತು.
ಭಾರತ ಜಗತ್ತಿಗೆ ಸಹಾಯ ಮಾಡುತ್ತಿದೆ
ಇದೀಗ ಭಾರತದ ವಿದೇಶಾಂಗ ಸಚಿವರು ಈ ಆರೋಪಗಳಿಗೆ ಉತ್ತರ ನೀಡಿದ್ದಾರೆ. ಹೀಗಾಗಿ, ಮಾಲ್ಡೀವ್ಸ್ ರಾಜಕೀಯ ನಾಯಕರು ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದ ಹೇಡಿಗಳ ಬಾಯಿ ಮುಚ್ಚಿದಂತೆ ಆಗಿದೆ. ನೀವು ಭಾರತವನ್ನು ಬೆದರಿಕೆ ಹಾಕುವ ದೇಶ ಎಂದು ಪರಿಗಣಿಸುವುದಾದರೆ ತನ್ನ ನೆರೆಹೊರೆ ದೇಶಗಳು ಸಂಕಷ್ಟಕ್ಕೆ ಸಿಲುಕಿದಾಗ 4.5 ಬಿಲಿಯನ್ ಡಾಲರ್ ನೆರವು ಒದಗಿಸಲ್ಲ ಎಂದಿದ್ದಾರೆ ವಿದೇಶಾಂಗ ಸಚಿವರು.

ಕೋವಿಡ್ ಇದ್ದಾಗಲೂ ಇತರ ದೇಶಗಳಿಗೆ ಲಸಿಕೆ ಸರಬರಾಜು ಮಾಡುವುದಿಲ್ಲ. ಬೇರಾವುದೋ, ದೇಶದಲ್ಲಿ ಯುದ್ಧ ನಡೆದರೆ ತಮ್ಮ ಹಿತಾಸಕ್ತಿ ಮೀರಿ ಆಹಾರ, ಇಂಧನ, ರಸಗೊಬ್ಬರ ಪೂರೈಕೆ ಮಾಡುವುದಿಲ್ಲ ಎಂದಿದ್ದಾರೆ. ಈ ಮೂಲಕವಾಗಿ ಭಾರತ ಇತರ ದೇಶಗಳಿಗೆ ಮಾಡುತ್ತಿರುವ ಸಹಾಯವನ್ನು ಈಗ ಭಾರತದ ವಿದೇಶಾಂಗ ಸಚಿವರು ನೆನಪು ಮಾಡಿದ್ದಾರೆ. ಈ ಮೂಲಕ ಭಾರತದ ಶತ್ರುಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ.











Click it and Unblock the Notifications