ಐದು ವರ್ಷದಲ್ಲಿ 914 ಬಾಂಬ್ ದಾಳಿಗಳು ಭಾರತದಲ್ಲಿ ಆಗಿವೆ: ರಾಹುಲ್ ಟ್ವೀಟ್
ನವದೆಹಲಿ, ಮೇ 03: ಭಾರತದಲ್ಲಿ ಕಳೆದ ಐದು ವರ್ಷದಲ್ಲಿ 914 ಬಾಂಬ್ ದಾಳಿಗಳು ಸಂಭವಿಸಿವೆ ಮೋದಿ ಅವರು ಕಿವಿಗೊಟ್ಟು ಕೇಳಿಲ್ಲವಷ್ಟೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಪುಲ್ವಾಮಾ, ಪಠಾಣ್ಕೋಟ್, ಉರಿ, ಗಡ್ಚಿರೋಲಿ ಸೇರಿದಂತೆ ಒಟ್ಟು 914 ದೊಡ್ಡ ಪ್ರಮಾಣದ ಬಾಂಬ್ ದಾಳಿಗಳು 2014 ರಿಂದ ಈಚೆಗೆ ಆಗಿವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನಮ್ಮ ಅವಧಿಯಲ್ಲಿ ಯಾವುದೇ ಬಾಂಬ್ ದಾಳಿ ಆಗಿಲ್ಲವೆಂದು ನರೇಂದ್ರ ಮೋದಿ ಅವರು ಸಮಾವೇಶವೊಂದರಲ್ಲಿ ಹೇಳಿದ್ದರ ವರದಿಯನ್ನು ಟ್ವೀಟ್ಗೆ ಅಂಟಿಸಿರುವ ರಾಹುಲ್ ಗಾಂಧಿ ಮೋದಿ ಅವರು ಕಿವಿಗೊಟ್ಟು ಕೇಳಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

ಸೌತ್ ಏಷ್ಯಾ ಟೆರರಿಸಂ ಪೋರ್ಟಲ್ ನೀಡುವ ಮಾಹಿತಿ ಪ್ರಕಾರ ಕಳೆದ ಐದು ವರ್ಷದಲ್ಲಿ ಭಾರತದಲ್ಲಿ 942 ಬಾಂಬ್ ಬ್ಲಾಸ್ಟ್ಗಳಲು ಸಂಭವಿಸಿವೆ ಅವುಗಳಲ್ಲಿ 451 ಮಂದಿ ಸಾವನ್ನಪ್ಪಿದ್ದಾರೆ, 1589 ಮಂದಿ ಗಾಯಾಳುಗಳಾಗಿದ್ದಾರೆ.
ಭಾರತದ ಎನ್ಎಸ್ಜಿ ಮತ್ತು ರಾಷ್ಟ್ರೀಯ ಬಾಂಬ್ ದಾಳಿ ದತ್ತಾಂಶ ಸಂಗ್ರಹ ಕೇಂದ್ರ 2016 ರಲ್ಲಿ ಒದಗಿಸಿದ್ದ ಮಾಹಿತಿ ಪ್ರಕಾರ, 2016ರಲ್ಲಿಯೇ 112 ಜನ ಬಾಂಬ್ ದಾಳಿಗಳಿಂದ ಹತರಾಗಿದ್ದರು ಮತ್ತು 479 ಮಂದಿ ಗಾಯಾಳುಗಳಾಗಿದ್ದರು.
ಈ ಎಲ್ಲ ಮಾಹಿತಿಗಳನ್ನು ಒಳಗೊಂಡ ಲೇಖನವೊಂದನ್ನು ರಾಹುಲ್ ಗಾಂಧಿ ಅವರು ತಮ್ಮ ಟ್ವೀಟ್ನಲ್ಲಿ ಸೇರಿಸಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications