Thiruvonam Bumper Lottery 2024: ಕೇರಳದ ಬಂಪರ್ ಲಾಟರಿ ಡ್ರಾನಲ್ಲಿ 25 ಕೋಟಿ ರೂಪಾಯಿ ಗೆದ್ದ ವ್ಯಕ್ತಿ ಯಾರು ಗೊತ್ತೇ?
ಕೇರಳ ಸರ್ಕಾರ ತಿರುವೋಣಂ ಲಾಟರಿ ಟಿಕೆಟ್‌ನ ಬಹುಮಾನ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯಲ್ಲಿರುವ ಎನ್‌ಜಿಆರ್ ಲಾಟರಿ ಅಂಗಡಿಯಲ್ಲಿ ಮಾರಾಟವಾದ 'ಟಿಜಿ 434222' ಟಿಕೆಟ್ ನಂಬರ್‌ಗೆ ಬಂಪರ್ ಬಹುಮಾನ ರೂಪದಲ್ಲಿ 25 ಕೋಟಿ ರೂಪಾಯಿ ನೀಡಲಾಗುತ್ತಿದೆ. ಈ ಬಹುಮಾನ ಮೈಸೂರು ಮೂಲದ ನಾಗರಾಜು ಅವರಿಗೆ ಲಭಿಸಿದೆ.
ಹೌದು... ಒಂದು ತಿಂಗಳ ಹಿಂದೆ ಈ ಲಾಟರಿ ಟಿಕೆಟ್ ಮಾರಾಟವಾಗಿತ್ತು. ಇದನ್ನು ಮೈಸೂರು ಮೂಲದ ನಾಗರಾಜು ಖರೀದಿ ಮಾಡಿದ್ದರು. ನಾಗರಾಜು ಅವರು 15 ವರ್ಷಗಳಿಂದ ಲೇಬರ್ ಕೆಲಸ ಮಾಡುತ್ತಿದ್ದಾರೆ. ತಿಂಗಳ ಹಿಂದೆ ಅವರು ಲೇಬರ್ ಕೆಲಸ ಮಾಡಲು ವಯನಾಡಿಗೆ ಹೋಗಿದ್ದರು. ಈ ವೇಳೆ ಲಾಟರಿ ಟಿಕೆಟ್ ಪಡೆದುಕೊಂಡಿದ್ದರು. ಅವರಿಗೆ ಲಾಟರಿ ಕಮಿಷನ್ ಆಗಿ 2.5 ಕೋಟಿ ರೂಪಾಯಿ ಸಿಗಲಿದೆ.

ಇದರಿಂದಾಗಿ ದಿಢೀರ್ ಶ್ರೀಮಂತರಾಗುವ ಅದೃಷ್ಟವನ್ನು ನಾಗರಾಜು ಪಡೆದುಕೊಂಡಿದ್ದಾರೆ. ಇಂದು ಸಂಜೆ ನಾಲ್ಕು ಗಂಟೆಗೆ ಪ್ರತಿ ವರ್ಷದಂತೆ ತಿರುವೋಣಂ ಲಾಟರಿಯ ಲಕ್ಕಿ ಡ್ರಾ ನಡೆಯಿತು. ಬಳಿಕ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಈ ಬಾರಿ 7,135,938 ಲಾಟರಿ ಟಿಕೆಟ್‌ಗಳು ಮಾರಾಟವಾಗಿವೆ. ಅತಿ ಹೆಚ್ಚು ಟಿಕೆಟ್‌ಗಳು ಪಾಲಕ್ಕಾಡ್ ಜಿಲ್ಲೆಯಲ್ಲಿ ಮಾರಾಟವಾಗಿವೆ. ತಿರುವನಂತಪುರದಲ್ಲಿ 9,46,260 ಟಿಕೆಟ್‌ಗಳು ಮಾರಾಟವಾಗಿವೆ. ತ್ರಿಶೂರ್‌ನಲ್ಲಿ 8,61,000 ಟಿಕೆಟ್‌ಗಳು ಮಾರಾಟವಾಗಿವೆ.
ಲಾಟರಿ ಚೀಟಿಗಳ ಮೇಲೆ ಚಿತ್ರಿಸಿದ ಸಂಖ್ಯೆಗಳ ಆಧಾರದ ಮೇಲೆ ಭಾಗವಹಿಸುವವರು ಗೆಲ್ಲುವ ಆಟ ಇದಾಗಿದೆ. ಈ ಲಾಟರಿ ಆಟದೊಂದಿಗೆ ಹಲವಾರು ಜನ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಾರೆ. ಮಾರಾಟಗಾರರಿಂದ 500 ರೂಪಾಯಿಗೆ ಟಿಕೆಟ್ ಖರೀದಿಸಿದರೆ ಅದರ ಮೇಲೆ ಇರುವ ನಂಬರ್ ಘೋಷಣೆ ವೇಳೆ ಇದ್ದರೆ ಆ ಟಿಕೆಟ್ ಖರೀದಿದಾರ ವಿಜೇತರಾಗುತ್ತಾರೆ.
ವಿಜೇತರಿಗೆ ಮೂರನೇ ಬಹುಮಾನಗಳು ಘೋಷಣೆಯಾದ ಬಳಿಕ 20 ಮಂದಿಗೆ ಸಮಾಧಾನಕರ ಬಹುಮಾನವಾಗಿ ತಲಾ 5 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. 3ನೇ ಬಹುಮಾನ ಗೆಲ್ಲುವ 20 ಮಂದಿಗೆ ತಲಾ 50 ಲಕ್ಷ ರೂಪಾಯಿಗಳನ್ನು ನೀಡಿದರೆ, 2ನೇ ಬಹುಮಾನ ಪಡೆಯುವ 20 ಮಂದಿಗೆ ತಲಾ 1 ಕೋಟಿ ರೂಪಾಯಿ ಹಾಗೂ ಮೊದಲ ಬಹುಮಾನ ಗೆಲ್ಲುವ ಒಬ್ಬರಿಗೆ 25 ಕೋಟಿ ರೂ. ನೀಡಲಾಗುತ್ತದೆ.
ಇನ್ನೂ 4ಮೇ ಬಹುಮಾನವಾಗಿ 5 ಲಕ್ಷ, 5ನೇ ಬಹುಮಾನವಾಗಿ 2 ಲಕ್ಷ, 6ನೇ ಬಹುಮಾನವಾಗಿ 5 ಸಾವಿರ ರೂ, 7ನೇ ಬಹುಮಾನವಾಗಿ 1,000 ರೂಪಾಯಿ, 8ನೇ ಬಹುಮಾನ 1 ಸಾವಿರ, 9ನೇ ಬಹುಮಾನವಾಗಿ 500 ರೂ.ಗಳನ್ನು ನೀಡಲಾಗುತ್ತದೆ.












Click it and Unblock the Notifications